ಮನಾಲಿಯ ಪ್ರವಾಸೋದ್ಯಮಕ್ಕೆ ಹೊಸ ಭಾಷ್ಯ ಬರೆಯಲಿರುವ ರೋಹ್ಟಾಗ್‌ ರೋಪ್‌ವೇ

0

ಅಟಲ್‌ ಸುರಂಗ ಲೋಕಾರ್ಪಣೆ ಬಳಿಕ ಹಿಮಾಚಲ ಪ್ರದೇಶದ ಮತ್ತೂಂದು ಪ್ರಮುಖ ಪ್ರವಾಸಿ ಆಕರ್ಷಣೆಯಾಗಲು ಸಜ್ಜಾಗಿದ್ದು, ಅದರ ಮಾದರಿ ಸಿದ್ಧವಾಗಿದೆ.

ಹೌದು ಅರಣ್ಯ ಸಚಿವಾಲಯದ ಅನುಮೋದನೆ ಪಡೆದ ಕೂಡಲೇ ರೋಹ್ಟಾಗ್‌ ರೋಪ್‌ವೇ ನಿರ್ಮಾಣ ಕಾರ್ಯ ಪ್ರಾರಂಭವಾಗಲಿದ್ದು, ಖಾಸಗಿ ಸಾರ್ವಜನಿಕ ಸಹಭಾಗಿತ್ವ (ಪಿಪಿಪಿ) ಮಾದರಿ ಬಳಸಿಕೊಂಡು 9 ಕಿ.ಮೀ. ಉದ್ದದ ರೋಪ್‌ವೇಯನ್ನು ನಿರ್ಮಾಣ ಮಾಡಲಾಗುತ್ತಿದೆ.

450 ಕೋಟಿ ರೂ. ವೆಚ್ಚ
ಭಾರತದ ಬೃಹತ್‌ ರೂಪ್‌ವೇ ಆಗಿರುವ ಇದನ್ನು ಸುಮಾರು 450 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸುತ್ತಿದ್ದು, ಮೂರು ಹಂತಗಳಲ್ಲಿ ಪೂರ್ಣಗೊಳಲಿದೆ. ಈ ಮಹತ್ವಾಕಾಂಕ್ಷೆಯ ರೋಪ್‌ವೇ ನಿರ್ಮಾಣಕ್ಕೆ ರಾಜ್ಯ ಸರಕಾರವು ಬಹುತೇಕ ಎಲ್ಲ ವಿಧಾನಗಳನ್ನು ಪೂರ್ಣಗೊಳಿಸಿದೆ.

ಪ್ರವಾಸೋದ್ಯಮದ ಬೆಳವಣಿಗೆ ಸಹಕಾರಿ
ಪ್ರಾರಂಭಿಕವಾಗಿ ಈ ಪ್ರವಾಸಿ ತಾಣವು ಹಿಮಾಚಲ ಪ್ರದೇಶದ ಕೋತಿ ಗ್ರಾಮದಿಂದ ಆರಂಭಗೊಂಡು ಅಲ್ಲಿಂದ ಮೊದಲು ಗುಲಾಬಾ ಮತ್ತು ಅನಂತರ ಗುಲಾಬ್‌ನಿಂದ ಮಾಹಿರ್‌ ತನಕ ನಿರ್ಮಿಸಲಾಗುತ್ತದೆ. 9 ಕಿ.ಮೀ. ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ ಈ ರೋಪ್‌ವೇ ಮಾಹಿರ್‌ನಿಂದ ರೋಹ್ಟಾಗ್‌ ಪಾಸ್‌ಗೆ ಸಂಪರ್ಕ ಕಲ್ಪಿಸಿ ಕೊಡಲಿದ್ದು, ಈ ಹೊಸ ಯೋಜನೆಯು ಕುಲ್ಲು ಮನಾಲಿಯ ಪ್ರವಾಸೋದ್ಯಮದ ಬೆಳವಣಿಗೆಗೆ ಸಹಕಾರಿಯಾಗಲಿದೆ. ಈ ರೋಪ್‌ವೇ ಭಾರತೀಯ ಮತ್ತು ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವ ಕೇಂದ್ರವಾಗಲಿದೆ ಎಂದು ಊಹಿಸಲಾಗಿದೆ.

50 ಕಿ.ಮೀ ದೂರವನ್ನು 45 ನಿಮಿಷಗಳಲ್ಲಿ ತಲುಪಬಹುದು
ರೋಹ್ಟಾಗ್‌ ಪಾಸ್‌ ಪ್ರತಿ ವರ್ಷ ಚಳಿಗಾಲದಲ್ಲಿ ಸುಮಾರು 20ರಿಂದ 25 ಅಡಿ ಹಿಮಪಾತ ಬಿಳುತ್ತದೆ. ಇದು ಸಾಮಾನ್ಯ ಸಂಚಾರಕ್ಕೆ ಅಡ್ಡಿಪಡಿಸುತ್ತದೆ. ಈ ಮಾರ್ಗ ನಾಲ್ಕು ತಿಂಗಳವರೆಗೆ ಮುಚ್ಚಲ್ಪಡುತ್ತದೆ. ರೋಹ್ಟಾಗ್‌ ಪಾಸ್‌ನಲ್ಲಿ ಡಿಸೆಂಬರ್‌ನಿಂದ ಮಾರ್ಚ್‌ ವರೆಗೆ ಪ್ರವಾಸೋದ್ಯಮಕ್ಕೆ ಅಡಚಣೆಯಾಗಿದೆ. ಆದರೆ ಈಗ ಈ ರೋಪ್‌ವೇ ಪ್ರವಾಸಿಗರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಲಿದ್ದು, ಪ್ರವಾಸೋದ್ಯಮ ವ್ಯವಹಾರವು ವೇಗಗೊಳಿಸಲಿದೆ. ಜತೆಗೆ ರೋಪ್‌ವೇ ನಿರ್ಮಾಣದೊಂದಿಗೆ ರೋಹ್ಟಾಗ್‌ ಮತ್ತು ಮನಾಲಿ ನಡುವಿನ 50 ಕಿ.ಮೀ ದೂರವನ್ನು 45 ನಿಮಿಷಗಳಲ್ಲಿ ತಲುಪಬಹುದಾಗಿದೆ.

LEAVE A REPLY

Please enter your comment!
Please enter your name here