ಮುಕ್ತ ವಿವಿ ಕೋರ್ಸ್​ಗಳ ಪ್ರವೇಶಕ್ಕೆ ದಂಡ ರಹಿತವಾಗಿ 10ಕ್ಕೆ ಕೊನೇದಿನ

0

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ವಿವಿಧ ಕೋರ್ಸ್​​ಗಳ ಈ ಶೈಕ್ಷಣಿಕ ಸಾಲಿನ (2020-21) ಜುಲೈ ತಿಂಗಳ ಪ್ರವೇಶಾತಿ ಈಗಾಗಲೇ ಆರಂಭವಾಗಿದ್ದು, ದಂಡ ರಹಿತವಾಗಿ ಪ್ರವೇಶ ಪಡೆಯಲು ಅಕ್ಟೋಬರ್ 10ಕ್ಕೆ ಕೊನೇ ದಿನವಾಗಿರುತ್ತದೆ ಎಂದು ವಿವಿಯ ಪ್ರಾದೇಶಿಕ ನಿರ್ದೇಶಕ ಗಿರೀಶ್​ ಎಚ್​.ಎನ್​. ತಿಳಿಸಿದ್ದಾರೆ.

ಸ್ನಾತಕ/ಸ್ನಾತಕೋತ್ತರ ಕೋರ್ಸ್​ಗಳಾದ ಬಿ.ಎ, ಬಿಕಾಂ, ಬಿಲಿಬ್​ ಐಎಸ್​ಸಿ, ಎಂಎ, ಎಂಕಾಂ. ಎಂಎ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ, ಎಂಲಿಬ್​ಐಎಸ್​ಸಿ, ಎಂ.ಎಸ್ಸಿ, ಎಂಬಿಎ, ಪಿಜಿ ಡಿಪ್ಲೊಮಾ, ಡಿಪ್ಲೊಮಾ, ಸರ್ಟಿಫಿಕೇಟ್ ಕೋರ್ಸ್​ಗಳ ಪ್ರವೇಶಾತಿ ಚಾಲ್ತಿಯಲ್ಲಿದೆ. ಪ್ರಥಮ ವರ್ಷದ ಕೋರ್ಸ್​ಗಳಿಗೆ ದಂಡ ರಹಿತವಾಗಿ ಪ್ರವೇಶ ಪಡೆಯಲು ಅಕ್ಟೋಬರ್​ 10 ಕೊನೇ ದಿನವಾಗಿರುತ್ತದೆ.

ಈ ಕೋರ್ಸ್​ಗಳಿಗೆ 100 ರೂಪಾಯಿ ದಂಡ ಶುಲ್ಕದೊಂದಿಗೆ ಅಕ್ಟೋಬರ್ 20ರ ತನಕ ಪ್ರವೇಶ ಪಡೆಯಬಹುದು. ಅದೇ ರೀತಿ, 200 ರೂಪಾಯಿ ದಂಡ ಶುಲ್ಕದೊಂದಿಗೆ ಪ್ರವೇಶ ಪಡೆಯಲು ಅಕ್ಟೋಬರ್ 29ರ ತನಕ ಅವಕಾಶವಿದೆ. ಹೆಚ್ಚಿನ ಮಾಹಿತಿಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ವೆಬ್​ಸೈಟ್​ https://ksoumysuru.ac.in/ ಗಮನಿಸಬಹುದು ಅಥವಾ ಪ್ರಾದೇಶಿಕ ಕಚೇರಿಯ ದೂರವಾಣಿ ಸಂಖ್ಯೆ 080-26603664 ಗೆ ಕರೆ ಮಾಡಬಹುದು ಎಂದು ಗಿರೀಶ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here