ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ನೈಜೆರಿಯಾ ಪ್ರಜೆಗಳು ಸೇರಿ ಐವರು ಅರೆಸ್ಟ್, ಗಾಂಜಾ, ಕೊಕೈನ್ ವಶ

0

ನಗರದಲ್ಲಿ ಮಾದಕ ವಸ್ತು ಗಾಂಜಾ ನಿರ್ಮೂಲನೆಗಾಗಿ ಕಾರ್ಯಾಚರಣೆ ಕೈಗೊಂಡಿರುವ ಉತ್ತರ ವಿಭಾಗದ ಪೊಲೀಸರು ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ನೈಜೀರಿಯಾ ಮೂಲದ ಇಬ್ಬರು ಪ್ರಜೆಗಳು ಸೇರಿದಂತೆ ಐವರನ್ನು ಬಂಧಿಸಿ ಗಾಂಜಾ, ಕೊಕೈನ್ ವಶಪಡಿಸಿಕೊಂಡಿದ್ದಾರೆ.

# ರಾಜಗೋಪಾಲನಗರ:
ವ್ಯಾಪಾರ ನಿಮಿತ್ತ ಭಾರತಕ್ಕೆ ಬಂದು ತಮಿಳುನಾಡಿನಿಂದ ಟೀಶರ್ಟ್ ಮತ್ತು ಜೀನ್ಸ್ ಪ್ಯಾಂಟ್‍ಗಳನ್ನು ಖರೀದಿಸಿ ಬೆಂಗಳೂರಿಗೆ ತಂದು ಬಟ್ಟೆ ಜೊತೆಗೆ ಗಾಂಜಾ ಮಾರಾಟ ಮಾಡುತ್ತಿದ್ದ ನೈಜೀರಿಯಾ ದೇಶದ ಥಾಮಸ್(46) ಮತ್ತು ಇಕೆಚುಕ್ವಾ ಡೆನಿಯ್ಲ(39)ನನ್ನು ರಾಜಗೋಪಾಲನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 2.26 ಕೆಜಿ ಗಾಂಜಾ, 6 ಗ್ರಾಂ ಕೊಕೇನ್, ಕೃತ್ಯಕ್ಕೆ ಬಳಸಿದ ಬೈಕ್, ತೂಕದ ಯಂತ್ರ, 840 ರೂ. ವಶಪಡಿಸಿಕೊಂಡಿದ್ದಾರೆ.

ಪೀಣ್ಯ 2ನೇ ಹಂತ, ಜಿಕೆಡಬ್ಲಯೂ ಲೇಔಟ್‍ನಲ್ಲಿ ಮೂವರು ಮಾದಕ ವಸ್ತು ಕೊಕೇನ್ ಮತ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಪಿಎಸ್‍ಐ ರಾಘವೇಂದ್ರ ಉಪರಿ ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡುತ್ತಿದ್ದಾಗ ಆರೋಪಿಗಳು ಪೊಲೀಸರನ್ನು ಕಂಡು ಓಡಲಾರಂಭಿಸಿದ್ದಾರೆ.

ಪೊಲೀಸರು ಆರೋಪಿಗಳನ್ನು ಬೆನ್ನಟ್ಟಿ ಹಿಡಿದು ಆರೋಪಿಗಳ ವಶದಲ್ಲಿದ್ದ ಬ್ಯಾಗನ್ನು ಪರಿಶೀಲಿಸಲಾಗಿದೆ, ಬ್ಯಾಗ್‍ನಲ್ಲಿ ಗಾಂಜಾ ಮತ್ತು ಕೊಕೇನ್ ಎಂಬ ಮಾದಕವಸ್ತು ಇರುವುದು ಕಂಡುಬಂದಿದೆ. ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಸದರಿಯವರುಗಳು ಮೂಲತಃ ನೈಜೀರಿಯಾ ದೇಶದವರಾಗಿದ್ದು, ವ್ಯಾಪಾರಕ್ಕಾಗಿ ಭಾರತಕ್ಕೆ ಬಂದು ತಮಿಳುನಾಡಿನಿಂದ ಟೀಶರ್ಟ್, ಜೀನ್ಸ್ ಪ್ಯಾಂಟ್‍ಗಳನ್ನು ಖರೀದಿಸಿ

ತಂದು ಬೆಂಗಳೂರಿನಲ್ಲಿ ಮಾರಾಟ ಮಾಡುವಾಗ ರಾಜೇಶ್ ಎಂಬಾತ ಪರಿಚವಾಗಿ ಆತನಿಂದ ಗಾಂಜಾ ಪಡೆದುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡಿ ಸುಲಭವಾಗಿ ಹೆಚ್ಚಿನ ಹಣವನ್ನು ಗಳಿಸುತ್ತಿದ್ದಾಗಿ ತನಿಖೆಯಿಂದ ತಿಳಿದುಬಂದಿರುತ್ತದೆ. ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ರಾಜೇಶ್ ಪತ್ತೆ ಕಾರ್ಯ ಪ್ರಗತಿಯಲ್ಲಿದೆ.

# ಪೀಣ್ಯ:
ಬಸ್ ನಿಲ್ದಾಣದ ಬಳಿ ಗಾಂಜಾ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಪೀಣ್ಯ ಠಾಣೆ ಪೊಲೀಸರು ಮಾರುವೇಷದಲ್ಲಿ ಹೋಗಿ ತಮಿಳುನಾಡು ಮೂಲದ ಸಂತೋಷ್ (22) ಮತ್ತು ನೆಲನದರನಹಳ್ಳಿಯ ಮಂಜುನಾಥ್(24)ನನ್ನು ಬಂಧಿಸಿ 2.3 ಕೆಜಿ ಗಾಂಜಾ ಮತ್ತುಒಂದು ಸಾವಿರ ಹಣ ವಶಪಡಿಸಿಕೊಂಡಿದ್ದಾರೆ.

ಠಾಣೆಯ ಪಿಎಸ್‍ಯ ರೇವಣ್ಣ ಸಿದ್ದಪ್ಪ ಹೂಗಾರ್ ಮತ್ತು ಸಿಬ್ಬಂದಿ ಗಸ್ತಿನಲ್ಲಿದಾಗ ಬಸವೇಶ್ವರ ಬಸ್ ನಿಲ್ದಾಣದ ಬಳಿ ಇಬ್ಬರು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಪಿಎಸ್‍ಯ ಮತ್ತು ಸಿಬ್ಬಂದಿ ಮಾರುವೇಷದಲ್ಲಿ ಸದರಿ ಸ್ಥಳಕ್ಕೆ ಹೋಗಿ ಗಾಂಜಾವನ್ನು ಖರೀದಿಸುವ ನೆಪದಲ್ಲಿ ಹೋಗಿ ಇಬ್ಬರನ್ನು ಬಂಧಿಸಿದ್ದಾರೆ.

ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಕೋಲಾರ ಜಿಲ್ಲೆ ಮಾಲೂರಿನ ಟಿವಿಎಸ್ ಫ್ಯಾಕ್ಟರಿ ಬಳಿ ಮೃತ್ಯುಂಜಯ ಎಂಬುವನಿಂದ ತಂದು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾಗಿ ತಿಳಿಸಿರುತ್ತಾರೆ. ಆರೋಪಿ ಸಂತೋಷ್ ಮತ್ತು ಮಂಜುನಾಥ್ ಎಂಬುವರು ಕೊರೊನಾದಿಂದ ಕೆಲಸವಿಲ್ಲದಿದ್ದರಿಂದ ಹಣಕ್ಕಾಗಿ ಈ ಕೃತ್ಯವೆಸಗುತ್ತಿರುವುದಾಗಿ ತಿಳಿಸಿರುತ್ತಾರೆ.

ಮತ್ತೊಬ್ಬ ಆರೋಪಿ ಮೃತ್ಯುಂಜಯ ವಿರುದ್ದ ಮಾಲೂರು ಪೊಲೀಸ್ ಠಾಣೆಯಲ್ಲಿ 2017ನೇ ಸಾಲಿನಲ್ಲಿ ಗೂಂಡಾ ಕಾಯ್ದೆಯಡಿ ಬಂಧಿಸಿ ಜೈಲು ಶಿಕ್ಷೆ ಅನುಭವಿಸಿ ಹೊರಬಂದು ಸಂತೋಷ್ ಮತ್ತು ಮಂಜುನಾಥ್ ಅವರಿಗೆ ಸುಲಭವಾಗಿ ಹಣ ಮಾಡುವ ಆಸೆ ತೋರಿಸಿ, ಈ ಕೃತ್ಯ ಮಾಡಿಸುತ್ತಿರುವುದಾಗಿ ತಿಳಿಸಿದ್ದಾನೆ.

# ಶ್ರೀನಿವಾಸಪುರ:
ದ್ವಿಚಕ್ರ ವಾಹನದಲ್ಲಿ ಗಾಂಜಾ ಮಾರಾಟ ಮಾಡಲು ಹೋಗುತ್ತಿದ್ದ ಸತ್ಯ(23) ಎಂಬಾತ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈತನಿಂದ 15 ಕೆಜಿ ಗಾಂಜಾ ಹಾಗೂ ಕಳ್ಳತನ ಮಾಡಿ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ವಶಪಡಿಸಿಕೊಳ್ಳುವಲ್ಲಿ ಶ್ರೀರಾಮುಪುರ ಪೊಲೀಸರು ಯಶಸ್ವಿಯಾಗಿದ್ದಾರೆ.

ಸೆ.14ರಂದು ಮಧ್ಯಾಹ್ನ 2.15 ಗಂಟೆ ಸುಮಾರಿನಲ್ಲಿ ಶ್ರೀರಾಮಪುರ ವ್ಯಾಫ್ತಿಯ ಓಕಳಿಪುರ ಮಾರ್ಗವಾಗಿ ಇಬ್ಬರು ದ್ವಿಚಕ್ರ ವಾಹನದಲ್ಲಿ ಗಾಂಜಾ ಮಾದಕ ವಸ್ತುವನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಾ ಹೊರಟಿರುತ್ತಾರೆಂದು ಬಂದ ಮಾಹಿತಿ ಆಧರಿಸಿ ಪಿಎಸ್‍ಐ ಗಿರೀಶ್ ನಾಯ್ಕ್ ಅವರ ತಂಡ ಕಾರ್ಯಪ್ರವರತ್ತರಾಗಿ ಒಬ್ಬನನ್ನು ಬಂಧಿಸಿದ್ದಾರೆ.

ಆರೋಪಿಯನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ವಿಶಾಖಪಟ್ಟಣನಿಂದ ವ್ಯಕ್ತಿಯೊಬ್ಬ ತನಗೆ ತಂದು ಕೊಡುತ್ತಿದ್ದು, ಮಾರಾಟ ಮಾಡಿ ಕೊಟ್ಟರೆ ಅದರಿಂದ ಬುರವ ಹಣದಲ್ಲಿ ಕಮೀಷನರ್ ನೀಡುತ್ತಿದುದು ಗೊತ್ತಾಗಿದೆ. ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಪತ್ತೆಕಾರ್ಯ ಮುಂದುವರೆದಿದ್ದು, ಈ ಪ್ರಕರಣದಲ್ಲಿ ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ.

LEAVE A REPLY

Please enter your comment!
Please enter your name here