ಮೂರು ಬಾರಿ ಕಳುವಾಯ್ತು ಬಿಯರ್‌ ಹಿಡಿದ ಹುಡುಗನ ಪೇಂಟಿಂಗ್‌! ಏನಿದರ ವಿಶೇಷತೆ?

0

ಪೇಂಟಿಂಗ್‌ ಎನ್ನುವುದು ಕೆಲವರಿಗೆ ಅದೇನೋ ಬಿಡಿಸಲಾರದ ನಂಟು. ಅದರಲ್ಲಿಯೂ ಪ್ರಸಿದ್ಧ ಕಲಾವಿದರ ಪೇಂಟಿಂಗ್‌ನಲ್ಲಿ ಅಡಗಿರುವ ಅಂಶಗಳು ಸಾಮಾನ್ಯ ಜನರಿಗೆ ತಿಳಿಯುವುದೇ ಇಲ್ಲ. ಆದರೆ ಕಲಾವಿದನ ಕಲ್ಪನೆಯಲ್ಲಿ ಮೂಡಿಬಂದಿರುವ ನಿಗೂಢ ಅರ್ಥವನ್ನು ಹೊಂದಿರುವ ಆ ಪೇಂಟಿಂಗ್‌ ಇನ್ನೊಬ್ಬ ಕಲಾವಿದನಿಗೆ ಮಾತ್ರ ಅರ್ಥವಾಗಲು ಸಾಧ್ಯ.

ಅಂಥದ್ದೇ ಒಂದು ಪೇಂಟಿಂಗ್‌ ಇದೀಗ ಭಾರಿ ಸುದ್ದಿ ಮಾಡುತ್ತಿದೆ. ಫ್ರಾನ್ಸ್‌ನಲ್ಲಿರುವ ಉಟ್ರೇಕ್ಟ್‌ನ ಲೀರ್‌ಡ್ಯಾಮ್ ಪಟ್ಟಣದ ವಸ್ತುಸಂಗ್ರಹಾಲಯದಲ್ಲಿ ಇರುವ ಈ ಪೇಂಟಿಂಗ್‌ ಇದೀಗ ಮೂರನೇ ಬಾರಿ ಕಳ್ಳತನವಾಗಿದೆ!

ಹೌದು. ಈ ಪೇಂಟಿಂಗ್‌ ಕಲಾಸಕ್ತರಿಗೆ ಅಷ್ಟು ಹುಚ್ಚುಹಿಡಿದಿದೆ. ಅಷ್ಟಕ್ಕೂ ಈ ಪೇಂಟಿಂಗ್‌ ರಚನೆ ಮಾಡಿರುವುದು ಕೆಲ ವರ್ಷ ಅಥವಾ ದಶಕಗಳ ಹಿಂದಲ್ಲ. ಬದಲಿಗೆ ಇದನ್ನು ರಚಿಸಿರುವುದು 1626ರಲ್ಲಿ! ಅಂದರೆ 394 ವರ್ಷಗಳ ಹಿಂದೆ ರಚಿಸಲಾಗಿದೆ ಈ ಪೇಂಟಿಂಗ್‌.
ಡಚ್‌ ಕಲಾವಿದ ಫ್ರಾನ್ಸ್ ಹಾಲ್ಸ್ ಎಂಬಾತ ರಚಿಸಿರುವ ಈ ಪೇಟಿಂಗ್‌ ಹೆಸರು ‘ಲಾಫಿಂಗ್ ಬಾಯ್ಸ್ ವಿತ್ ಎ ಮಗ್ ಆಫ್ ಬಿಯರ್’. ಇದರಲ್ಲಿ ಒಬ್ಬ ಹುಡುಗ ಬಿಯರ್‌ ಬಾಟಲಿಯನ್ನು ಹಿಡಿದು ಮುಖದಲ್ಲಿ ಮಂದಹಾಸ ಮೂಡಿಸಿಕೊಂಡಿರುವ ಚಿತ್ರವಿದೆಯಷ್ಟೇ.

ಸಾಮಾನ್ಯ ಜನರು ನೋಡಿದರೆ ಇದರಲ್ಲೇನಿದೆ ಎನ್ನಬಹುದು. ಆದರೆ ಈ ಪೇಂಟಿಂಗ್‌ ನಲ್ಲಿ ಜೀವನೋತ್ಸಾಹವಿದೆ, ಇದನ್ನು ನೋಡಿದರೆ ಎಂಥವರಿಗೂ ಜೀವನದಲ್ಲಿ ಉತ್ಸಾಹ ಮೂಡುತ್ತದೆ ಎನ್ನುವುದು ಕಲಾರಸಿಕರ ವಾದ.

ಇದೇ ಕಾರಣಕ್ಕೆ ಇದಾಗಲೇ ಇದು ಈ ಹಿಂದೆ ಎರಡು ಬಾರಿ ಕಳುವಾಗಿತ್ತು, ಇದೀಗ ಮೂರನೇ ಬಾರಿ ಕಳುವಾಗಿದೆ.

1988ರಲ್ಲಿ ಮೊದಲ ಬಾರಿಗೆ ಇದನ್ನು ಕಳ್ಳತನ ಮಾಡಲಾಗಿತ್ತು. ನಂತರ ಮೂರು ವರ್ಷಗಳ ಸತತ ಹುಡುಕಾಟದ ನಂತರ ಇದನ್ನು ಕಾರ್ಯಕ್ರಮವೊಂದರಲ್ಲಿ ಪ್ರದರ್ಶನಕ್ಕೆ ಇಟ್ಟಿರುವುದು ಪತ್ತೆಯಾಗಿ, ಅದನ್ನು ವಾಪಸ್‌ ತೆಗೆದುಕೊಳ್ಳಲಾಗಿತ್ತು.

ನಂತರ 2011ರಲ್ಲಿ ಮತ್ತೆ ಕಳುವಾಗಿತ್ತು. ಆಗಲೂ ಪೊಲೀಸರು ಇದನ್ನು ಕಷ್ಟಪಟ್ಟು ಹುಡುಕಿ ಪಡೆದುಕೊಂಡಿದ್ದರು. ಇದೀಗ ಇದನ್ನು ಹೊಫ್ಜೆ ವ್ಯಾನ್ ಏರ್ಡೆನ್ ವಸ್ತುಸಂಗ್ರಹಾಲಯದಲ್ಲಿ ಬಿಗಿ ಬಂದೋಬಸ್ತ್‌ನಲ್ಲಿ ಇಡಲಾಗಿದೆ. ಆದರೂ ವಸ್ತುಸಂಗ್ರಹಾಲಯದ ಹಿಂಬಾಗಿಲನ್ನು ಕಳ್ಳರು ಬಲವಂತವಾಗಿ ಒಡೆದು ಪೇಂಟಿಂಗ್‌ ಕಳುವು ಮಾಡಿಕೊಂಡು ಹೋಗಿದ್ದಾರೆ. ಇದೀಗ ಇದನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ನಿರತರಾಗಿದ್ದಾರೆ.

ಅಂದಹಾಗೆ ಕಲಾವಿದ ಫ್ರಾನ್ಸ್ ಹಾಲ್ಸ್ 1666ರಲ್ಲಿ ನಿಧನಹೊಂದಿದರು.

LEAVE A REPLY

Please enter your comment!
Please enter your name here