ಯೋಧರು ತಮ್ಮ ಸೇವಾ ನಿವೃತ್ತಿ ಹೊಂದಿ ತಾಲೂಕಿನ ಬಳಗಾನೂರ ಗ್ರಾಮಕ್ಕೆ ಆಗಮಿಸಿದ ಯೋಧರಿಗೆ ಭೋವಿ ಸಮಾಜದವತಿಯಿಂದ ಮೇರವಣಿಗೆ ಮೂಲಕ ಅದ್ದೂರಿಯಾಗಿ ಸ್ವಾಗತಿಸಿದರು.

0

ಸಿಂದಗಿ; ದೇಶದ ಗಡಿಯಲ್ಲಿ ತಮ್ಮ ಪ್ರಾಣವನ್ನೆ ಒತ್ತೆ ಇಟ್ಟು ಗಡಿಯನ್ನು ಕಾಯುತ್ತಿರುವುದರಿಂದಲೇ ನಾವು ದೇಶದ ಒಳಗೆ ನೆಮ್ಮದಿಯಿಂದ ಇದ್ದೇವೆ. ಅವರು ಗಡಿಯಲ್ಲಿ ರಕ್ಷಣೆ ಮಾಡಿದರೆ ಸಾಲದು ಇಂದು ನಾವೆಲ್ಲರು ಗಡಿವೊಳಗೆ ಇದ್ದು ದೇಶವನ್ನು ರಕ್ಷಿಸುವ ಸಂದಿಗ್ದ ಪರಿಸ್ಥಿತಿ ಬಂದಿದೆ ಎಂದು ಶಿಕ್ಷಕ ಶ್ರೀಶೈಲ ಮಂಜಾಳಕರ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಬಳಗಾನೂರ ಗ್ರಾಮದ ಯೋಧರು ತಮ್ಮ ಸೇವಾ ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಆಗಮಿಸಿದ ಅರ್ಜುನ ದೋತ್ರೆ, ಮೈಬೂಬಸಾಬ ಜಾಲವಾದಿ ಯೋಧರಿಗೆ ಭೋವಿ ಸಮಾಜದವತಿಯಿಂದ ಮೇರವಣಿಗೆ ಮೂಲಕ ಅದ್ದೂರಿಯಾಗಿ ಸ್ವಾಗತಿಸಿ ಮಾತನಾಡಿ, ಭಾರತ ದೇಶದ ಗಡಿ ಸುರಕ್ಷಾ, ನಕ್ಸಲೈಟ್ ಎರಿಯಾದಲ್ಲಿ ಜನರ ಆಂತರಿಕ ಸುರಕ್ಷಾದಂತಹ ಡ್ಯೂಟಿ ಹಗಲು-ರಾತ್ರಿ ಎನ್ನದೆ ಅತ್ಯಂತ ಕಠಿಣ ಪರಿಶ್ರಮದ ಕಾರ್ಯ ಮಾಡುತ್ತ ಕುಟುಂಬದಿಂದ ದೂರವಿದ್ದು ದೇಶ ಸೇವೆ ಸಲ್ಲಿಸಿದ್ದಾರೆ ಅವರ ಕಾರ್ಯ ಶ್ಲ್ಯಾಘನೀಯ.
ಇದಕ್ಕೂ ಮುಂಚೆ ಸಿಂದಗಿಯ ಬಸವೇಶ್ವರ ವೃತ್ತದಿಂದ ಮಹಾತ್ಮಾಗಾಂಧಿ ವೃತ್ತದವರೆಗೆ ಬೈಕ್ ರ್ಯಾಲಿ ಮೂಲಕ ಅದ್ದುರಿ ಸ್ವಾಗತಿಸಿ ನಂತರ ಬಳಗಾನೂರ ಗ್ರಾಮದವರೆಗೆ ಪಥ ಸಂಚಲನ ನಡೆಸಿದರು.
ಈ ಸಂದರ್ಭದಲ್ಲಿ ಶರಣು ಮಂಜಾಳಕರ, ಬಾಬು ಸಂಪಂಗಿ, ರಾಜು ವಡ್ಡರ, ಅಭಿನಾಶ ಮಂಜಾಳಕರ, ಭೀಮಾಶಂಕರ ವಡ್ಡರ, ಸಚೀನ ಮಂಜಾಳಕರ ಸೇರಿದಂತೆ ಸಮಸ್ತ ಭೋವಿ ಸಮಾಜದವರು ಇದ್ದರು.
ಮಹಾಂತೇಶ ನೂಲಾನವರ, ಸಿಂದಗಿ

LEAVE A REPLY

Please enter your comment!
Please enter your name here