ರಾಜೀವ ಗಾಂಧಿ ನಗರದಲ್ಲಿ ರಾರಾಜಿಸುತ್ತಿರುವ ಕಸದ ತಿಪ್ಪೆಗಳು, ಕೆಸರುಗದ್ದೆಗಳಾಗಿರುವ ರಸ್ಥೆಗಳು

0

ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಪಟ್ಟಣ ರಾಜೀವಗಾಂಧಿನಗರ,ದಶಕಗಳಿಂದಲೂ ಸಾವ೯ಜನಿಕ ಸಮಸ್ಯೆಗಳ ಕೂಪವಾಗಿದೆ. ಪಟ್ಟಣ ಪಂಚಾಯ್ತಿ ಇಂದ ನಗರವನ್ನು ನಿಲ೯ಕ್ಷಿಸಲಾಗುತ್ತಿದೆ,ಎಂಬ ಗಂಭೀರ ಆರೋಪ ಕೇಳಿಬರುತ್ತಿದೆ.ಇತ್ತೀಚೆಗಷ್ಟೇ ಆಯ್ಕೆಯಾಗಿರುವ ಸದಸ್ಯರು ಬಹು ಹುರುಪಿನಿಂದ, ನಗರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ,ಭಗೀರಥ ಪ್ರಯತ್ನ ಮಾಡುತ್ತಿದ್ದಾರೆಂಬ ಸಮಾದಾನದ ಸಂಗತಿ ನಾಗರೀಕರಿಂದ ಕೇಳಿಬಂದಿದೆ.ಮಳೆಗಾಲ ಬಂತೆಂದರೆ ರಾಜೀವ ಗಾಂಧಿ ನಗರದ ನಾಗರೀಕರು,ತಮ್ಮ ನೆಮ್ಮದಿ ಕಳೆದುಕೊಳ್ಳೋ ದುಸ್ಥಿತಿ ನಿಮಾ೯ಣವಾಗಿದೆ.ಅವೈಜ್ಞಾನಿಕಒಳಚರಂಡಿ ನಿಮ‍ಾ೯ಣದಿಂದಾಗಿ,ರಸ್ಥೆಗಳು ಜರಡಿಗಳಂತಾಗಿವೆ,ಮಳೆಬಂದರೆ ನಗರದ ಬಹುತೇಕ ಗಲ್ಲಿಗಳು ಕೆಸರುಗದ್ದೆಗಳಾಗುತ್ತಿವೆ,ಪಾದಾಚಾರಿಗಳು ನಡೆದಾಡಲು ಸಾಹಸ ಪಡುವ ದುಸ್ಥಿತಿ ನಿಮ‍ಾ೯ಣವಾಗಿದೆ.ಕೆಲವೆಡೆ ಚರಂಡಿಗಳಲ್ಲಿನ ಕಸ ಮೇಲೆ ತೆಗೆದು ಗುಪ್ಪೆಹಾಕಲಾಗಿದ್ದು, ಸಮಪ೯ಕವಾಗಿ ಕಸ ವಿಲೇವಾರಿ ಮಾಡಿಲ್ಲ. ಪರಿಣಾಮವಾಗಿ ಕಸದ ಗುಪ್ಪೆ ಮಳೆಯ ರಬಸಕ್ಕೆ ಮತ್ತೆ ಚರಂಡಿ ಸೇರುತ್ತಿದೆ. ಕೆಲವೆಡೆಗಳಲ್ಲಿ ವಷ೯ವಾದರೂ ಚರಂಡಿ ಸ್ವಚ್ಚಗೊಳಿಸಿಲ್ಲ ಎಂಬ ದೂರುಗಳಿವೆ.ಜನವಸತಿಗೆ ಹೊಂದಿಕೊಂಡಿುವ ಖಾಲೀ ನಿವೇಶನದಲ್ಲಿ,ಬೆಳೆದಿರುವ ಜಾಲಿಗಿಡಗಳನ್ನು ಹಾಗೂ ಕಸದ ತಿಪ್ಪೆಗಳನ್ನು,ಶೀಘ್ರವೇ ತೆರವುಗೊಳಿಸಬೇಕಿದೆ ಎಂದು ನಗರದ ನಿವಾಸಿಗಳು ಈ ಮೂಲಕ ಕೋರಿದ್ದಾರೆ.ಅತೀ ಶೀಘ್ರವಾಗಿ ರಸ್ಥೆಗಳನ್ನು ದುರಸ್ಥಿಗೊಳಿಸಬೇಕು ಮತ್ತು ಸಾಂಕ್ರಾಮಿಕ ರೋಗಗಳನ್ನು ಹರಡುತ್ತಿರುವ ಚರಂಡಿಯ ಕಸವನ್ನು,ಶೀಘ್ರವೇ ಇಲ್ಲಿಂದ ವಿಲೇವಾರಿ ಮಾಡಬೇಕಾಗಿದೆ. ರಾಜೀವ ಗಾಂಧೀ ನಗರಕ್ಕೆ ಮೂಲಭೂತ ಸೌಕಯ೯ಗಳನ್ನು, ಸಮಪ೯ಕವಾಗಿ ಒದಗಿಸಬೇಕೆಂದು,ಪಪಂ ಮುಖ್ಯಾಧಿಕಾರಿಗಳಲ್ಲಿ ನಗರದ ನಾಗರೀಕರು ಈ ಮೂಲಕ ಕೋರಿದ್ದಾರೆ.

 

LEAVE A REPLY

Please enter your comment!
Please enter your name here