ರಾಜ್ಯ ಸರ್ಕಾರಕ್ಕೆ 1600 ಪ್ರಶ್ನೆ ಕೇಳಿದಿದ್ದರೂ, ಯಾವುದಕ್ಕೂ ಸರಿಯಾಗಿ ಉತ್ತರಿಸಿಲ್ಲ – ಡಿಕೆ ಶಿವಕುಮಾರ್

0

ಈ ಸರ್ಕಾರ ಭ್ರಷ್ಟಾಚಾರದಲ್ಲಿ ತಾಂಡವಾಡುತ್ತಿದೆ. ಅನೇಕ ವಿಚಾರಗಳನ್ನು ಚರ್ಚೆ ಅವಕಾಶ ಕೊಡಲಿಲ್ಲ. 1600 ಪ್ರಶ್ನೆ ಕೇಳಿದ್ವಿ ಯಾವುದಕ್ಕೂ ಸರಿಯಾಗಿ ಉತ್ತರ ಇಲ್ಲ. ಡೀಟೈಲ್ ಆಗಿ ಚರ್ಚೆ ಮಾಡಲು ಜನರ ವಿಶ್ವಾಸ ಕಳೆದುಕೊಂಡಿದೆ. ಇವತ್ತಿಂದನೇ ಚರ್ಚೆಗೆ ಅವಕಾಶ ಕೇಳೆದುಕೊಂಡಿದೆ ಎಂಬುದಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

ಇಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು, ಸರ್ಕಾರದಲ್ಲಿ ಹೊಡೆದಾಟಗಳು ನಡೆಯುತ್ತಿದೆ. ಮೇಲಕ್ಕೆ ಏರಿಸಬೇಕು, ಇಳಿಸಬೇಕು ಎಂದು ನಡೆಯುತ್ತಿದೆ. ರೈತರನ್ನು ಮಾರುತ್ತಿದ್ದಾರೆ, ರೈತರ ಭೂಮಿ ಮಾರಾಟಮಾಡ್ತಿದ್ದಾರೆ. ಎಲ್ಲವನ್ನು ಇಂಟರ್ನ್ಯಾಷನಲ್ ಕಂಪನಿಗಳಿಗೆ ಮಾರುತ್ತಿದ್ದಾರೆ ಎಂಬುದಾಗಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

LEAVE A REPLY

Please enter your comment!
Please enter your name here