ರೈತ ಮತ್ತು ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ರದ್ದುಪಡಿಸದಿದ್ದಲ್ಲಿ ಸಕಾ೯ರಗಳಿಗೆ ಭವಿಷ್ಯ ಇಲ್ಲ ಗುರುಸಿದ್ದನಗೌಡ

0

ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಪಟ್ಟಣ, ರಾಜ್ಯಾದ್ಯಂತ ಕರ್ನಾಟಕ ಬಂದ್ ಕರೆಗೆ ಕೂಡ್ಲಿಗಿಯಲ್ಲಿ ರೈತ ಸಂಘ,ದಸಂಸ,ಸಿಐಟಿಯು, ಕಾಂಗ್ರೆಸ್ ಸೇರಿದಂತೆ ವಿವಿದ ಸಂಘಟನೆಗಳ ಸಹಯೋಗದಲ್ಲಿ.ಬಂದ್ ಆಚರಿಸಲಾಯಿತು ಬಹಿತೇಕ ಬಂದ್ ಯಶಸ್ವಿಯಾಗಿದೆ, ಮಹಾತ್ಮ ಗಾಂಧೀ ಗಿತಾಭಸ್ಮ ಸ್ಮಾರಕದಿಂದ ಪ್ರತಿಭಟನೆ ಹಾಗೂ ಬಂದ್ ಆರಂಭಿಸಿದರು. ಪ್ರತಿಭಟನಾಕಾರರು ಸಕಾ೯ರಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತ ಮೆರವಣಿಗೆ ಸಾಗಿದರು,ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿಗೆ 50ನ್ನು ಬಂದ್ ಮಾಡಿದರು.ಪಟ್ಟಣದ ಬುಹುತೇಕ ಕಡೆಗಳಲ್ಲಿ ತೆರೆಳಿ ಅಂಗಡಿ ಮುಂಗಟ್ಟು ಬಂದ್ ಮಾಡಿಸಿದರು.ಖಾಸಗೀ ವಾಹನಗಳು ಹಾಗೂ ಸಾರಿಗೆ ರಸ್ಥೆಗೆ ವಾಹನಗಳು ರಸ್ಥೆಗೆ ಇಳಿಯಲಿಲ್ಲ.ಬಂದ್ ಕರೆಗೆ ಸಾವ೯ಜನಿಕರ ಪರೋಕ್ಷ ಸಹಕಾರದಿಂದಾಗಿ,ಶಾಂತಿಯುತವಾಗಿ ಕೂಡ್ಲಿಗಿ ಬಂದ್ ಯಶಸ್ವಿಯಾಗಿದೆ ಎನ್ನಬಹುದಾಗಿದೆ.ಮದಕರಿ ವೃತ್ತದ ಬಳಿ ಪ್ರತಿಭಟನೆಕರಾರು ಮಾತನಾಡಿದರು,ರೈತ, ಕಾರ್ಮಿಕರ ವಿರುದ್ದ ತರುವ ಕಾಯ್ದೆ ಬಂಡವಾಳ ಶಾಹಿಗಳ ಪರವಾಗಿದ್ದು ರೈತರನ್ನು ಬೀದಿಗೆ ತಳ್ಳುವ ಕಾಯ್ದೆಯನ್ನು ರದ್ದುಪಡಿಸಬೇಕೆಂದು ಆಗ್ರಹಿಸಿದರು.ದಲಿತ ಸಂಘಟನೆಗಳು,ಸಿಐಟಿಯು,ವಕೀಲರ ಸಂಘ,ಹಮಾಲರ ಸಂಘ,ರೈತ ಸಂಘ,ಕಾಂಗ್ರೆಸ್ ಪಕ್ಷ ಸೇರಿದಂತೆ ಕೆಲ ಪಕ್ಷಗಳ ಮುಖಂಡರು ಮತ್ತು ಸಂಘಟನೆಗಳು ಬಂದ್ ನಲ್ಲಿ ಭಾಗವಹಿಸಿದ್ದರು.ಪ್ರತಿಭಟನಾಕಾರರನ್ನುದ್ದೇಶಿಸಿ ಹಿರಿಯ ನ್ಯಾಯವಾದಿ ಹಾಗೂ ಕಾಂಗ್ರೇಸ್ ಮುಖಂಡ ಗುರುಸಿದ್ದನಗೌಡ ಮಾತನಾಡಿದರು,ರೈತರ ಕಾಮಿ೯ಕರ ಹಾಗೂ ಬಡ ದೀನ ದಲಿತರ ವಿರೋಧಿ ನೀತಿಯನ್ನು ತಾಳುವ ಸಕಾ೯ರಗಳಿಗೆ ಭವಿಷ್ಯ ಇರಲ್ಲ.ಸಕಾ೯ರಗಳು ಕಾಯ್ದೆಗಳನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.ಸಕಾ೯ರ ಕಾಮಿ೯ಕರ ರೈತರ ಹಿತ ಕಾಯುವಂತಹ ನಿಲುವು ತಾಳಬೇಕೆಂದು ಅವರು ಸಕಾ೯ರಕ್ಕೆ ಒತ್ತಾಯಿಸಿದರು.ವಿವಿದ ಸಂಘಟನೆಗಳ ಹಾಗೂ ಪಕ್ಷಗಳ ಜಿಲ್ಲಾ ಮತ್ತು ತಾಲೂಕು ಮುಖಂಡರು ಮಾತನಾಡಿದರು, ಪ್ರತಿಭಟನಾಕಾರರು ತಹಶೀಲ್ದಾರರಾದ ಎಸ್.ಮಹಾಬಲೇಶ್ವರವರಿಗೆ ಹಕ್ಕೋಥಾಯದ ಪ್ರತಿ ನೀಡಿದರು.ಈ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಪ್ರತಿಭಟನಾಕಾರರು ತಮ್ಮ ಹಕ್ಕೊತ್ತಾಯಗಳನ್ನು ಸಲ್ಲಿಸಿದರು.ವಿವಿದ ಪಕ್ಷಗಳ,ವಿವಿದ ಸಂಘಟನೆಗಳ ಪದಾಧಿಕಾರಿಗಳು ಸದಸ್ಯರು ಕಾಯ೯ಕತ೯ರು,ದಲಿತರು,ರೈತರು ಕಾಮಿ೯ಕರು ಇದ್ದರು.
ಬಂದೋಬಸ್ಥ್: ಶಾಂತಿಯುತ ಯಶಸ್ವೀ ಬಂದ್ ಗೆ ಡಿವೈಎಸ್ಪಿ ಜಿ.ಹರೀಶ್ ರೆಡ್ಡಿಯವರು, ಅಗತ್ಯ ಸಿಬ್ಬಂದಿ ಹಾಗೂ ಡಿಆರ್ ಪೊಲೀಸ್ ಸಹಯೋಗದೊಂದಿಗೆ ಬಿಗಿ ಬಂದೋ ಬಸ್ಥ್ ಏಪ೯ಡಿಸಿದ್ದರು.
ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-

 

 

 

LEAVE A REPLY

Please enter your comment!
Please enter your name here