ಶಿಕ್ಷಕರ ಸೇವೆಯು ನಿಸ್ವಾರ್ಥ ಸೇವೆಯಾಗಿದೆ- ಶ್ರೀ ಸುಭೋದ ರಾಬಾ

0

ವರದಿ: ಮಹೇಶ ಅಚ್ಚಿನಗೌಡ್ರ
ರೋಣ : ಪಟ್ಟಣದ ಗ್ರೀನವುಡ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಕೋವಿಡ್ -19 ವೈರಸನಿಂದ ಪ್ರಾಣಕಳೆದುಕೊಂಡಂತಹ ಕೋವಿಡ್ ವಾರಿಯರ್ಸ್ಗಳಿಗೆ ಆತ್ಮಕ್ಕೆ ಶಾಂತಿಕೋರಿ ಮಾತನಾಡಿದ ಶಾಲೆಯಮುಖ್ಯೋಪಾಧ್ಯಾರಾದ ಸುಭೋದ ಚಂದ್ರ ರಾಬಾ ಮಾತನಾಡಿದರು. ಶಿಕ್ಷಕರು ಸೇವೆಯು ನಿಸ್ವಾರ್ಥ ಸೇವೆಯಾಗಿದ್ದು ಪ್ರತಿಫಲಗಳನ್ನು ಬಯಸದ ಸೇವೆಯಾಗಿದೆ ಪ್ರತಿಯೊಬ್ಬ ಶಿಕ್ಷಕರು ತಮ್ಮ ಸೇವೆಯನ್ನು ಗೌರವಿಸುವದು ನಮ್ಮೆಲ್ಲರ ಕರ್ತವ್ಯವಾಗಿದೆ ಶ್ರೀ ರಾಧಾಕೃಷ್ಟನನ್ ರವರ ಹುಟ್ಟಿದ ದಿನವಾದ ಸೆಪ್ಟೆಂಬರ್ 5ನೇ ದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸುತ್ತಿದ್ದೇವೆ
ಬೋಧನಾ ವೃತ್ತಿ ಅತ್ಯಂತ ಶ್ರೇಷ್ಠ ವೃತ್ತಿಗಳಲ್ಲಿ ಒಂದು ಎಂಬುದನ್ನು ಪರಿಗಣಿಸಿರುವ ದೇಶ ನಮ್ಮದು. ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುವುದರ ಜತೆಗೆ ಸರಿ ತಪ್ಪುಗಳನ್ನು ತಿದ್ದುವ, ಅವರಲ್ಲಿನ ಆಸಕ್ತಿಗಳನ್ನು ವೃದ್ಧಿಸುವ ಮತ್ತು ಅವರ ಬದುಕಿಗೆ ಗುರಿ ರೂಪಿಸುವುದರಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. ಮೌಲ್ಯಯುತ ಸಮಾಜ ರೂಪಿಸುವ ಶಿಕ್ಷಕರಿಗೆ ತಮ್ಮದೇ ಆದ ದಿನವೊಂದನ್ನು ಸಂಭ್ರಮಿಸುವ ಅವಕಾಶ ಇದು.
ಮಕ್ಕಳ ಭವಿಷ್ಯವನ್ನು ರೂಪಿಸುವ, ಪಠ್ಯಕ್ಕಿಂತಲೂ ಹೆಚ್ಚಾಗಿ ವಿದ್ಯಾರ್ಥಿಗಳಲ್ಲಿ ವಿವೇಕ, ತಾಳ್ಮೆ, ದೂರದೃಷ್ಟಿ, ಮಾನವತೆಯನ್ನು ಬೋಧಿಸುವ, ತನ್ಮೂಲಕ ವಿದ್ಯಾರ್ಥಿಗಳನ್ನು ಭವ್ಯ ದೇಶದ ಸತ್ಪ್ರಜೆಗಳನ್ನಾಗಿ ರೂಪಿಸುವ ಶಿಕ್ಷಕರಿಗೆ ವಂದನೆ ಸಲ್ಲಿಸುವ ನಿಟ್ಟಿನಲ್ಲಿ ಶಿಕ್ಷಕರ ದಿನಾಚರಣೆ ಅತಿ ಮಹತ್ವದ್ದಾಗಿದೆ. ಮಕ್ಕಳ ವಿದ್ಯಾಭ್ಯಾಸ ದೇಶದ ಭವಿಷ್ಯವನ್ನೇ ಬದಲಿಸಿಬಿಡಬಲ್ಲುದು
ಈ ಸಂದರ್ಭದಲ್ಲಿ ಸಹಶಿಕ್ಷಕರಾದ ಪ್ರಶಾಂತ ಮಠದ, ಸಂತೋಷ ಜತ್ತಿ, ಶ್ರೀಮತಿ ಸುನೀತಾ ರಾಬಾ ,ಮಲ್ಲಿಕಾ ಸುಧಾಕರ್ ದಿಲ್ಶಾದಬೇಗಂ ಸುನೀತಾ ಹೂಗಾರ ಚಂದ್ರಕಲಾ ಹೊಸಮನಿ ಮುಂತಾದವರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here