ಶೀಘ್ರದಲ್ಲೇ 39 ವಿಶೇಷ ರೈಲುಗಳ ಓಡಾಟ ಆರಂಭ: ಇಲ್ಲಿದೆ ನೋಡಿ ಪೂರ್ಣ ಪಟ್ಟಿ..!

0

ಹೆಚ್ಚುವರಿ 39 ವಿಶೇಷ ರೈಲುಗಳ ಓಡಾಟಕ್ಕೆ ರೈಲ್ವೆ ಮಂಡಳಿ ಇಂದು ಅನುಮೋದನೆ ನೀಡಿದೆ. ಈ ಸೇವೆಗಳನ್ನ ವಿಶೇಷ ಸೇವೆಯಾಗಿ ಶೀಘ್ರದಲ್ಲಿಯೇ ಜಾರಿಗೆ ತರಲಾಗುವುದು ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.

ಹೆಚ್ಚಿನ ರೈಲುಗಳು ಎಸಿ ಎಕ್ಸ್ ಪ್ರೆಸ್, ಡುರೊಂಟೋ, ರಾಜಧಾನಿ ಮತ್ತು ಶತಾಬ್ದಿ ಗಳ ವರ್ಗಕ್ಕೆ ಸೇರಿವೆ. ಈ ಹೆಚ್ಚುವರಿ ರೈಲುಗಳ ಕಾರ್ಯಾಚರಣೆಯ ದಿನಾಂಕವನ್ನ ಇನ್ನೂ ಸರ್ಕಾರ ಪ್ರಕಟಿಸಿಲ್ಲ.

ಇಲ್ಲಿ ಸಂಪೂರ್ಣ ಪಟ್ಟಿ ಪರಿಶೀಲಿಸಿ:

ಮಾರ್ಚ್ 25ರಿಂದ ದೇಶಾದ್ಯಂತ ರೈಲು ಸಂಚಾರ ಸ್ಥಗಿತವಾಗಿದ್ದರಿಂದ ರೈಲ್ವೆ ಇಲಾಖೆ ಎಲ್ಲಾ ಪ್ಯಾಸೆಂಜರ್ ರೈಲುಗಳ ಸೇವೆಯನ್ನು ಸ್ಥಗಿತಗೊಳಿಸಿತ್ತು. ಆದರೆ, ಈ ಸೇವೆಗಳನ್ನು ಸ್ಥಗಿತವಾಗಿ ಪುನರಾರಂಭಿಸಿ, ಮೇ 1ರಿಂದ ವಲಸೆ ಕಾರ್ಮಿಕರು ತಮ್ಮ ತವರು ರಾಜ್ಯಗಳಿಗೆ ತಲುಪಲು ಶ್ರಮಿಕ್ ಸ್ಪೆಷಲ್ ರೈಲುಗಳು ಸಹಾಯ ಕಲ್ಪಿಸುತ್ತಿವೆ.

ನಂತರ, ದೇಶಾದ್ಯಂತ 230 ವಿಶೇಷ ರೈಲುಗಳನ್ನು ಪ್ರಾರಂಭಿಸಿದರು, ನಂತರ ಸೆಪ್ಟೆಂಬರ್ 12 ರಿಂದ ಇನ್ನೂ 80 ವಿಶೇಷ ರೈಲುಗಳನ್ನು ಪ್ರಾರಂಭಿಸಲಾಯಿತು.COVID-19 ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಹೆಚ್ಚುವರಿ ರೈಲುಗಳನ್ನ ಘೋಷಿಸಲಾಯಿತು ಮತ್ತು ಕಾರ್ಮಿಕರನ್ನ ಕೆಲಸಕ್ಕೆಂದು ವಲಸೆ ಹೋಗಲು ಅನ್ ಲಾಕ್ 4.0 ಅಡಿಯಲ್ಲಿ ಅವಕಾಶ ಕಲ್ಪಿಸಲಾಯ್ತು.

ರಾಷ್ಟ್ರೀಯ ಸಾರಿಗೆ ಸಂಸ್ಥೆ ಇತ್ತೀಚೆಗೆ ತನ್ನ ಜಾಲದಡಿ ಕ್ಲೋನ್ ರೈಲುಗಳನ್ನು ಕಾರ್ಯಾಚರಣೆ ಮಾಡಲು ಪ್ರಾರಂಭಿಸಿತು. ಆರಂಭದಲ್ಲಿ ಭಾರತೀಯ ರೈಲ್ವೆ ಜಾಲದಲ್ಲಿ ಒಟ್ಟು 40 (20 ಜೋಡಿ) ರೈಲುಗಳು ಕಾರ್ಯನಿರ್ವಹಿಸಲಿದ್ದು, ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದೆ.

ಕ್ಲೋನ್ ರೈಲುಗಳ ಮುಖ್ಯ ಲಕ್ಷಣವೆಂದರೆ ಈ ರೈಲುಗಳು ಕಡಿಮೆ ನಿಲುಗಡೆಗಳನ್ನು ಹೊಂದಿರುತ್ತವೆ ಮತ್ತು ಮೂಲ ರೈಲಿಗಿಂತ ಹೆಚ್ಚಿನ ವೇಗದಲ್ಲಿ ಓಡಲಿವೆ.

ಕ್ಲೋನ್ ರೈಲುಗಳು ರೈಲ್ವೆ ಪ್ರಯಾಣಿಕರಿಗೆ ವರದಾನವಾಗಿ ಬರುತ್ತದೆ ಮತ್ತು ದಟ್ಟಣೆಯ ಮಾರ್ಗಗಳಲ್ಲಿ ಟಿಕೆಟ್ ಸಿಗದ ಸಮಸ್ಯೆ ಕ್ಲೋನ್ ರೈಲುಗಳನ್ನು ಪರಿಚಯಿಸಬಹುದಿರುವುದರಿಂದ ಸಮಸ್ಯೆ ಕಡಿಮೆಯಾಗಬಹುದು.

LEAVE A REPLY

Please enter your comment!
Please enter your name here