ಸಂಗೊಳ್ಳಿ ರಾಯಣ್ಣ ಎಂಬ ಯೋಧ  ಸೂರ್ಯ ಮುಳುಗದ ಸಾಮ್ರಾಜ್ಯಕ್ಕೆ ದುಃಸ್ವಪ್ನವಾಗಿ ಕಾಡತೊಡಗಿದ್ದ ಎಂದು ಹೇಳಿದರೆ ಅತಿಶಯೋಕ್ತಿ ಎನಿಸದು

0

ಸಂಗೊಳ್ಳಿ ರಾಯಣ್ಣ ಎಂಬ ಯೋಧ  ಸೂರ್ಯ ಮುಳುಗದ ಸಾಮ್ರಾಜ್ಯಕ್ಕೆ ದುಃಸ್ವಪ್ನವಾಗಿ ಕಾಡತೊಡಗಿದ್ದ ಎಂದು ಹೇಳಿದರೆ ಅತಿಶಯೋಕ್ತಿ ಎನಿಸದು .ಬ್ರಿಟಿಷರಿಗೆ ಸಾಯುವವರೆಗೂ ಅಂಜದೆ ಅಳುಕದೆ ˌ ನೇರ ಮಾತುಗಳಿಂದ ಅವರ ಮನಸ್ಸನ್ನು ಘಾಸಿಗೊಳಿಸಿದ ಅಮರ ದೇಶಪ್ರೇಮಿ .ಇತ ಕಿತ್ತೂರಿನ ರಾಣಿ ಚೆನ್ನಮ್ಮಳ ಬಲಗೈ ಬಂಟನಾಗಿ ಆಸ್ಥಾನದ ಎಲ್ಲಾ ಆಗು ಹೋಗುಗಳನ್ನು ನೋಡಿಕೊಳ್ಳುತ್ತಿದ್ದನು.ಇತನು ಚಿಕ್ಕವನಿದ್ದಾಗಲೆ ಕತ್ತಿ ವರಸೆ ˌಗುರಾಣಿಗಳನ್ನು ಬಳಸುವ ˌಗೆರಿಲ್ಲಾ ತಂತ್ರಗಳನ್ನು ಕಲಿತುಕೊಂಡಿದ್ದನ್ನು. ಬ್ರಿಟಿಷರ ವಿರುದ್ಧ ವೀರಾವೇಶವಾಗಿ ಹೋರಾಡುವಾಗ ತನ್ನ ದಳದ ಸೇನಾಪತಿಯ ಆಜ್ಞೆಯಂತೆ ಯುದ್ದದಲ್ಲಿ ಹೋರಾಡಿ ಸೇನಾನಿಗಳನ್ನು ರಕ್ಷಿಸುವ ಮತ್ತು ಗೆಲ್ಲುವದಷ್ಟೆ ಅಲ್ಲ ಮಹಾರಾಣಿಯನ್ನು ಕಾಪಾಡುವದು ನಮ್ಮ ಕರ್ತವ್ಯಯೆಂದಾಗ ಮಹಾರಾಣಿಯ ರಕ್ಷಣೆಗೆ ಪ್ರಾಣವನ್ನು ಲೆಕ್ಕಿಸದ ದೀರ.ನಮ್ಮವರೆ ಆದಂತಹ ಕೆಲವು ನಯವಂಚಕರಿಂದ ಮೋಸಕ್ಕೆ ಬಲಿಯಾಗಿ ಬ್ರಿಟಿಷರ ಕೈಗೆ ಸಿಕ್ಕನು.ನಂತರ ರಾಯಣ್ಣನನ್ನ ಗಲ್ಲಿಗೆರೀಸಲಾಯಿತು.ರಾಯಣ್ಣನನ್ನು ಗಲ್ಲಿಗೆರಿಸಿದ ಸ್ಥಳದಲ್ಲಿ ಅವನ ಪ್ರಾಣ ಸ್ನೇಹಿತ ಅವರ ಸಮಾದಿಯ ಮೇಲೆ ಒಂದು ಆಲದ ಮರದ ಸಸಿ ನೇಟ್ಟನು. ಅದೇ ಮರ ಇಂದು ಹೆಮ್ಮರವಾಗಿ ರಾಯಣ್ಣನ ಸಮಾದಿಗೆ ನೇರಳಾಗಿ ನಿಂತಿದೆ.ಅದು ಅವರ ಅಮರವಾದ ಸ್ನೇಹದ ಪ್ರತೀಕ.

ರಾಣಿ ಚೆನ್ನಮ್ಮನ  ಆಸ್ಥಾನದ ಉಳಿವಿಗಾಗಿ ಬ್ರಿಟಿಷರ ವಿರುದ್ಧ ಹೋರಾಡಿರುವ ನಿದರ್ಶನ ನಿಜಕ್ಕೂ ಶ್ಲ್ಯಾಘನೀಯವಾದದ್ದು. ಅಂತಹ ಮಹಾನ ನಾಯಕರ ಪುತ್ಥಳಿಯನ್ನು ನಿರ್ಮಿಸಲು ಬೆಳಗಾವಿಯಲ್ಲಿ ಬೀಡದಿರುವದು ಖೇದಕರ ಸಂಗತಿಯಾಗಿದೆ.ಯಾವುದೋ ವೈಯಕ್ತಿಕ ಬಿನ್ನಾಭಿಪ್ರಾಯವನ್ನು ತಂದು ಇಂತಹ ಕಾರ್ಯಕ್ಕೆ ಅಡ್ಡಿಪಡಿಸುವದು ಸರಿಯಲ್ಲ. ವೈಯಕ್ತಿಕ ಹೀತಕ್ಕೀಂತ ಸಮಾಜದ ಹೀತ ಮುಖ್ಯವೆಂದು ಬಾಳಿ ಬದುಕಿದವರು ರಾಯಣ್ಣನವರು .ಅವರಿಗೆ ಅನೇಕ  ಆಶೆˌ ಆಮೀಷಗಳನ್ನು ನೀಡಿದರೂ ನಂಬಿಕೆಗೆ ದ್ರೋಹ ಬಗೆಯಲಾರದ ಜೀವ ಅದು. ರಾಯಣ್ಣನನ್ನು ಸೀಮಿತ ಸಮುದಾಯಕ್ಕೆ ಒಳಪಡಿಸದೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರಕಲಿ ಎಂದು  ಗೌರವಿಸೋಣ.ರಾಯಣ್ಣನ ಸಮುದಾಯದವರು ಸಹ ಅಂದಾಭಿಮಾನದಿಂದಾಗಿ ಸಮಾಜಕ್ಕೆ ಮೂಜುಗರವಾಗುವಂತೆ  ನಡೆದುಕೊಳ್ಳಬಾರದು.

ರಾಯಣ್ಣ ಕೇವಲ ಸೀಮಿತ ಸಮುದಾಯದ ಸ್ವತ್ತಲ್ಲ ದೇಶದ ಸಮಸ್ಥ ಜನರ ಸ್ವತ್ತು .ಹಾಗಾಗಿ ಸರಕಾರವೂ ಈ ವಿಷಯದಲ್ಲಿ ಹೆಚ್ಚಿನ ಮೂತುವರ್ಜಿವಹಿಸಿ ರಾಯಣ್ಣನ ಮೂರ್ತಿಗೆ ಸರಿಯಾದ ಸ್ಥಳವನ್ನು ಆಯ್ಕೆಮಾಡಿˌ ಮೂರ್ತಿ ಸ್ಥಾಪನೆಗೆ ಮುಂದಾಗಬೇಕು. ದೇಶದ ಸಮಸ್ಥ ನಾಗರಿಕರು ಸಮಾಜದಲ್ಲಿ ಶಾಂತಿ ˌ ಸಹನೆˌ  ಸಹಬಾಳ್ವೆ ˌಸಹೋದರತ್ವˌ ಭ್ರಾತ್ರುತ್ವ ˌ ನೆಮ್ಮದಿ  ಭಾವನೆಯಿಂದ ಬದುಕೋಣ.

ವಿಠಲ.ಆರ್.ಯಂಕಂಚಿ

ಬಮ್ಮನಜೋಗಿ

LEAVE A REPLY

Please enter your comment!
Please enter your name here