ಸಭೆಗಳಿಗೆ ನಮ್ಮನ್ನು ಕರೆಯಲಿಲ್ಲ ತಿಳಿಸಲಿಲ್ಲ ಮಾಹಿತಿ ನೀಡಲಿಲ್ಲ ಎನ್ನುವ ಕ್ಷುಲ್ಲಕ ಟೀಕೆ ಟಿಪ್ಪಣಿಗಳನ್ನು ಮಾಡದೆ ಸೇವಾ ಮನೋಭಾವ ದಿಂದ ಕೆಲಸ ನಿರ್ವಹಿಸಬೇಕೆಂದು

0

ಹರಿಹರ : ಸಭೆಗಳಿಗೆ ನಮ್ಮನ್ನು ಕರೆಯಲಿಲ್ಲ, ತಿಳಿಸ ಲಿಲ್ಲ, ಮಾಹಿತಿ ನೀಡಲಿಲ್ಲ ಎನ್ನುವ ಕ್ಷುಲ್ಲಕ ಟೀಕೆ ಟಿಪ್ಪಣಿಗಳನ್ನು ಮಾಡದೆ ಸೇವಾ ಮನೋಭಾವ ದಿಂದ ಕೆಲಸ ನಿರ್ವಹಿಸಬೇಕೆಂದು ಜಿಲ್ಲಾ ಯೋಜ ನಾಧಿಕಾರಿ ಜಿ ನಜ್ಮಾ ಹೇಳಿದರು.

ನಗರದ ನೂರಾನಿ ಆಟೋ ಸ್ಟ್ಯಾಂಡ್ ಮತ್ತು ಮೂರನೇ ಮೆನ್ ನೀಲಕಂಠ ನಗರದ ಬಳಿ ನಡೆದ ವಾರ್ಡ್ ಮಟ್ಟದ ಕಾರ್ಯಾಚರಣೆ ಪಡೆಯ ಸಭೆಯ ಅಧ್ಯಕ್ಷತೆ ವಹಿಸಿ,ಉದ್ಘಾಟಿಸಿ ಮಾತನಾಡಿದ ಅವರು ಪಡೆಯ ಸದಸ್ಯರಾದ ನೀವುಗಳು ಅಧಿಕಾರಿಗಳನ್ನು ಟೀಕೆ-ಟಿಪ್ಪಣಿ ಮಾಡದೆ ನಿಮ್ಮ ಸೇವಾಮನೋಭಾವ ದಿಂದ ಕೆಲಸ ನಿರ್ವಹಣೆ ಮಾಡಿದಾಗ ನಿಮ್ಮ ಕೆಲಸ ಕ್ಕೆ ಅರ್ಥ ಬರುತ್ತದೆ ಎಂದು ತಿಳಿಸಿದರು.

ವಾರ್ಡ್ಗಳಲ್ಲಿ ಪ್ರತಿಯೊಂದು ಮನೆಗಳಿಗೆ ಸಂಪರ್ಕ ಹೊಂದಿರುವ ನೀವುಗಳು ಯಾರದೇ ಮನೆಯಲ್ಲಿ ಹತ್ತು ದಿನಗಳಿಗಿಂತ ಹೆಚ್ಚು ಕಾಲ ಯಾರಿಗಾದರೂ ಜ್ವರ ಶೀತ ಕೆಮ್ಮು ನೆಗಡಿಯಂತಹ ಕಾಯಿಲೆಗಳು ಕಂಡು ಬಂದಿದ್ದೇ ಆದಲ್ಲಿ ಅಂತಹ ವ್ಯಕ್ತಿಗಳನ್ನು ಮನವೊಲಿಸಿ ಆಸ್ಪತ್ರೆಗೆ ಕಳುಹಿಸಿ ಪರೀಕ್ಷೆ ಮಾಡಿಸಿ ಪ್ರಕರಣಗಳೇನಾದರೂ ದೃಢ ಪಟ್ಟಲ್ಲಿ ಅಂತಹವರ ನ್ನು ಚಿಕಿತ್ಸೆಗಾಗಿ ಕಳುಹಿಸುವ ಕೆಲಸವನ್ನು ನೀವು ಗಳು ಮಾಡಬೇಕು.

ಅಲ್ಲದೆ ಭಯಬೀತರಾದ ವಾರ್ಡಿನ ನಿವಾಸಿಗಳಿಗೆ ಕಾಯಿಲೆ ಬಗ್ಗೆ ಸರಿಯಾದ ಮಾಹಿತಿ ನೀಡಿ ಅವರಲ್ಲಿ ಧೈರ್ಯ ತುಂಬುವ ಕೆಲಸ ಮಾಡಬೇಕು. ಊಹಾಪೋಹಗಳಿಗೆ ಯಾವುದೇ ಆಸ್ಪದ ನೀಡದೆ ಧೈರ್ಯವಾಗಿ ಕಾಯಿಲೆಯನ್ನು ಎದುರಿಸುವ ಮನಶಕ್ತಿ ಯನ್ನು ಅವರಲ್ಲಿ ತುಂಬಬೇಕು. ವಾರ್ಡಿನ ನಿವಾಸಿಗಳಾಗಿರುವ ನೀವು ಅವರ ವಿಶ್ವಾಸವನ್ನು ಗಳಿಸಿಕೊಂಡು ಅವರ ಆತ್ಮಶಕ್ತಿಯನ್ನು ಬಲಗೊಳಿಸ ಬೇಕು.

ಕರೋನಾ ವೈರಸ್ ಎನ್ನುವುದು ಒಬ್ಬರಿಂದ ಮತ್ತೊಬ್ಬರಿಗೆ ಸರಪಳಿ ಮಾದರಿಯಲ್ಲಿ ಹರಡುತ್ತಾ ಹೋಗುತ್ತದೆ. ಒಬ್ಬರು ಮತ್ತೊಬ್ಬರನ್ನು ಮುಟ್ಟು ವುದು, ಸ್ಪರ್ಶಿಸುವುದು, ಕೆಮ್ಮುವುದು, ಸೀನುವುದು ಮಾಡಿದಾಗ ಮತ್ತೊಬ್ಬರಿಗೆ ಹರಡುತ್ತದೆ. ಕಾರ್ಯಾ ಚರಣೆ ತಂಡದಲ್ಲಿರುವ ನೀವೆಲ್ಲರೂ ಈ ವೈರಸ್ಸಿನ ಸರಪಳಿಯನ್ನು ಕಟ್ ಮಾಡುವ ಕೆಲಸವನ್ನು ಮಾಡ ಬೇಕು. ಸರಪಳಿ ಹರಿದಾಗ ಕಾಯಿಲೆ ಹರಡುವುದು ತನ್ನಿಂದತಾನೆ ನಿಲ್ಲುತ್ತದೆ.

ಸಭೆಯಲ್ಲಿ ಉಪಸ್ಥಿತರಿದ್ದ ತಹಸಿಲ್ದಾರ್ ಕೆ.ಬಿ. ರಾಮಚಂದ್ರಪ್ಪ ಮಾತನಾಡಿ ಸರ್ಕಾರದ ವತಿಯಿಂದ ವೈರಸ್ ತಡೆಯುವಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದಕ್ಕೆ ಸಾರ್ವಜನಿಕರ ಸಹಕಾರ ಬಹಳ ಮುಖ್ಯವಾಗಿದ್ದು, ಸಾರ್ವಜನಿಕರು ಇಲಾಖೆಗಳೊಂದಿಗೆ ಸಹಕರಿಸಿ ಅನವಶ್ಯಕವಾಗಿ ತಿರುಗಾಡಿದೆ, ಹೊರಗಡೆ ಬಾರದೆ, ಅವಶ್ಯವಿದ್ದಾಗ ಮಾತ್ರ ಹೊರಗಡೆ ಬಂದು ಮಾಸ್ಕ್ ಧರಿಸಿಕೊಂಡು ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯವಹರಿಸಿ ದಾಗ ಮಾತ್ರ ಈ ವೈರಸ್ಸನ್ನು ತಡೆಯಲು ಸಾಧ್ಯ ಎಂದು ಹೇಳಿದರು.

ಸಭೆಯ ಪ್ರಾರಂಭದಲ್ಲಿ ಪೌರಾಯುಕ್ತೆ ಎಸ್. ಲಕ್ಷ್ಮೀ ಪ್ರಾಸ್ತಾವಿಕವಾಗಿ ಮಾತನಾಡಿ ವಾರ್ಡ್ ಮಟ್ಟದ ಕಾರ್ಯಾಚರಣೆ ಪಡೆಯ ಬಗ್ಗೆ ಸವಿಸ್ತಾರ ವಾದ ಮಾಹಿತಿಯನ್ನು ನೀಡಿದರು.

ಸಭೆಯಲ್ಲಿ ನಗರಸಭೆ ಸದಸ್ಯ ಎಂ.ಎಸ್.ಬಾಬು ಲಾಲ್, ವೈದ್ಯ ಡಾ. ನಾಸಿರುದ್ದೀನ್, ಮುಖಂಡರು ಗಳಾದ ಮಹಮ್ಮದ್ ರಫೀಕ್,ದಾವೂದ್ ಅಹಮ ದ್, ಬಾಲರಾಜ್, ಪತ್ರಕರ್ತ ಮಂಜುನಾಥ ಪೂಜಾ ರ್, ಜಿಲ್ಲಾ ಕಚೇರಿಯಿಂದ ಆಗಮಿಸಿದ ಸಿಬ್ಬಂದಿ ಎನ್.ಪ್ರಸಾದ್, ವಸಂತ್, ಕಿರಣ್ ಕುಮಾರ್, ನಸು ರುಲ್ಲಾ ಮಹೇಶ್ ಕೋಡಬಾಳ, ಪ್ರವೀಣ್, ಮರಿ ದೇವ ಮುಂತಾದವರು ಹಾಜರಿದ್ದರು.

LEAVE A REPLY

Please enter your comment!
Please enter your name here