ಸಾಜ್ ಜಂಗ್, NGC ನಲ್ಲಿ ವನ್ಯಜೀವಿ ಛಾಯಾಗ್ರಹಣ ಕುರಿತ ಅದರಲ್ಲೂ ಕರಿ ಚಿರತೆ ಕುರಿತ ಸಂಚಿಕೆಯನ್ನೂ ಮಾಡಿದ್ದಾರೆ.

0

ಸಾಜ್ ಜಂಗ್, NGC ನಲ್ಲಿ ವನ್ಯಜೀವಿ ಛಾಯಾಗ್ರಹಣ ಕುರಿತ ಅದರಲ್ಲೂ ಕರಿ ಚಿರತೆ ಕುರಿತ ಸಂಚಿಕೆಯನ್ನೂ ಮಾಡಿದ್ದಾರೆ.

ಸಾಜ್ ರವರ ತಂದೆ,ಸಾದ್ ಬಿನ್ ಜಂಗ್ ಸಹ ವನ್ಯ ಜೀವಿ ಪ್ರೇಮಿ ತಮ್ಮ ಒಡೆತನದಲ್ಲಿ ಇದ್ದ ಅರಣ್ಯಗಳ ರಕ್ಷಣೆ ಮತ್ತ ಪರಿಸರಸ್ನೇಹಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು.ಇವರ ಮುತ್ತಾತ ಹೈದರಾಬಾದಿನ ಪೈಗಾ ನವಾಬಿನ ಅರಸ ನವಾಬ್ ಇಫ್ತಿಕಾರ್ ಅಲಿ ಖಾನ್ ಸಹಾ ಹೈದರಬಾದಿನ ಹುಲಿ ಮತ್ತು ಚಿರತೆಗಳ ಆವಾಸ ತಾಣಗಳಲ್ಲಿ ಕಾಡುಕೋಣ ಮತ್ತು ಕಾಟಿ(ಬೈಸನ್) ಸಂರಕ್ಷಣೆಯಲ್ಲಿ ಪಣತೊಟ್ಟಿದ್ದರು.ಇಂದಿಗೂ ಭಾರತ ಮತ್ತು ಆಫ್ರಿಕಾದಲ್ಲಿ ವನ್ಯಜೀವಿ ಸಂರಕ್ಷಣೆಯಲ್ಲಿ ತೊಡಗಿದ್ದಾರೆ.ಆಫ್ರಿಕಾದನಗೂರಾಂಗೋರೂ ಮತ್ತು ಸೆರೆಂಗೆಟಿಯಲ್ಲಿ ಎರಡು ಪ್ರವಾಸೋದ್ಯಮದ ನಿಟ್ಟಿನಲ್ಲಿ ಎರಡು ಸಫಾರಿ ಕ್ಯಾಂಪ್ ಗಳು ಈ ರಾಜಮನಗತನದ ಕುಟುಂಬ ನಿರ್ವಹಿಸುತ್ತಿದೆ.ಭಾರತದಲ್ಲಿ “ದಿ ಬಫರ್ ರೆಸಲ್ಯೂಷನ್ ಟ್ರಸ್ಟ್ (BCRTI) ನಡೆಸುತ್ತಿದ್ದು ಮಾನವ ಮತ್ತು ವನ್ಯಜೀವಿ ಸಂಘರ್ಷ ಮತ್ತು ವಾರ್ಷಿಕವಾಗಿ ಪರಿಸರಸ್ನೇಹಿ ತರಬೇತಿಗಳನ್ನು ವಿದ್ಯಾರ್ಥಿಗಳಿಗೆ ನೀಡುತ್ತಾ ಬಂದಿದ್ದಾರೆ.ವಿಶೇಷ ಎಂದರೆ ಇವರ ರಾಜ ಲಾಂಛನದಲ್ಲೂ ಹುಲಿಗಳು ಇರುವುದು ಕಾಣಬಹುದು.
ಕ್ರಿಕೆಟ್ ನಂಟು: ಸಾಜ್ ಕುಟುಂಬಕ್ಕೆ ಕ್ರಿಕೆಟಿನ ನಂಟು ಅಪಾರವಾಗಿದೆ.ಇವರ ಮುತ್ತಾತ ನವಾಬ್ ಇಫ್ತಿಕರ್ ಅಲಿ ಖಾನ್ ಭಾರತ ತಂಡದ ಪರ ಇಂಗ್ಲಂಡ್ ವಿರುದ್ದ ಬಾಡಿಲೈನರ್ಸ್ ಸೀರಿಸ್ ನಲ್ಲಿ ಆಡಿದ್ದರು ಬಳಿಕ ಇವರ ತಂದೆ ಸಾದ್ ಬಿನ್ ಜಂಗ್ ಸಹಾ ಭಾರತದ ಆಡಿದರೆ ಬಳಿಕ ಮುಂದಿನ ತಲೆಮಾರಿನ ಭಾರತ ತಂಡದ ಮಾಜಿ ನಾಯಕ ಸಹಾ ಕ್ರಿಕೆಟಿನಲ್ಲಿ ಹೆಸರು ಮಾಡಿರುವುದು ಸ್ಮರಿಸಬಹುದು.

ನಿಕಾನ್ ಕ್ಯಾಮರಾ ಸಂಸ್ಥೆಯ ಅಂಬಾಸಿಡರ್ ಕೂಡ ಆಗಿರು ಸಾಜ್ ಜಂಗ್, NGC ನಲ್ಲಿ ವನ್ಯಜೀವಿ ಛಾಯಾಗ್ರಹಣ ಕುರಿತ ಅದರಲ್ಲೂ ಕರಿ ಚಿರತೆ ಕುರಿತ ಸಂಚಿಕೆಯನ್ನೂ ಮಾಡಿದ್ದಾರೆ.

ವಂಶ ಪಾರಂಪರಿಕವಾಗಿ ವನ್ಯಜೀವಿ ಮತ್ತು ಅರಣ್ಯ ಸಂಕ್ಷಣೆಯಲ್ಲಿ ತೊಡಗಿಕೊಂಡಿದ್ದು,ಅದೇ ಕುಟುಂಬದ ಕುಡಿ ಸಾಜ್ ಜಂಗ್ ದಕ್ಷಿಣ ಭಾರತಕ್ಕೆ ಬಂದು ಕಬಿನಿಯಲ್ಲಿ ಬೈಸನ್ ಹೆಸರಿನ ಪರಿಸರ ಸ್ನೇಹಿ ರೆಸಾರ್ಟ್ ಜೊತೆಗೆ ಅಪರೂಪದ ಕರಿಚಿರತೆ ಹುಡುಕಿ ಅದರ ಛಾಯಾಚಿತ್ರ ಸೆರೆ ಹಿಡಿಯುವ ಮೂಲಕ ನಾಗರಹೊಳೆಯಲ್ಲೂ ಕರಿಚಿರತೆ ಇರುವುದನ್ನು ಸಾಕ್ಷಿಗೊಳಿರುವುದು ಇವರ ವನ್ಯಜೀವಿ ಮೇಲೆ ಇರವ ಕಾಳಜಿಗೆ ಇರುವ ಕೈಗನ್ನಡಿ.

LEAVE A REPLY

Please enter your comment!
Please enter your name here