ಸಾಯಿಬಾಬಾ

0

ಸಾಯಿಬಾಬಾ

ಉಧಿಯೊಳಗೆನ್ನ ಧ್ಯಾನವಿಹುದೆಂದ ತಂದೆ
ನಿನ್ನಾತ್ಮದೊಳು ಸೇರಿಸಿಕೊ..ಸೈರಿಸಿಕೊ..
ಎನ್ನ.. ಸರಿ ದಾರಿ ತೋರಿ ಕೈ ಹಿಡಿದು
ನಡೆಸೆನ್ನ..
ಬಾಳ ಪಯಣದಿ ಸೋತು ಸೊರಗಿಹೆ..
ಸುಲಲಿತ ಬದುಕ ನೀಡು ಬಾ.. ತಂದೆ..//
ದ್ವಂದ್ವದೊಳು ನಿಂದಿರುವೆ
ಭಕ್ತೆಯಾ.. ಸಲಹು.. ನೀ..ಬೇಗ
ದಿವ್ಯ ಚೇತನದಿ ಓಡೋಡಿ ಬಾ..
ಭಕ್ತರಾ ಕಾಯಲು..
ಅಗಣಿತ ಗುಣ ನಿಧಿಯೇ..ಬಾ..ಬಾ..//
ಬಾಯಾರಿ ನಿಂದಿಹೆನು
ನೀರಡಿಕೆಯ ತಣಿಸು ನೀ..
ಭಕ್ತರಾ.. ಕೋರಿಕೆಯ..
ಕೇಳು ನೀ ಕರುಣಾಕರನೇ..//
ಸತ್ಯ ಧರ್ಮವೆನ್ನ ಮನೆ ಬಾಗಿಲ
ತೋರಣವೆಂದಿದೆ ಈ ಮನ
ಗುಡಿ ಕಟ್ಟಿ ಪೂಜಿಸೆನು..
ಎನ್ನಾತ್ಮದೊಳು ಬೆಸೆದಿಹೆನು..
ಕಾಣುವಾ.. ಕಾತುರದಿಂದಿಹೆನು
ಭಕ್ತ ಬಂಧುವೇ.. ಬಾ..
ಎನ್ನಿದಿರು ನಿಂದು.. ಕೃಪೆ ತೋರು ತಂದೆ..//
ವಾಣಿಮಹೇಶ್
ಹಾಸನ

LEAVE A REPLY

Please enter your comment!
Please enter your name here