ಸಿಂದಗಿಯಿಂದ ಬೆನಕೊಟಗಿ ಗ್ರಾಮದವರೆಗೆ ರಸ್ತೆ ದುರಸ್ತಿ ಕಾಮಗಾರಿಗೆ ಜೆಡಿಎಸ್ ಮುಖಂಡ ಅಶೋಕ ಮನಗೂಳಿ ಭೂಮಿ ಪೂಜೆ ನೇರವೇರಿಸಿದರು.!

0

ಸಿಂದಗಿ- ಮಲಗಾಣ ರಸ್ತೆಯ ಸ್ಮಶÁನದ ಪಕ್ಕದ ರಸ್ತೆಯಿಂದ ಬೆನಕೊಟಗಿ ಗ್ರಾಮದ ವರೆಗೆ ಸುಮಾರು ರೈತರ ಜಮೀನುಗಳು ಹೊಂದಿಕೊಂಡಿದ್ದು ಅವುಗಳಿಗೆ ರಸ್ತೆ ಇಲ್ಲದಿರುವುದರಿಂದ ತೊಂದರೆ ಅನುಭವಿಸುವಂತಾಗಿದ್ದು ಅಲ್ಲದೆ ಕೆಲ ರೈತರು ಜಮೀನುಗಳನ್ನು ಮಾರಾಟ ಮಾಡುತ್ತಿದ್ದಾರೆ ಅದನ್ನು ಅವಲೋಕಿಸಿ ಜೆಡಿಎಸ್ ಮುಖಂಡ ಅಶೋಕ ಮನಗೂಳಿಯವರು ತಮ್ಮ ತಂದೆಯ ಹೆಸರಿನಿಂದ ಪ್ರತಿಷ್ಠಾನ ಸ್ಥಾಪಿಸಿ ಅವರ ಹೆಸರು ಅಜರಾಮರವಾಗಿ ಉಳಿಯುವಂತ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ಪುರಸಭೆ ಸದಸ್ಯ ರಾಜಣ್ಣ ನಾರಾಯಣಕರ ಹೇಳಿದರು.
ಪಟ್ಟಣದ ಬೆನಕೊಟಗಿ ಹಳೆ ರಸ್ತೆ ನಿರ್ಮಾಣ ಮಾಡುವಂತೆ ರಸ್ತೆಗೆ ಹೊಂದಿಕೊಂಡು ಇರುವ ಜಮೀನು ರೈತರ ಬಹುದಿನಗಳ ಬೇಡಿಕೆಯನ್ನು ಎಂ.ಸಿ.ಮನಗೂಳಿ ಪ್ರತಿಷ್ಠಾನದವತಿಯಿಂದ ಮಲಗಾಣ ರಸ್ತೆಯಿಂದ ತಾಲೂಕಿನ ಬೆನಕೊಟಗಿ ಗ್ರಾಮದವರೆಗೆ ರಸ್ತೆ ದುರಸ್ತಿ ಕಾಮಗಾರಿಗೆ ಭೂಮಿ ಫೂಜೆ ನೇರವೇರಿಸಿ ಚಾಲನೆ ನೀಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಅಶೋಕ ಮನಗೂಳಿ ಮಾತನಾಡಿ, ತಾಲೂಕಿನ ಸರ್ವಾಂಗಿಣ ಅಭಿವೃದ್ಧಿಗೆ ನೂರಾರು ಕೊಟಿ ಅನುದಾನ ತರಲಾಗಿದೆ ಅದನ್ನು ಸಮರ್ಪಕವಾಗಿ ನಿರ್ವಹಿಸಲಾಗುತ್ತಿದೆ ಅಲ್ಲದೆ ಹಲವಾರು ವರ್ಷಗಳಿಂದ ಕೆಲ ಗ್ರಾಮಗಳಿಗೆ ರಸ್ತೆ ಇಲ್ಲದ ಗ್ರಾಮಗಳನ್ನು ಗುರುತಿಸಿ ಅವುಗಳ ಶ್ರೇಯೋಭಿವೃದ್ದಿ ಕಂಕಣ ಬದ್ಧರಾಗಿದ್ದೇವೆ. ತಾಲೂಕಿನ ಬೆನಕೊಟಗಿ ಗ್ರಾಮಕ್ಕೆ ಹೋಗಲು ರಾಂಪೂರ ಮಾರ್ಗವಾಗಿ ತೆರಳಿದರೆ 8 ಕಿಮೀ ಆಗುತ್ತದೆ ಈ ರಸ್ತೆ ದುರಸ್ತಿ ಕಾರ್ಯದಿಂದ ಬರೀ 3.5 ಕಿಮೀ ಆಗುವುದು ಅದಕ್ಕೆ ಈ ಬಾಗದ ರೈತರ ಬಹುದಿನಗಳಿಂದ ಬೇಡಿಕೆ ಇಟ್ಟಿದ್ದರು ಅದನ್ನು ಯಾವುದೇ ಸರಕಾರಿ ಅನುದಾನ ಬಳಕೆ ಮಾಡದೇ ಶಾಸಕರ ಹೆಸರಿನಿಂದ ಎಂ.ಸಿ.ಮನಗೂಳಿ ಪ್ರತಿಷ್ಠಾನದಿಂದ ನಿರ್ಮಿಸಲಾಗುತ್ತಿದ್ದು ಕಾರಣ ಈ ರಸ್ತೆಗೆ ಹೊಂದಿಕೊಂಡು ಜಮೀನಿನ ರೈತರು ಜಾಗೆ ಅತಿಕ್ರಮಣ ಮಾಡಿಕೊಂಡಿದರೆ ರಸ್ತೆ ನಿರ್ಮಾಣಕ್ಕೆ ಅವಕಾಶ ನೀಡಬೇಕು ಎಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಪರಸುರಾಮ ಗೂಳೂರ, ಭೀಮನಗೌಡ ಬಿರಾದಾರ, ಲಕ್ಷ್ಮಣ ನಾರಾಯಣಕರ, ಚೆನ್ನು ಪಟ್ಟಣಶೆಟ್ಟಿ, ಅಯ್ಯಪ್ಪ ಹಿರೇಮಠ, ಮೋಹನ ಪತ್ತಾರ, ಸಿದ್ದು ಮಲ್ಲೇದ, ಮಹಿಬೂಬ ನಾಟೀಕಾರ, ಸೋಮು ಜೋಗುರ, ಬಾಬು ಕೊಯಿನಳ್ಳಿ, ಬಾಗಣ್ಣ ಸಿಂದಗಿ ಸೇರಿದಂತೆ ಹಲವರಿದ್ದರು.
ಮಹಾಂತೇಶ ನೂಲಾನವರ, ಸಿಂದಗಿ

LEAVE A REPLY

Please enter your comment!
Please enter your name here