ಸೇತುವೆ ಯಿಂದ ಜಿಗಿದು ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ | ಆತ್ಮಹತ್ಯೆ ಯತ್ನ | ಲೈವ್ ವಿಡಿಯೋ ವೈರಲ್

0

ಆತ್ಮಹತ್ಯೆ ಯತ್ನ : ಲೈವ್ವಿ ಡಿಯೋ ವೈರಲ್

ಕೊಡಗು:ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಹಳೆಯದಾದ ಸೇತುವೆ ಯಿಂದ ಜಿಗಿದು ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ನಡೆದಿದೆ.ಜೋರಾಗಿ ಬೀಳುತ್ತಿದ್ದ ಮಳೆಯ ನಡುವೆ ಬಲಮುರಿ ಸೇತುವೆ ಮೇಲೆ ಬಂದಿರುವ ಯಾರೂ ಓಡಾಡುವುದನ್ನು ಗಮನಿಸಿ ಉಕ್ಕಿ ಹರಿಯುವ ಕಾವೇರಿ ನದಿಗೆ ಹಾರಲು ಮೂದಲು ಮುಂದಾಗುತ್ತಿದ್ದಂತೆ ಆಟೋ ಒಂದು ಬಂದು ಅಡ್ಡಿ ಉಂಟುಮಾಡಿತು.ಆಟೋ ಅಲ್ಲಿಂದ ತೆರಳುತ್ತಿದಂತೆ ದೇವರಿಗೆ ಕೈಮುಗಿದು ನೀರಿಗೆ ಜಿಗಿದಿದ್ದಾಳೆ.ಈ ಸಂದರ್ಭ ಇಲ್ಲಿಗೆ ಸಮೀಪದಲ್ಲೇ ಮಳೆಗೆ ಆಶ್ರಯ ಪಡೆದಿದ್ದ ಯುವಕರು ಮಹಿಳೆಯ ನಡೆ ಅನುಮಾನಾಸ್ಪದವಾಗಿದ್ದ ಕಾರಣ ತಮ್ಮ ಮೂಬೈಲ್ ನಲ್ಲಿ ಚಿತ್ರೀಕರಿಸುತ್ತಿದ್ದರು ನೋಡನೋಡುತ್ತಿದ್ದಂತೆ ಮಹಿಳೆ ನೀರಿಗೆ ಜಿಗಿಯುದು ಸೆರೆಯಾಯಿತು.ತಕ್ಷಣವೇ ಕಾರ್ಯಪ್ರವೃತರಾದ ಯುವಕರು ತಕ್ಷಣ ಧಾವಿಸಿ ಮಹಿಳೆಯನ್ನು ರಕ್ಷಿಸಿದ್ದಾರೆ.ಸದ್ಯಕ್ಕೆ ಆಕೆಯನ್ನುಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಮಹಿಳೆಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಅತ್ಮಹತ್ಯೆ ಮಾಡಿಕೊಳಲ್ಲು ನಿರ್ಧಿಷ್ಟ ಕಾರಣ ತಿಳಿದುಬಂದಿಲ್ಲ. ಸದ್ಯಕ್ಕೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

LEAVE A REPLY

Please enter your comment!
Please enter your name here