ಜಂಗಮ ಜ್ಯೋತಿ ಲಿಂಗಾನಂದ ಅವರ ಕುರಿತು ಬರೆದ ಪುಸ್ತಕದ ಪರಿಚಯ

0

ಪುಸ್ತಕ ವಿಮರ್ಶೆ

ಪುಸ್ತಕ★
ಜಂಗಮ ಜ್ಯೋತಿ

ಲೇಖಕರು★
ಕವಿತಾ ಮಳಗಿ

“ಕಾರ್ತಿಕ ಕತ್ತಲಲ್ಲಿ ಅಕಾಶದೀಪವಾಗಿ 12ನೇ ಶತಮಾನದ ಪೂರ್ವದಲ್ಲಿ
ಅನೇಕ ಮೂಢನಂಬಿಕೆ ,ಸ್ತ್ರೀಯರ ಮೇಲಿನ ದೌರ್ಜನ್ಯ ಪ್ರಕರಣಗಳು, ಪುರೋಹಿತಶಾಹಿ ಧಾರ್ಮಿಕ ದೌರ್ಜನ್ಯ ಹೋಗಲಾಡಿಸಲು ,ಗುರು ಬಸವಣ್ಣನವರು ಈ ಧರೆಗೆ ಬಂದು ದೇವರ ಅವತರಿಗಳಾಗಿ ಬಸವಣ್ಣನವರು ಎಲ್ಲವು ಹೊಡೆದೋಡಿಸಿಬದಲಿಗೆ ಸಮಾನತೆ ಮತ್ತು ವೈಚಾರಿಕತೆ ಕಾಯಕ ತತ್ವ ದಾಸೋಹದ ಪರಿಕಲ್ಪನೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಯಶಸ್ವಿಯಾದರು. ಕಾಲಾಂತರದಲ್ಲಿ ಮತ್ತೆ ವಚನಗಳು ಹಾಗೂ ತತ್ವಗಳನ್ನು ಬೆಳಕಿಗೆ ಬಾರದೆ ಇದ್ದ ಸನ್ನಿವೇಶದಲ್ಲಿ, ಹರ್ಡೇಕರ್ ಮಂಜಪ್ಪನವರು ಹಾಗೂ ಫ, ಗು ಹಲಕಟ್ಟಿಯವರು ಮತ್ತೆ ವಚನ ಸಾಹಿತ್ಯ ಬೆಳಕಿಗೆ ಬರಲು ಕಾರಣ ರಾದ್ರು. ಮತ್ತೇ ಕಾಲಾಂತರದಲ್ಲಿ ವಚನ ಸಾಹಿತ್ಯ ಅತ್ಯಂತ ಹೆಚ್ಚು ಕಡಿಮೆ ಕಾಲದಲ್ಲಿ ಶೀಘ್ರ ವಾಗಿ ಮನೆ ಮನೆಗೆ ,ಮನ ಮನಕ್ಕೂ ಮುಟ್ಟಿಸಿದ್ದು ಮಾತ್ರವಲ್ಲದೆ, ಹಳ್ಳಿಗೆ ಏಕ ರಾತ್ರಿ ಪಟ್ಟಣ್ಣಕ್ಕೆ ಪಂಚರಾತ್ರಿಯಂತೇ , ತಮ್ಮ ಕಂಚಿನ ಕಂಠದಿಂದ ವಿಶ್ವ ಧರ್ಮ ಪ್ರವಚನ ಮಾಡುತ್ತಾಲಿದ್ದರು ಪೂಜ್ಯ ಶ್ರೀ ಅಪ್ಪಾಜಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಶ್ರೀ ಲಿಂಗಾನಂದ ಸ್ವಾಮೀಜಿ. ಒಂದು ಕಾಲದಲ್ಲಿ ಬಸವಣ್ಣ ಎಂದರೇ ಎತ್ತಿನ ರೂಪದಲ್ಲಿ ಪೂಜಿಸಲ್ಪಡುವ ನಂದಿ ರಂದ ಜನತೆಗೆ ಬಸವಣ್ಣ ಎತ್ತೆಲ್ಲ!,ನಮ್ಮನ್ನು ಮೇಲೆತ್ತುದ ಕ್ರಾಂತಿಕಾರಿ ಇತಿಹಾಸದ ಪುಟಗಳಲ್ಲಿ ಇರುವ ಮಹತ್ವದ ವ್ಯಕ್ತಿಯ ಪರಿಚಯ ಮಾಡಿಕೊಡುವ ನಿಟ್ಟಿನಲ್ಲಿ ಪ್ರಾಮುಖ್ಯತೆ ಪಡೆದವರು ಅಪ್ಪಾಜಿ. ಹಾಗೆಯೇ ಜಾತಿಯಿಂದ ಜಂಗಮತ್ವಬಾರದೆ, ಜ್ಞಾನದ ಜ್ಯೋತಿ ಬೆಳಗಿಸಿ ಸ್ವಯ0 ಸನ್ಯಾಸ ದೀಕ್ಷೆ ಪಡೆದ ಗಟ್ಟಿ ವ್ಯಕ್ತಿ ದಿಟ್ಟ ಹೋರಾಟ ಮಾಡಿದ ಪೂಜ್ಯ ಶ್ರೀ ಲಿಂಗಾನಂದ ಸ್ವಾಮೀಜಿ ಅವರ ಕುರಿತು ಶ್ರೀಮತಿ ಕವಿತಾ ಮಳಗಿರವರು ಅತ್ಯಂತ ಮಾರ್ಮಿಕವಾಗಿ ಜೀವನ ಚರಿತ್ರೆ ಬರೆದುರುವುದು ಅಭಿನಂದನಾರ್ಹ ಸಂಗತಿ. ಅವರ ಹುಟ್ಟಿನಿಂದ ಪ್ರತಿಯೊಂದು ಹಂತದಲ್ಲೂ ಒಂದಿಷ್ಟು ಹೊಸ ಹೊಸ ರೀತಿಯಲ್ಲಿ ನೋಡಿದವರಿಗೆ ಅಘಾದ ಎನ್ನುವ ಹಾಗೆ ಪ್ರತಿಯೊಂದು ಘಟ್ಟಗಳ ಮಾಹಿತಿಯನ್ನು ಪೂರ್ಣವಾಗಿ ಸಾದರ ಪಡಿಸಿದವರು ಶ್ರೀಮತಿ ಕವಿತಮಳಗಿ. ತಾನೇ ಸ್ವತಹ ಅವರನ್ನು ಒಮ್ಮೆಯೂ ನೋಡದೆ ಇರುವ ಅಕ್ಕಾ ಕವಿತಾ ಎಷ್ಟೆಲ್ಲ ಕಲೆ ಹಾಕಿದ್ದು ನಿಜಕ್ಕೂ ಇದು ಅದ್ಭುತವಾದ ಕಾದಂಬರಿ.

ಈ ಪುಸ್ತಕ ಓಡುವುದೇ ಒಂದು ದೊಡ್ಡ ಭಾಗ್ಯ. ಏಕೆಂದರೆ ಬಸವತತ್ವ ಜೊತೆಗೆ ಹಂತ ಹಂತವಾಗಿ ಬಾಲಕ ಸಂಗಮೇಶನ ಮಾನಸಿಕ ವಿಕಾಸಹಾಗೂ ಬೌದ್ಧಿಕ ವಲಯದಲ್ಲಿ ಒಬ್ಬ ವ್ಯಕ್ತಿ ಸಣ್ಣವರು ಇದ್ದರೂ ಸಹ ಹೇಗೆಲ್ಲ ಇತರರಿಗಿಂತಲೂ ಭಿನ್ನವಾಗಿ ಇರುವುರು ಎನ್ನುವುದು ಹೇಳುತ್ತಾ ಸಾಗಿದೆ. ಬಾಲಕ ಸಂಗಮೇಶ್ ಹುಟ್ಟಿನಿಂದಲೇ ಮೇಧಾವಿ, ದಿಟ್ಟ, ಸಹಸಮಯಿ ಅಷ್ಟೇ ಅಲ್ಲದೇ ಉತ್ತಮ ಕ್ರೀಡಾಪಟು ವಾಗ್ಮಿ ಕೂಡ ಎನ್ನುವುದು ಇಲ್ಲಿ ಅನಾವರಣವಾಗುತ್ತದೆ. ಒಂದು ಸಣ್ಣ ಪ್ರಸಂಗ, ಶಾಲೆಯಲ್ಲಿ ಭಾಷಣ ಸ್ಪರ್ಧೆ ನಡೆಯಿತು. ಅದರಲ್ಲೂ ವಿಶೇಷವಾಗಿ ದೇವರು ಇರುವನೋ ಇಲ್ಲವೂ ಅಂತ. ಈ ಸಂದರ್ಭದಲ್ಲಿ ಬಾಲಕ ಸಂಗಮೇಶ ದೇವರು ಇಲ್ಲ ಎನ್ನುವ ಬಗ್ಗೆ ಪರವಾಗಿ ಮಾತಾಡಿ ಪ್ರಥಮ ಸ್ಥಾನ ಪಡೆದನು. ಹೀಗೆ ಹಲವಾರು ರೀತಿಯ ಘಟನೆಗಳು ಇವೆ. ಹೀಗೆ ಇರುವ ಬಾಲಕ ಕಾಲೇಜು ಶಿಕ್ಷಣದಲ್ಲಿ ಅವರ ಒಬ್ಬ ಉಪನ್ಯಾಸಕರ ಮೇರುಗೆ ಬಸವಣ್ಣನವರ ವಚನಗಳು ಓದಲು ಶುರು ಮಾಡಿದ ಘಟನೆ ನಡೆದಿದ್ದು ಈಗಲೂ ಸಹ ಅನೇಕರಿಗೆ ಮಾರ್ಗ ಸೂಚಿ. ಅಪ್ಪಾಜಿ ಬದುಕಿನ ನೂರಾರು ಅನುಭವಗಳನ್ನೂ ಅದರಲ್ಲಿ ಒಂದು ವಿಶೇಷ ಆಗಿಹೋದ ಪ್ರಸಂಗ ಇಲ್ಲಿ ನೆನಪು ಮಾಡಿಕೊಂಡೇನು.
ಹೀಗೆ ಹಲವಾರು ರೀತಿಯ ಮಾಹಿತಿಗಳ ಸಮೇತ ಈ ಪುಸ್ತಕ ವಿಷಯ ಸಾದರ ಪಡಿಸುತ್ತದೆ. ಪ್ರತಿಯೊಂದು ಹಂತದಲ್ಲೂ ಲೇಖಕರು ಕಾಣದ ಕಣಿವೆಯಂತ್ತಿದ್ದ ಅಪ್ಪಾಜಿ ಜೀವನ ಮತ್ತು ಅವರ ವಿಚಾರಗಳನ್ನು ತಮ್ಮದೇ ಆದ ವೈಶಿಷ್ಟ್ಯ ಬರುವಣಿಗೆಯಲ್ಲೂ ಹೇಳಿದ್ಫು ನಿಜಕ್ಕೂ ಅಭಿನಂದನಾರ್ಹ.

ಪೂಜ್ಯ ಶ್ರೀ ಲಿಂಗಾನಂದ ಸ್ವಾಮೀಜಿ ಅವರ ಪುಸ್ತಕಗಳನ್ನು ಗಮನಿಸಿದರೆ ಪೂರ್ತಿಯಾಗಿ ಅವರ6ಅರ್ಥ ಮಾಡಿಕೊಂಡು ಇರಲು ಸಾಧ್ಯ ಎಂಬುದನ್ನು ಗಮನಿಸಬೇಕು. ಲೇಖಕರು ಕಾಣದ ವ್ಯಕ್ತಿತ್ವವನ್ನು ಕಂಡ ಕನಸು ಎಂಬoತ್ತೇ ಬರೆಯಲು ಈ ಕೆಳಗೆ ಸೂಚಿಸುವ ಪುಸ್ತಕಗಳೇ ಎನ್ನುವುದು ಸುಳ್ಳಲ್ಲ.

1.ಅಕ್ಕನ ಪ್ರವಚನ

2. ವಚನ ನವಿನೀತ

3 ಚಿನ್ಮೂಲಾಂದ್ರಿಯ ಚಿತಕಳೆ

4. ಚುಳಕಾದ ಚೇತನ

ಎಲ್ಲಾ ಕೃತಿಗಳು ಒಂದೊಂದು ರೀತಿ ವೈಶಿಷ್ಟ್ಯತೆ ಹೊಂದಿದೆ

ಕೆಸೆಟ್ಟುಗಳು
1. ಮಾನವ ಜೀವನದ ಗುರಿ

2. ದೇವರ ಸ್ವರೂಪ

3 . ಪೂರ್ವ ಜನ್ಮಮತ್ತು ಪುನರ್ಜನ್ಮ ಸಿದ್ಧಾಂತ

ಪೂಜ್ಯ ಅಪ್ಪಾಜಿ ಅವರ ಅಭೂತಪೂರ್ವ ಸಾಧನೆಗಳಲ್ಲಿ ಒಂದಾದ ಸ್ತ್ರಿ ಪೀಠ ಸ್ಥಾಪನೆ ಮರೆಯುವಂತಿಲ್ಲ. ಹೆಣ್ಣು ಮಾಯೆ ಅಲ್ಲ.ಅವಕಾಶ ನೀಡಬೇಕು ಆಗ ಮಾತೆ ಆಗುವಳು ಎನ್ನುವುದು ಇತಿಹಾಸಕೆ ನಾಂದಿ ಹಾಡಿದರು.

ಇಂತಹ ಒಂದು ದೊಡ್ಡ ಪ್ರಮಾಣದ ಪುಸ್ತಕ ಓದಿ ಆನಂದಿಸಿದ ನಂತರ ಈ ಸಂದರ್ಭದಲ್ಲಿ ಲೇಖಕರ ಬರವಣಿಗೆ ಹಾಗೂ ಸೂಕ್ಷ್ಮ ಗ್ರಹಣ ಶಕ್ತಿ ಹಾಗೂ ಅವರ ಆಲೋಚನೆ ಕಂಡು ಹೆಮ್ಮೆ ಎನಿಸುತ್ತದೆ. ಈ ಪುಸ್ತಕ ಒಂದು ಐತಿಹಾಸಿಕ ಮೈಲಿಗಲ್ಲು ಯಾಕೆಂದ್ರೆ ಪೂಜ್ಯರ ಜೀವನದ ಹತ್ತಾರು ಅರ್ಥಗಳನ್ನು ಬಿಂಬಿಸುವ ನೈಜ ಘಟನೆಗಳು ಆಧರಿಸಿ ಕೃತಿ ರಚನೆ ಮಾಡಿದ್ದು ಹೆಮ್ಮೆಯ ಸಂಗತಿ. ಮಾತಾಜಿ ಅವರ ಹತ್ತಿರದಿಂದ ಕಂಡು ಅಪ್ಪಾಜಿ ಪುಸ್ತಕಗಳನ್ನು ಓದಿ ಆನಂದಿಸಿ ಮಾತ್ರವಲ್ಲ ಅವರ ಬಗ್ಗೆ ಮಾಹಿತಿ ಸಂಗ್ರಹಿಸಿ ಬೃಹತ್ ಗಾತ್ರದ ಕೃತಿ ರಚನೆ ಮಾಡಿದ್ದೂ ಸಂತೋಷದ ಸಂಗತಿ. ಇಂಥ ಕೆಲವು ಸಾಧಕರ ಜೀವನ ಚರಿತ್ರೆ ಬರೆಯಲು ನನ್ನ ಅಕ್ಕ ಕವಿತಾ ಮಳಗಿ ಇನ್ನಷ್ಟೂ ಶಕ್ತಿಯನ್ನು ಮತ್ತೊಮ್ಮೆ ಮಗದೊಮ್ಮೆ ನಿರಂತರವಾಗಿ ಹಾರೈಕೆ ಇರಲಿ ಅಂತ ಬಸವಣ್ಣನವರ ಕೇಳಿಕೊಂಡು ಪೂರ್ಣ ವಿರಾಮ ನೀಡುವೆ

✍🏻 ಶ್ರೀಮತಿ ಶ್ವೇತಾ ವರಧಾ.

ಪುಸ್ತಕ ನನ್ನದೂ

ವಿಮರ್ಶ ಕರು

ಕವಿದ್ವನಿ ಸಾಹಿತಿಕ ಹಾಗೂ ಸಾಂಸ್ಕೃತಿಕ ಪ್ರತಿಷ್ಟಾನ ಕಲಬುರ್ಗಿ
ಉಪಾಧ್ಯಕ್ಷೆ
ಶ್ರೀಮತಿ ಶ್ವೇತಾ ವರದ್

LEAVE A REPLY

Please enter your comment!
Please enter your name here