ಹಾಲಿ ಶಾಸಕ ಎಸ್ ರಾಮಪ್ಪನವರು ಮತ್ತು ಮಾಜಿ ಶಾಸಕ ಹರೀಶ್ ನಡುವೆ ಸಭೆಯಲ್ಲಿ ವಾಗ್ವಾದ ನಡೆಯಿತು

0

ಹರಿಹರ
ಹಾಲಿ ಶಾಸಕ ಎಸ್ ರಾಮಪ್ಪನವರು ಮತ್ತು ಮಾಜಿ ಶಾಸಕ ಬಿಪಿ ಹರೀಶ್ ನಡುವೆ ಸಭೆಯಲ್ಲಿ ಭಾಗವಹಿಸಿದ್ದವರ ಅಭಿಪ್ರಾಯಗಳನ್ನು ಕ್ರೋಡೀಕರಿಸಿ ವೇಳೆಯಲ್ಲಿ ಕೆಲವು ಕಾಲ ವಾಗ್ವಾದ ನಡೆಯಿತು ವೇದಿಕೆ ಮೇಲೆ ಇದ್ದ ಡಿವೈಎಸ್ಪಿ ಮತ್ತು ಸಿಪಿಐ ಹಾಗೂ ತಾಲ್ಲೂಕ ಅಡಳಿತ ಇಬ್ಬರ ನಡೆವೆ ಸಂದಾನ ಮಾಡುವುದಕ್ಕೆ ಹರಸಾಹಸ ಪಡಬೇಕಾಯಿತು ಒಂದು ಕಡೆ ಹಾಲ್ಲಿ ಮತ್ತು ಮಜಿ ಶಾಸಕರ ನಡೆವೆ ವಾಗ್ವದ ನಡೆಯುವ ವೇಳೆಯಲ್ಲಿ ಇನ್ನೂಬ್ಬರು ಮಾಜಿ ಶಾಸಕರಾದ ಹೆಚ್.ಎ.ಶಿವಶಂಕರ್ ರವರ ಬೆಂಬಲಿಗರು ಹಾಗೂ ನಗರಸಭೆ ಸದಸ್ಯರು ನಮ್ಮ ಮಾಜಿ ಶಾಸಕರಿಗೆ ಬಿಟ್ಟು ಈ ಸಭೆ ಮಾಡುತ್ತಿದ್ದರೆ ಎಂದು ವಿರೋಧ ವೆಕ್ತಪಡಿಸಿದರು ನಂತರ ಸಂಧಾನ ಯಶಸ್ವಿಯಾಗಿದೆ

ಕೊರೊನಾ ಸೋಂಕು ತೀವ್ರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಾಗೂ ನಗರ ವ್ಯಾಪ್ತಿಯಲ್ಲಿ ಸುಮಾರು 89 ಸೋಂಕಿತರು ಇದ್ದಾರೆ 29 ಸ್ಥಳಗಳಲ್ಲಿ ಸೀಲ್ ಡೌನ ಮಾಡಲಾಗಿದೆ ಎಂದು ಹರಿಹರ ವಿಧಾನಸಭೆ ಕ್ಷೇತ್ರದ ನಾಗರೀಕರು ನಿತ್ಯ ಸಂಜೆ 5 ರವರೆಗೆ ಲಾಕ್ ಡೌನ್ ಗೆ ಸ್ಥಳೀಯ ಶಾಸಕರೂ ಆಗಿರುವ ಎಸ್ ರಾಮಪ್ಪ ನೇತೃತ್ವದಲ್ಲಿ ಶನಿವಾರ ನಡೆದ ತುರ್ತು ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಂಡಿದ್ದಾರೆ.

ಎಸ್ ಜೆ.ವಿ.ಪಿ ಕಾಲೇಜ್ ಸಭಾಂಗಣದಲ್ಲಿ ನಡೆದ ಈ ಸಭೆಯಲ್ಲಿ ಮಾಜಿ ಶಾಸಕ ಬಿ ಪಿ ಹರೀಶ್ ತಮ್ಮ ಅಭಿಪ್ರಾಯ ಮಂಡಿಸುವ ವೇಳೆಯಲ್ಲಿ ಹಾಲಿ ಶಾಸಕ ಮಾತನಾಡಿ ಇದರಲ್ಲಿ ಯಾರು ರಾಜಕೀಯ ಮಾಡ ಬಾರದು ನಮ್ಮ ಹರಿಹರ ತಾಲೂಕಿನ ಜನರಿಗೆ ರಕ್ಷಣೆಗಾಗಿ ಕುರಿತು ಈ ಸಭೆಯಲ್ಲಿ ಮಾತನಾಡ ಬೇಕು ಎಂದು ಹೇಳಿದಾಗ ಮಾಜಿ ಶಾಸಕರು ನಾವು ಇಲ್ಲಿ ರಾಜಕೀಯ ಮಾಡುತ್ತಿಲ್ಲ ನಮ್ಮಗೆ ಜನರ ಹಿತದೃಷ್ಟಿಯಿಂದ ನಾವು ಸಂಜೆ 8 ಗಂಟೆಗಳ ಕಾಲ ಸಮಯವನ್ನ ನಿಗದಿ ಪಡಿಸಿ ಎಂದರು

ಹರಿಹರ ಮತ್ತು ದಾವಣಗೆರೆ ಎರಡು ಅವಳಿ ನಗರ ಹರಿಹರದಿಂದ ಕೇವಲ 10 ಕೀಲೂ ಮೀಟರ್ ದೂರದಲ್ಲಿ ಇರುವ ದಾವಣಗೆರೆ ನಮ್ಮ ನಗರದ ಜನತೆ ದಾವಣಗೆರೆ ಹೋಗಿ ನಿತ್ಯ ಬಳಸುವ ಸಾಮಾಗ್ರಿಗಳನ್ನು ಖರಿಧೀಸಿ ಮಾಡುವುದರಿಂದ ಕೊರೋನಾ ಸೋಂಕು ನಮ್ಮ ನಗರಕ್ಕೆ ಬರುವ. ಕಾರಣವಾಗಿದೆ ನಾಗರಿಕರ ರಕ್ಷಣೆಗೆ ಒತ್ತು ನೀಡುವ ವಿಚಾರದಲ್ಲಿ ದಾವಣಗೆರೆ ಯಲ್ಲಿ ಯಾವ ಸಮಯವನ್ನು ನಿಗಧಿ ಪಡಿಸುತ್ತಾರೆ ಅದೆ ಮಾದರಯಲ್ಲಿ ನಮ್ಮ ನಗರದಲ್ಲಿ ಸಮಯವನ್ನು ನಿಗದಿ ಪಡಿಸ ಬೇಕು ಎಂದು ಮಾಜಿ ಶಾಸಕ ಬಿ.ಪಿ.ಹರೀಶ್ ಒತ್ತಾಯಿಸಿದರು.

ನಂತರ ತಾಲ್ಲುಕ ದಂಡಮಾತನಾಡಿ ಕೆ.ಬಿ ರಾಮಚಂದ್ರಪ್ಪ ಮಾತನಾಡಿ ಕ್ಷೇತ್ರದಲ್ಲಿ ದಿನೇ ದಿನೇ ಕಾಳ್ಗಿಚ್ಚಿನಂತೆ ಹಬ್ಬುತ್ತಿರುವ ಕೊರೊನಾ ನಿಯಂತ್ರಣ ಮಾರ್ಗೋಪಾಯಗಳನ್ನು ಕಂಡುಹಿಡಿಯಲು ಈ ಸಭೆ ಕರೆಯಲಾಗಿತ್ತು. ನಾನಾ ರಾಜಕೀಯ ಪಕ್ಷಗಳ ಮುಖಂಡರು, ಇಲಾಖೆಗಳ ಅಧಿಕಾರಿಗಳು, ಸಾಮಾಜಿಕ ಮತ್ತು ನಾಗರೀಕ ಸಂಘಟನೆಗಳ ಪ್ರತಿನಿಧಿಗಳು, ಉದ್ಯಮಿಗಳು, ವರ್ತಕರು ಮತ್ತಿತರರು ಭಾಗವಹಿಸಿದ್ದ ಈ ಸಭೆಯಲ್ಲಿ ದಿನ ಬೆಳ್ಳಗೆ 6ರಿಂದ ಸಂಜೆ 5 ರವರೆಗೆ ಲಾಕ್‌ಡೌನ್ ವಿನಾಯಿತಿ ಸಮಯ ಬಗ್ಗೆ ಏಕಮತ ನಿರ್ಧಾರಕ್ಕೆ ಬರಲಾಯಿತು.

ಇದು ಮಕ್ಕಳು, ವೃದ್ಧರು ಸೇರಿದಂತೆ ಸ್ಥಳೀಯ ನಾಗರಿಕರ ಹಿತದೃಷ್ಟಿ, ಆರೋಗ್ಯ ರಕ್ಷಣೆ, ಹರಿಹರ ಕ್ಷೇತ್ರದ ಗೌರವ ಕಾಪಾಡಿಕೊಳ್ಳಲು ಅನಿವಾರ್ಯ. ನಂತರ ಪರಿಸ್ಥಿತಿಯನ್ನು ಅವಲೋಕಿಸಿ, ಇದೇ ರೀತಿ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳೋಣ. ನಾವೆಲ್ಲರೂ ಒಟ್ಟಿಗೆ ಸ್ವಯಿಚ್ಛೆಯಿಂದ ತೆಗೆದುಕೊಂಡಿರುವ ನಿರ್ಣಯ ಇದು ಎಂಬ ನಿಲುವಿಗೆ ಸಭೆಯಲ್ಲಿ ಬರಲಾಯಿತು.

ಈ ಲೌಕ್ ಡೌನ್ ಗೂ ರಾಜ್ಯ ಸರಕಾರದ ಆದೇಶವಲ್ಲ. ಹರಿಹರ ಜನತೆ ಮುನ್ನೆಚ್ಚರಿಕೆ ಕ್ರಮವಾಗಿ ತೆಗೆದುಕೊಂಡಿರುವ ಪ್ರಜ್ಞಾಪೂರ್ವಕ ಸ್ವಂತ ನಿರ್ಣಯ. ಜೀವವಿದ್ದರೆ ಜೀವನ ಎಂಬ ನಂಬುಗೆಯ ಆಧಾರದಲ್ಲಿ ಕೈಗೊಂಡಿರುವ ಮಾದರಿ ನಿರ್ಧಾರ. ನಮ್ಮ ತಾಲ್ಲೂಕಿನ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಗಲು ರಾತ್ರಿ ಸೇವೆ ಮಾಡುತ್ತಿದ್ದಾರೆ ಅದಕ್ಕಾಗಿ ಅವರನ್ನು ನಾನು ಅಭಿನಂದಿಸುತ್ತೇನೆ.ಎಂದು ಹೇಳಿದರು

ಲಾಕ್‌ಡೌನ್ ವಿನಾಯಿತಿ ಸಮಯ ಬೆಳಗ್ಗೆ 6 ರಿಂದ 5 ಗಂಟೆವರೆಗೆ ಮಾತ್ರ ದಿನಸಿ ವಸ್ತುಗಳು, ಹಣ್ಣು, ತರಕಾರಿ, ಸೊಪ್ಪು, ಮಾಂಸ ಮತ್ತಿತರ ದಿನಬಳಕೆ ಆಹಾರ ವಸ್ತುಗಳ ಮಾರಾಟಕ್ಕೆ ವರ್ತಕರು ಸಮ್ಮತಿಸಿದ್ದಾರೆ. ಕ್ಲಿನಿಕ್ ಗಳು, ಔಷದ ಅಂಗಡಿಗಳ ಸಮಯಾವಧಿ ಬಗ್ಗೆ ತಾಲ್ಲೂಕ ಅಡಳಿತ ಹಾಗೂ ಆರೋಗ್ಯಾಧಿಕಾರಿಗಳು,ಜೊಲ್ಲಾಧಿಕಾರಿ ಮತ್ತು, ಆಸ್ಪತ್ರೆ ಪ್ರತಿನಿಧಿಗಳು ನಿರ್ಣಯ ಮಾಡುತ್ತಾರೆ. ಅಬಕಾರಿ ಇಲಾಖೆ ಅಧಿಕಾರಿಗಳು ಹಾಗೂ ಅಸೋಸಿಯೇಷನ್ ನವರು ಮದ್ಯದಂಗಡಿಗಳ ಸಮಯ ನಿಗದಿ ಮಾಡುತ್ತಾರೆ. ಆದರೆ ಎಲ್ಲ ಬಗೆಯ ವರ್ತಕರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು ಹಾಗೂ ವ್ಯಾಪಾರ ಸ್ಥಳದಲ್ಲಿ ಸ್ಯಾನಿಟೈಸರ್ ವ್ಯವಸ್ಥೆ ಮಾಡಬೇಕು. ಇದರ ಬಗ್ಗೆ ಪೊಲೀಸ್ ಇಲಾಖೆ ಸಿಬ್ಬಂದಿ ನಿಗಾ ವಹಿಸುತ್ತದೆ.

ಈ ವೇಳೆಯಲ್ಲಿ ತಾಲ್ಲೂಕ ಪಂಚಯತ್ ಅಧ್ಯಕ್ಷೆ ಶ್ರೀ ದೇವಿ,ಡಿವೈಎಸ್‍ಪಿ ಸಿಪಿಐ ಶಿವಪ್ರಸಾದ ನಗರಸಭೆ ಪೌರಯುಕ್ತೆ ಎಸ್ ಲಕ್ಷ್ಮೀ,ತಾಲ್ಲೂಕ ಆರೋಗ್ಯ ಅಧಿಕಾರಿ ಡಾ.ಚಂದ್ರಮೊಹನ್,ಪಿಎಸ್‍ಐ.ಶೈಲ್ಯಶ್ರೀ ನಗರಸಭೆ ಸದಸ್ಯರು ಸರ್ವಪಕ್ಷದ ಮುಖಂಡರು ವರ್ತಕರು ಬೀದಿ ಬದಿ ವ್ಯಾಪಾರಸ್ಥರು ಸೇರಿದಂತೆ ಸಿಬ್ಬಂದಿ ವರ್ಗ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here