ಹಿಂದಿನ ವಿದ್ಯಾರ್ಥಿ ಸಂಘದದಿಂದ ಶೈಕ್ಷಣಿಕ ದತ್ತು ಸ್ವೀಕಾರ…!

0

ಹಿಂದಿನ ವಿದ್ಯಾರ್ಥಿ ಸಂಘದದಿಂದ ಶೈಕ್ಷಣಿಕ ದತ್ತು ಸ್ವೀಕಾರ…!

ವಿದ್ಯಾರ್ಥಿಗಳಲ್ಲಿ ಕೇವಲ ಪಠ್ಯಪುಸ್ತಕದ ಮಾಹಿತಿಯನ್ನು ಮಾತ್ರ ತಿಳಿಸದೆ ಸಾಮಾಜಿಕ ಕಳಕಳಿಯನ್ನು ಬಿತ್ತರಿಸಿದ ಪರಿಣಾಮಕ್ಕೆ ಸಾಕ್ಷಿ ಇವತ್ತಿನ ಶೈಕ್ಷಣಿಕ ದತ್ತು ಕಾರ್ಯಕ್ರಮ ಎಂದು ಪ್ರಾಚಾರ್ಯ ಆರ್ ಎಮ್ ದೇವರಡ್ಡಿ ಅವರು ಹೇಳಿದರು.

ಅವರು ಸ್ಥಳೀಯ ಶ್ರೀ ಕೆ ಎ ಲೋಕಾಪೂರ ಪದವಿ ಮಹಾವಿದ್ಯಾಲಯದಲ್ಲಿ ಸನ್ 2012-13 ನೇ ಸಾಲಿನ ಬಿ.ಕಾಮ್ ಅಂತಿಮ ವರ್ಷದ ವಿದ್ಯಾರ್ಥಿ ಬಳಗದ ವತಿಯಿಂದ ಓರ್ವ ಬಡ ಪ್ರತಿಭಾನ್ವಿತ ವಿದ್ಯಾರ್ಥಿನಿಯನ್ನು ಶೈಕ್ಷಣಿಕವಾಗಿ ದತ್ತು ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಮುಂದುವರೆದು ಮಾತನಾಡಿದ ಅವರು ಹಲವಾರು ತಾವು ಕಲಿತಿರುವ ಶಾಲೆ ಹಾಗೂ ಸಂಸ್ಥೆಗೆ ಸಹಾಯ ಮಾಡುವುದನ್ನು ನಾವು ನೋಡಿದ್ದೆವೆ ಆದರೆ ಈ ಹಿಂದಿನ ವಿದ್ಯಾರ್ಥಿಗಳು ತಾವು ಕಲಿತ ಕಾಲೇಜಿನಲ್ಲಿ ಆರ್ಥಿಕ ಸಮಸ್ಯೆ ಎದುರಿಸುವ ಬಡ ವಿದ್ಯಾರ್ಥಿಗೆ ಆರ್ಥಿಕ ಸಹಾಯ ಮಾಡುವ ಕಾರ್ಯ ವಿನೂತನವಾದದ್ದು ಇದನ್ನು ನೋಡಿದರೆ ನಮ್ಮ ಹಿಂದಿನ ವಿದ್ಯಾರ್ಥಿಗಳಿಂದ ಮುಂದಿನ ವಿದ್ಯಾರ್ಥಿಗಳಿಗೆ ಸಹಾಯಮಾಡುವ ಗುಣ ನಾವೆಲ್ಲ ಹೆಮ್ಮೆ ಪಡುವಂತಹದ್ದಾಗಿದೆ ಎಂದರು.

ಈ ವೇಳೆ ಉಪಪ್ರಾಚಾರ್ಯ ಗಿರೀಶ ಕುಲಕರ್ಣಿ, ಸಂತೋಷ ಬಡಕಂಬಿ ಮಾತನಾಡಿದರು.

ಈ ವೇಳೆ ಉಪನ್ಯಾಸಕರಾದ ಗೌರೀಶ ದಿಕ್ಷೀತ. ಭಾಗ್ಯಶ್ರೀ ಗುಂಡಾ, ವಿಶಾಲ ದೇಶಪಾಂಡೆ, ಎಮ್ ಎ ಗುಡ್ಡಾಪೂರ, ನಿಲೇಶ ಝರೆ, ಗಜಾನನ ಕೋರೆ, ಸಿದ್ರಾಮ ಗಡದೆ, ರಾಕೇಶ ಚೌಗಲಾ ಮತ್ತು ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿನಾಯಕ ದೇಶಪಾಂಡೆ, ಪ್ರವೀಣ ನಾಯಿಕ, ನೇತಾಜಿ ಮಾಲುಸರೆ, ಸುಪ್ರೀತ ಚೌಗಲಾ, ವಿಶ್ವೇಶ ಅಥಣೀಕರ, ಚಿರಂಜೀವಿ ಖೋತ, ಅವಿನಾಶ ಬೀರಜ ಸೇರಿದಂತೆ ಇತರರು ಹಾಜರಿದ್ದರು…

ಪೊಟೊ ಶೀರ್ಷಿಕೆ- ಹಿಂದಿನ ವಿದ್ಯಾರ್ಥಿ ಸಂಘದ ವತಿಯಿಂದ ಶೈಕ್ಷಣಿಕ ದತ್ತು ಪಡೆದ ವಿದ್ಯಾರ್ಥಿ ಪಾಲಕರಿಗೆ ಚೆಕ್ಕಿನ‌ ಮೂಲಕ ಧನಸಹಾಯ ಮಾಡಿದ ದ್ರಶ್ಯ

LEAVE A REPLY

Please enter your comment!
Please enter your name here