ಹಿಂದುಗಳ ಮೇಲೆ ಪಾಕ್‌ನಲ್ಲಿ ದೌರ್ಜನ್ಯ: ವಿಶ್ವಸಂಸ್ಥೆ ವೇದಿಕೆಯಲ್ಲಿ ಭಾರತದಿಂದ ತರಾಟೆ

0

ಹಿಂದುಗಳು ಸೇರಿದಂತೆ ಎಲ್ಲ ಅಲ್ಪಸಂಖ್ಯಾತರ ಮೇಲೆ ಪಾಕಿಸ್ತಾನದಲ್ಲಿ ದೌರ್ಜನ್ಯ ನಡೆಯುತ್ತಿದೆ ಎಂದು ವಿಶ್ವಸಂಸ್ಥೆಯ ವೇದಿಕೆಯೊಂದರಲ್ಲಿ ಭಾರತ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದು, ದೌರ್ಜನ್ಯವನ್ನು ಕೂಡಲೇ ನಿಲ್ಲಿಸಲು ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದೆ.

ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ (ಯುಎನ್‌ಎಚ್‌ಆರ್‌ಸಿ) 45ನೇ ಅಧಿವೇಶನದಲ್ಲಿ ಮಾತನಾಡಿದ ಭಾರತೀಯ ಪ್ರತಿನಿಧಿ, ”ಪಾಕಿಸ್ತಾನದಲ್ಲಿ ಸಾವಿರಾರು ಸಿಖ್ಖರು, ಹಿಂದುಗಳು ಮತ್ತು ಕ್ರೈಸ್ತ ಅಲ್ಪಸಂಖ್ಯಾತ ಮಹಿಳೆಯರು ಹಾಗೂ ಹುಡುಗಿಯರು ಅಪಹರಣಕ್ಕೆ ಒಳಗಾಗುತ್ತಿದ್ದಾರೆ. ಅವರನ್ನು ಮತಾಂತರ ಮಾಡಿ ಲವಂತದ ಮದುವೆಗಳನ್ನು ಮಾಡಲಾಗುತ್ತಿದೆ” ಎಂದು ತಿಳಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನದ ಕರಾಳ ಮುಖವನ್ನು ಯಲು ಮಾಡಿದ್ದಾರೆ.

ಭಯೋತ್ಪಾದನೆಗೆ ಸಂಬಂಧಿಸಿದಂತೆ ಪಾಕ್ ಮಾಡಿದ್ದ ಟೀಕೆಗೆ ಪ್ರತಿಕ್ರಿಯಿಸಿದ ಭಾರತೀಯ ಪ್ರತಿನಿಧಿ, ”ಪಾಕಿಸ್ತಾನ ನಿರಂತರವಾಗಿ ಹಿಂದು, ಸಿಖ್ಖರು ಮತ್ತು ಕ್ರೈಸ್ತರ ಸಹಿತ ಧಾರ್ಮಿಕ ಅಲ್ಪಸಂಖ್ಯಾತರಿಗೆ ಕಿರುಕುಳ ನೀಡುತ್ತಲೇ ಂದಿದೆ. ಆದ್ದರಿಂದ ಮಾನವ ಹಕ್ಕುಗಳ ಉಲ್ಲಂಘನೆ ವಿಚಾರದಲ್ಲಿ ಬೋಧಿಸಲು ಅದಕ್ಕೆ ಅರ್ಹತೆಯಿಲ್ಲ” ಎಂದು ವಾಗ್ದಾಳಿ ಮಾಡಿದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ಹೋರಾಡಲು ಸಾವಿರಾರು ಭಯೋತ್ಪಾದಕರಿಗೆ ತನ್ನ ದೇಶ ತರಬೇತಿ ನೀಡುತ್ತಿದೆಯೆಂದು ಸ್ವತಃ ಪಾಕ್ ಪ್ರಧಾನಿ ಇಮ್ರಾನ್ ಖಾನ್‌ರೇ ಒಪ್ಪಿಕೊಂಡಿದ್ದಾರೆ. ವಿಶ್ವ ಸಂಸ್ಥೆಯ ಭಯೋತ್ಪಾದಕರ ಪಟ್ಟಿಯಲ್ಲಿರುವವರಿಗೆ ಪಾಕ್ ಪಿಂಚಣಿಯನ್ನೂ ನೀಡುತ್ತಿದೆ. ಭಯೋತ್ಪಾದನೆಗೆ ಹಣಕಾಸು ನೆರವು ನೀಡುವುದನ್ನು ನಿಲ್ಲಿಸುವಲ್ಲಿ ಪಾಕ್ ವಿಲವಾಗಿದೆ. ಅಲ್ಲಿರುವ ಎಲ್ಲ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಪರಿಣಾಮಕಾರಿ ಕ್ರಮಗಳನ್ನು ಅದು ಕೈಗೊಳ್ಳುತ್ತಿಲ್ಲ ಎಂಬುದಾಗಿ ಸಂಂಧಪಟ್ಟ ಜಾಗತಿಕ ಸಂಸ್ಥೆಗಳೇ ಹೇಳುತ್ತಿವೆ ಎಂದು ಭಾರತೀಯ ಪ್ರತಿನಿಧಿ ತಿಳಿಸಿದರು.

 

LEAVE A REPLY

Please enter your comment!
Please enter your name here