ಹುಡುಕಿಕೊಡಿ

0

ಶೀರ್ಷಿಕೆ: ಹುಡುಕಿಕೊಡಿ
ರಚನೆ: ಪರಶುರಾಮ್. ಎ

ಹುಡುಕಿಕೊಡುವಿರ ಮನುಷ್ಯತ್ವವ ಗೆಳೆಯರೆ?
ಹಸಿವಿಗಾಗಿ ಬ್ರೆಡ್‌ ಕದ್ದವನ
ಬಡಿದು ಕೊಂದ ಜಾಗದಲ್ಲಿ!!

ಬಿಸಿಲಿನಲ್ಲಿ ಭಿಕ್ಷೆ ಬೇಡಿ ಬಂದವರ ಮುಂದೆ
ನಿಮ್ಮ ಶ್ರೀಮಂತಿಕೆಯ ಮುಂದಿಟ್ಟಿರಲ ಅಲ್ಲಿ!!

ಜಾತಿ ತ್ಯಜಿಸಿ ಪ್ರೀತಿಸಿ ಮದುವೆಯಾಗಲು
ಇಚ್ಚಿಸಿದವರ ಕೊಂದರಲ್ಲ ಆ ಸಮಯದಲ್ಲಿ!!

ಧರ್ಮ ಧರ್ಮಗಳ ನಡುವೆ ಕಲಹ ದ್ವೇಷ ಹಚ್ಚಿ
ಸ್ನೇಹ ಸೌಹಾರ್ದ ಮರೆತರಲ್ಲ ಆ ಕಾಳಗದಲ್ಲಿ!!

ಅಪಘಾತದಲ್ಲಿ ಗಾಯಗೊಂಡು ರಸ್ತೆಯಲ್ಲಿ ಬಿದ್ದು
ಸಹಾಯಕ್ಕಾಗಿ ಅಂಗಲಾಚಿ ಬೇಡಿದರು ಸುಮ್ಮನೆ
ಕಂಡು ಕಾಣದಂತೆ ಹೋಗಿ ಸತ್ತ ವ್ಯಕ್ತಿಗೆ!!

ಜಾತಿ ಧರ್ಮದ ಅಮಲು ಹೆಚ್ಚಿಸಿಕೊಂಡು
ಮಾನವೀಯ ಮೌಲ್ಯಗಳನ್ನು ಮರೆತವರಲ್ಲಿ!!
ಹುಡುಕಿಕೊಡುವಿರ ಮನುಷ್ಯತ್ವವ ಗೆಳೆಯರೆ?

LEAVE A REPLY

Please enter your comment!
Please enter your name here