ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಬರೋಬ್ಬರಿ 6.6 ಕೋಟಿ ಮೌಲ್ಯದ ಚಿನ್ನ ಜಪ್ತಿ

0

ಹೈದರಾಬಾದ್​ ವಿಮಾನ ನಿಲ್ದಾಣದಲ್ಲಿ ಬರೋಬ್ಬರಿ 6.6 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ 21 ಕಿಲೋ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ವಶಪಡಿಸಕೊಂಡ ಒಟ್ಟು ಚಿನ್ನದ ಮೌಲ್ಯ 6,62,46,387 ರೂಪಾಯಿ ಎಂದು ಅಂದಾಜಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಕಸ್ಟಮ್ಸ್ ಅಧಿಕಾರಿಗಳ ಜತೆಗೆ ಜಿಎಸ್​ಟಿ ಅಧಿಕಾರಿಗಳೂ ತನಿಖೆಯ ನಡೆಸುತ್ತಿದ್ದು, ಲೂಸ್ ಡೈಮಂಡ್​, ವಿವಿಧ ಅಮೂಲ್ಯ ಹರಳುಗಳು, ವಾಚ್​, ಪ್ಲಾಟಿನಂ ಟಾಪ್ಸ್, ಆಂಟಿಕ್ ನಾಣ್ಯಗಳು ಕೂಡ ಇದರಲ್ಲಿ ಸೇರಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here