ಹೊರರಾಜ್ಯದಿಂದ ನಗರಕ್ಕೆ ಬರುವ ಕಾರ್ಮಿಕರಿರಲಿ ಅಥವಾ ಇನ್ಯಾವುದೇ ವ್ಯಕ್ತಿಯಾಗಿರಲಿ ಅವರನ್ನು ಕಡ್ಡಾಯವಾಗಿ ಕ್ವಾರಂಟೈನ್‍ ವಿಡಿಯೋ

0

 

ಹೊರರಾಜ್ಯದಿಂದ ನಗರಕ್ಕೆ ಬರುವ ಕಾರ್ಮಿಕರಿರಲಿ ಅಥವಾ ಇನ್ಯಾವುದೇ ವ್ಯಕ್ತಿಯಾಗಿರಲಿ ಅವರನ್ನು ಕಡ್ಡಾಯವಾಗಿ ಕ್ವಾರಂಟೈನ್‍ಗೆ ಒಳ ಪಡಿಸುವಂತೆ ಅಧಿಕಾರಿಗಳಿಗೆ ಶಾಸಕ ಎಸ್. ರಾಮ ಪ್ಪ ಸೂಚನೆ ನೀಡಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣ ದಲ್ಲಿ ಮಳೆ ಮತ್ತು ಕೋವಿಡ್-19 ಬಗ್ಗೆ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು ತಾಲೂಕ ಆರೋಗ್ಯಾಧಿಕಾರಿ ಡಾ.ಚಂದ್ರ ಮೋಹನ್ ರವರಿಗೆ ಸೂಚಿಸಿದ ಅವರು ಎಷ್ಟು ಜನ ಈಗ ಕ್ವಾರಂಟೈಲ್ ನಲ್ಲಿದ್ದಾರೆ, ಅವರ ಸ್ಥಿತಿ ಗತಿ ಏನು ಎಂದು ವಿಚಾರಿಸಿ ಮಾಹಿತಿ ಪಡೆದರು.
ಶಾಸಕರಿಗೆ ಉತ್ತರಿಸಿದ ತಾಲೂಕ ಆರೋಗ್ಯಾಧಿ ಕಾರಿಗಳು ಈಗ ಸದ್ಯ ಹರಿಹರದಲ್ಲಿ ಮಹಾರಾಷ್ಟ್ರ ಗುಜರಾತ್ ಮತ್ತು ಚೆನ್ನೈನಿಂದ ಬಂದಿರುವ 25 ಜನರು ಕ್ವಾರಂಟೈಲ್ ನಲ್ಲಿದ್ದು, ಇವರೆಲ್ಲರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು, ಅವರ ಪರೀಕ್ಷಾ ವರದಿ ಎಲ್ಲರೂ ನೆಗೆಟಿವ್ ಫಲಿತಾಂಶ ಬಂದಿದ್ದು ಅವಧಿ ಮುಗಿದ ತಕ್ಷಣ ಅವರನ್ನು ಮುಕ್ತ ಗೊಳಿಸಲಾಗುವುದು ಎಂಬ ಮಾಹಿತಿಯನ್ನು ನೀಡಿದರು.
ತಾಲೂಕಿಗೆ ಹೊರರಾಜ್ಯದಿಂದ 198 ಮತ್ತು ಹೊರ ಜಿಲ್ಲೆಯಿಂದ 4275 ಜನರು ಬಂದಿರುತ್ತಾರೆ ಎಲ್ಲರನ್ನೂ ಆರೋಗ್ಯ ಕಾರ್ಯಕರ್ತರು ಪರಿಶೀಲನೆ ನಡೆಸಿದ್ದಾರೆ. ಈಗ ಗಂಟಲು ಮಾದರಿ ತೆಗೆಯಲು ಹರಿಹರದಲ್ಲಿ ವ್ಯವಸ್ಥೆ ಮಾಡಲಾಗಿರುವುದರಿಂದ ಎಲ್ಲರನ್ನೂ ತಪಾಸಣೆಗೆ ಒಳಪಡಿಸಲಾಗಿದೆ ಯಾವುದೇ ಪಾಜಿಟಿವ್ ಪ್ರಕರಣಗಳು ದಾಖಲಾಗಿಲ್ಲವೆಂಬ ಸಂತೋಷವಿದೆ ಎಂದು ಸಭೆಯಲ್ಲಿ ತಿಳಿಸಿದರು.
ಕೃಷಿ ಇಲಾಖೆಯ ಬಗ್ಗೆ ಮಾಹಿತಿ ನೀಡಿದ ಅಧಿಕಾರಿ ಗೋವರ್ಧನ್ ಈವರೆಗೆ ತಾಲೂಕಿನಲ್ಲಿ 53.84 ಮಿ. ಮೀ.68% ಮಳೆಯಾಗಿದ್ದು ಉತ್ತಮ ಫಲಿತಾಂಶ ನೀಡಿದೆ, ಬತ್ತ ಕಟಾವಿಗೆ ಬಂದಿದ್ದು ಮಳೆಯಿಂದ ಸುಮಾರು 1895 ಎಕರೆ ಪ್ರದೇಶಕ್ಕೆ ಹಾನಿಯಾಗಿದೆ ರೂ,1.23 ಕೋಟಿ ನಷ್ಟ ಅಂದಾಜಿಸಲಾಗಿದ್ದು ಫಲಾನುಭವಿಗಳ ಪಟ್ಟಿ ಮತ್ತು ವರದಿಯನ್ನು ಇನ್ನು ಎರಡು-ಮೂರು ದಿನಗಳಲ್ಲಿ ಜಿಲ್ಲಾಧಿಕಾರಿಗಳಿಗೆ ರವಾನಿಸಲಾಗುವುದು ಎಂದು ಸಭೆಗೆ ತಿಳಿಸಿದರು.
ಮುಂದಿನ ಮುಂಗಾರು ಹಂಗಾಮಿಗೆ ರೈತರಿಗೆ ಒದಗಿಸುವುದಕ್ಕಾಗಿ ಬೀಜ ಹಾಗೂ ರಸಗೊಬ್ಬರ ವನ್ನು ಸಾಕಷ್ಟು ದಾಸ್ತಾನು ಮಾಡಲಾಗಿದೆ. ಯಾವು ದೇ ತೊಂದರೆ ಇರುವುದಿಲ್ಲ. ಕೃಷಿ ಇಲಾಖೆಯ ಕೃಷಿ ಉಪಕರಣಗಳ ಬಗ್ಗೆ ಈ ತನಕ ಯಾವುದೇ ಆದೇಶ ಸರಕಾರದಿಂದ ಬಂದಿರುವುದಿಲ್ಲ ಎಂಬ ಮಾಹಿತಿ ಯನ್ನು ಸಹ ಶಾಸಕರಿಗೆ ನೀಡಿದರು.
ಕಾರ್ಮಿಕ ಇಲಾಖೆಯ ಮಾಹಿತಿ ನೀಡಿದ ಅಧಿಕಾರಿ ಮಮ್ತಾಜ್ ತಾಲ್ಲೂಕಿನಲ್ಲಿ 10845 ಜನ ನೋಂದಾ ಯಿತ ಕಾರ್ಮಿಕರು ಇದ್ದು ಈಗಾಗಲೇ ಇವರಲ್ಲಿ 5271ಜನರಿಗೆ ಸರ್ಕಾರದ ಪರಿಹಾರವಾಗಿ ರೂ, 5000/- ಮಂಜೂರಾಗಿದೆ. ಇನ್ನುಳಿದವರಿಗೂ ಸಹ ಶೀಘ್ರದಲ್ಲಿ ಮಂಜೂರಾತಿ ದೊರೆಯುವುದು. ನೊಂದಾಯಿಸದೇ ಇರುವ ಕಾರ್ಮಿಕರಿಗೆ ಸೇವಾ ಸಿಂಧು ಕೇಂದ್ರಗಳಲ್ಲಿ ಆನ್ಲೈನ್ನಲ್ಲಿ ನೋಂದಯಿಸಲು ಅವಕಾಶವಿದ್ದು ಇಚ್ಛೆಯುಳ್ಳವರು ನೊಂದಾಯಿಸಿ ಕೊಳ್ಳಬಹುದು ಎಂದು ಸಭೆಯಲ್ಲಿ ತಿಳಿಸಿದರು.
ಎಸ್.ಸಿ.ಪಿ/ಟಿ.ಎಸ್.ಪಿ. ಕಾಮಗಾರಿಗಳ ಮಾಹಿ ತಿಯನ್ನು ಸರ್ಕಾರದಿಂದ ಕೇಳಲಾಗಿದ್ದು ಇದುವರೆ ಗೂ ಯಾವುದೇ ಅಧಿಕಾರಿಗಳು ಮಾಹಿತಿ ನೀಡಿರು ವುದಿಲ್ಲ.ಇದೇ ತಿಂಗಳ 21 ರೊಳಗೆ ಮಾಹಿತಿ ನೀಡ ಬೇಕಾಗಿರುವುದರಿಂದ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ತಕ್ಷಣವೇ ಮಾಹಿತಿಯನ್ನು ಶಾಸಕರ ಮೂಲಕ ಕಳುಹಿಸಲು ಶಾಸಕರ ಆಪ್ತ ಸಹಾಯಕ ವಿಜಯ ಮಹಾಂತೇಶ್ ಅವರು ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದರು.
ಸಭೆಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ, ಸಮಾಜ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಒಳನಾಡು ಮತ್ತು ಬಂದರು ಇಲಾಖೆ ಹಾಗೂ ಇನ್ನಿತರ ಇಲಾಖೆಯ ಎಲ್ಲ ಮಾಹಿತಿಯನ್ನು ಶಾಸಕರು ಪಡೆದು ತೃಪ್ತಿ ವ್ಯಕ್ತಪಡಿಸಿದರು.
ಸಭೆಯಲ್ಲಿ ತಹಸೀಲ್ದಾರ್ ಕೆ.ಬಿ.ರಾಮಚಂದ್ರಪ್ಪ, ತಾಪಂ ವಿಸ್ತರಣಾಧಿಕಾರಿ ಬಿ.ಲಕ್ಷ್ಮೀಪತಿ, ಪೌರಾಯುಕ್ತೆ ಎಸ್.ಲಕ್ಷ್ಮೀ, ತೋಟಗಾರಿಕೆ ಅಧಿಕಾರಿ ರೇಖಾ, ಸಮಾಜ ಕಲ್ಯಾಣ ಅಧಿಕಾರಿ ಪರಮೇಶ್ವರಪ್ಪ ಅಲ್ಲದೆ ತಾಲೂಕಿನ ವಿವಿ ಧ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದರು.

 

LEAVE A REPLY

Please enter your comment!
Please enter your name here