1} ಹಳ್ಳಿಗಳಲ್ಲಿ ಗಾಂಜಾ ಬೆಳೆಯುವದು ಕಾನೂನಿನ ಪ್ರಕಾರ ತಪ್ಪಾದರೆ ಸರಕಾರ ಸರಾಯಿ ಮಾರುವದು ಎಷ್ಟು ಸರಿ ? ಹಳ್ಳಿಯ ಮಟ್ಟಕ್ಕೆ ಸರಾಯಿ ಅಂಗಡಿ ತರಲು ಕಾರಣವೇನು ?
2}ಸರಾಯಿ ಮಾರದಿದ್ದರೆ ಸರಕಾರ ಮುನ್ನಡೆಸಲು ಸಾದ್ಯವಿಲ್ಲವೇ ?
3}ಡ್ರಗ್ಸದಿಂದ ಯುವ ಸಮುದಾಯ ಹಾಳಾಗುತ್ತದೆ ಎಂದು ಬಾಯಿ ಬಡಿದುಕೊಳ್ಳುವ ನೀವುಗಳು ಸರಾಯಿಯ ಬಗ್ಗೆ ಏಕೆ ಮಾತಾಡುತ್ತಿಲ್ಲ. ಸರಾಯಿ ಆರೋಗ್ಯಕ್ಕೆ ಹಾನಿಕಾರಕ ಎಂದು ಹೇಳುವ ನೀವು ಸರಾಯಿಯನ್ನು ಏಕೆ ನಿಷೇದ ಮಾಡುತ್ತಿಲ್ಲ?
4}ಡ್ರಗ್ಸ ಮಾಪಿಯಾ ವಿಷಯದಲ್ಲಿ ಕೇವಲ ಚಲನಚಿತ್ರ ನಟ —ನಟಿಯರಷ್ಟೆ ಬಾಗಿಯಾಗಿದ್ದಾರೆಯೇ ?
5} ರಾಜಕೀಯ ನಾಯಕರ ಹೆಸರುಗಳು ಮುನ್ನೆಲೆಗೆ ಬಂದರೂ ಯಾಕೆ ಅವರನ್ನು ಇನ್ನು ವಿಚಾರಿಸುತ್ತಿಲ್ಲ ?ಇಷ್ಟಕ್ಕೆ ಮೂಗಿಸಬೇಕೆನ್ನುವ ತುಡಿತವೇ.ಮುಂದಿನ ದಿನಗಳಲ್ಲಿ ಕಾಲಚಕ್ರದ ಬಗ್ಗೆ ಅನುಮಾನವೇ ?
6} ಪೋಲಿಸ್ ಇಲಾಖೆಯವರ ಸಹಕಾರವಿಲ್ಲದೆ ಇಷ್ಟು ಪ್ರಮಾಣದಲ್ಲಿ ಡ್ರಗ್ಸ ಬೇರು ಬಿಟ್ಟಿದೆಯೇ .ಇದರಲ್ಲಿ ಪೋಲಿಸ್ ಇಲಾಖೆಯ ದೊಡ್ಡ ದೊಡ್ಡ ಅದಿಕಾರಿಗಳ ಕೈವಾಡ ಇಲ್ಲವೇ ?
7} ಡ್ರಗ್ಸ ಮಾಪಿಯಾ ಜಾಲಾಡುವುದ ಜೋತೆಗೆ ಅನದಿಕ್ರುತವಾದ ಮದ್ಯ ಮಾರಾಟ ಮಳಿಗೆಗಳನ್ನು ಸಹ ಜಾಲಾಡಿಸಿ ನೋಡೋಣ.
8}ವಿಜಯಪೂರ ಜಿಲ್ಲೆಯ ನಾಗಠಾಣ ಮತಕ್ಷೇತ್ರದ ಶಾಸಕರಾದ ದೇವಾನಂದ ಚೌವಾಣರು ಡ್ರಗ್ಸ ಮಾಪಿಯಾ ಮಹಾರಾಷ್ಟ್ರದ ಗಡಿ ಬಾಗಗಳಲ್ಲಿ ವಿಪರೀತವಾಗಿ ನಡೆಯುತ್ತದೆ ಎಂದು ಹೇಳಿದ್ದಾರೆ ಅದರ ಬಗ್ಗೆ ಏಕೆ ಗಮನಹರಿಸುತ್ತಿಲ್ಲ ?
ಸರಕಾರ ಕೂಡಲೆ ಇವುಗಳಿಗೆ ಉತ್ತರಿಸಲೆಂದು ಮನವಿ ಮಾಡಿಕೊಳ್ಳುತ್ತೆನೆ.
ವಿಠಲ.ಆರ್.ಯಂಕಂಚಿ
ಬಮ್ಮನಜೋಗಿ.