10 ವರ್ಷದಲ್ಲಿ 8 ಮುದುಕರಿಗೆ ಕೈ ಕೊಟ್ಟ ಚಾಲಾಕಿ ಯುವತಿ

0

ಉತ್ತರ ಪ್ರದೇಶ ಪೊಲೀಸರು 10 ವರ್ಷದಲ್ಲಿ 8 ಮುದುಕರನ್ನು ಮದುವೆಯಾಗಿ ಕೈಕೊಟ್ಟ ಮಹಿಳೆಯ ಹುಡುಕಾಟ ಶುರು ಮಾಡಿದ್ದಾರೆ. ಮದುವೆಯಾಗಿ ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಮಹಿಳೆ ಪರಾರಿಯಾಗ್ತಿದ್ದಳು.

ಗಾಜಿಯಾಬಾದ್ ಪೊಲೀಸರು ಚಾಲಾಕಿ ಯುವತಿಯ ಬಂಧನಕ್ಕೆ ಬಲೆ ಬೀಸಿದ್ದಾರೆ. ಆರೋಪಿ ಯುವತಿ ಹೆಸರು ಮೋನಿಕಾ ಎನ್ನಲಾಗಿದೆ. ಮುದುಕರೇ ಈ ಮಹಿಳೆ ಟಾರ್ಗೆಟ್. 66 ವರ್ಷದ ವ್ಯಕ್ತಿಯನ್ನು 8ನೇ ಮದುವೆಯಾಗಿದ್ದಳು ಯುವತಿ.

ಆತನ ಬಳಿಯಿದ್ದ 15 ಲಕ್ಷ ರೂಪಾಯಿ ಮೌಲ್ಯದ ಆಭರಣ ದೋಚಿ ಪರಾರಿಯಾಗಿದ್ದಾಳೆ. ಪೀಡಿತನ ಪತ್ನಿ ಒಂದು ವರ್ಷದ ಹಿಂದೆ ಸಾವನ್ನಪ್ಪಿದ್ದಳು. ಆಕೆ ಸಾವಿನ ನಂತ್ರ ಏಕಾಂಗಿಯಾಗಿದ್ದ ವ್ಯಕ್ತಿ ಖನ್ನಾ ಮದುವೆ ಕೇಂದ್ರದಲ್ಲಿ ಹುಡುಗಿ ಹುಡುಕಾಟ ನಡೆಸಿದ್ದ. ಅಲ್ಲಿ ಈಕೆ ಸಿಕ್ಕಿದ್ದಳು. ವಿಚ್ಛೇದಿತೆ ಎನ್ನುತ್ತ ಆಕೆ ಈತನನ್ನು ಮದುವೆಯಾಗಿದ್ದಳು. ಆದ್ರೆ ಮದುವೆಯಾದ ಎರಡೇ ತಿಂಗಳಿಗೆ ಕಾಲ್ಕಿತ್ತಿದ್ದಾಳೆ. ನಂತ್ರ ಪೊಲೀಸರಿಗೆ ದೂರು ನೀಡಿದ ವೃದ್ಧ ಪತ್ತೆ ಮಾಡಿದ್ದಾನೆ. ನಂತ್ರ 10 ವರ್ಷದಲ್ಲಿ 8 ಮಂದಿಯನ್ನು ಈಕೆ ಮದುವೆಯಾಗಿದ್ದಾಳೆಂಬುದು ಗೊತ್ತಾಗಿದೆ.

LEAVE A REPLY

Please enter your comment!
Please enter your name here