109 ವರ್ಷಗಳ ನಂತರ ಹೋಳಾಗಲಿದೆ ಐಬಿಎಂ; ಕ್ಲೌಡ್ ಕಂಪ್ಯೂಟಿಂಗ್ ಕಡೆಗೆ ಗಮನ

0

ಇಂಟರ್ ನ್ಯಾಷನಲ್ ಬಿಜಿನೆಸ್ ಮಷೀನ್ಸ್ ಕಾರ್ಪೊರೇಷನ್ (ಐಬಿಎಂ) ತನ್ನ ಉದ್ಯಮವನ್ನು ಎರಡು ಪಬ್ಲಿಕ್ ಕಂಪೆನಿಗಳಾಗಿ ಮಾಡಲು ಯೋಜನೆ ಹಾಕಿಕೊಂಡಿದೆ. ಹೆಚ್ಚಿನ ಲಾಭದ ಪ್ರಮಾಣ ಇರುವ ಕ್ಲೌಡ್ ಕಂಪ್ಯೂಟಿಂಗ್ ಕಡೆಗೆ ಗಮನ ಹರಿಸುವುದಾಗಿ ಕಂಪೆನಿ ಹೇಳಿಕೊಂಡಿದೆ. ಐಬಿಎಂ ತನ್ನ ಮಾಹಿತಿ ತಂತ್ರಜ್ಞಾನ ಮೂಲಸೌಕರ್ಯ ಸೇವೆಗಳ ಘಟಕವನ್ನು ಪ್ರತ್ಯೇಕ ಕಂಪೆನಿಯಾಗಿ ಹೊಸ ಹೆಸರಲ್ಲಿ 2021ರ ಕೊನೆಗೆ ಲಿಸ್ಟ್ ಮಾಡಲಿದೆ.

ಈ ಹೊಸ ಘಟಕವು ಜಾಗತಿಕ ತಂತ್ರಜ್ಞಾನ ಸೇವೆಯ ವಿಭಾಗದಲ್ಲಿ ಒಂದು ಭಾಗ ಆಗಲಿದೆ. 4600 ಗ್ರಾಹಕರಿಗೆ ಸೇವೆ ನೀಡಲಿದ್ದು, 60 ಬಿಲಿಯನ್ ಅಮೆರಿಕನ್ ಡಾಲರ್ ಬ್ಯಾಕ್ ಲಾಗ್ ಇದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. “ಇವತ್ತು ನಮ್ಮ ಕಂಪೆನಿಗೆ ಮೈಲುಗಲ್ಲು ಎನಿಸುವಂಥ ದಿನ, ನಾವು ಭವಿಷ್ಯವನ್ನು ಮರು ವ್ಯಾಖ್ಯಾನಿಸುತ್ತಿದ್ದೇವೆ,” ಎಂದು ಐಬಿಎಂ ಸಿಇಒ ಅರವಿಂದ್ ಕೃಷ್ಣ ಹೇಳಿದ್ದಾರೆ.

ಈಗಿನ ಪ್ರಯತ್ನವು ಐಬಿಎಂ ಪುನರುಜ್ಜೀವನಕ್ಕೆ ಕೃಷ್ಣ ಅವರ ಅತಿ ದೊಡ್ಡ ಪ್ರಯತ್ನ. ಇದು ಕ್ಲೌಡ್ ಕಂಪ್ಯೂಟಿಂಗ್ ಮೇಲೆ ನಿಂತಿದೆ. ಹೈಬ್ರಿಡ್ ಕ್ಲೌಡ್ ಸಾಫ್ಟ್ ವೇರ್ ಹಾಗೂ ಸೇವೆಯಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಗುರಿ ಇರಿಸಿಕೊಂಡಿದೆ. ಗ್ರಾಹಕರು ತಮ್ಮ ಡೇಟಾವನ್ನು ಖಾಸಗಿ ಸರ್ವರ್ ನಲ್ಲಿ ಸಂಗ್ರಹಿಸಬಹುದು ಮತ್ತು ಇದರ ಜತೆಗೆ ಪಬ್ಲಿಕ್ ಕೌಡ್ ಗಳು, ಪ್ರತಿಸ್ಪರ್ಧಿಗಳಾದ ಅಮೆಜಾನ್.ಕಾಮ್ ಹಾಗೂ ಮೈಕ್ರೋ ಸಾಫ್ಟ್ ನಡೆಸುವಂಥದ್ದನ್ನು ಸಂಗ್ರಹಿಸಬಹುದು.

LEAVE A REPLY

Please enter your comment!
Please enter your name here