2 ತಲೆ ಹಾವು ಮಾರಾಟಗಾರನ ಬಂಧನ.

0

2 ತಲೆ ಹಾವು ಮಾರಾಟಗಾರನ ಬಂಧನ.

ಸಿದ್ದಾಪುರದ ಆನಂದಪುರ ಸಾರ್ವಜನಿಕ ಬಸ್ ತಂಗುದಾಣದ ಬಳಿ ದಾವಣಗೆರೆಯ ಚೆನ್ನಗಿರಿ ನಲ್ಲೂರಿನಿಂದ 2 ತಲೆಯ ಹಾವನ್ನು ಮೈಸೂರು ಜಿಲ್ಲೆ ಶಾಂತಿನಗರದ ನಿವಾಸಿ ಸೈಯದ ಮೋಮಿನ್ ತಂದೆ ಸೈಯಾದ ಆಯಾಜ್ (ಪ್ರಾಯ 23 ವರ್ಷ) ಎಂಬಾತನು 1 ಕೋಟಿ ರೂಗಳಿಗೆ ಮಾರಾಟ ಮಾಡಲು ಹೊಂಚು ಹಾಕುತ್ತಿದ್ದ.

ಖಚಿತ ಮಾಹಿತಿಯ ಮೇರೆಗೆ ವಿರಾಜಪೇಟೆ ಸಿಐಡಿ ಪೋಲಿಸ್, ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಘನ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು,15 ದಿನಗಳವರೆಗೆ ನ್ಯಾಯಾಂಗ ಬಂಧನಕ್ಕೆ ನ್ಯಾಯಾಲಯ ಆದೇಶ ನೀಡಲಾಗಿದೆ..

ಎರಡು ತಲೆ ಹಾವಿನ ತೂಕ 3.ಕೆಜಿ 5೦೦ಗ್ರಾ ದಪ್ಪ 8 ಇಂಚು ಉದ್ದ 4.2 ಇಂಚು ಇರುತ್ತದೆ.

ಕಾರ್ಯಾಚರಣೆಯಲ್ಲಿ ಮಡಿಕೇರಿಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಪಿಎಸ್‌ಐ ಶ್ರೀಮತಿ ಸಿ.ಯುಸವಿ ನೇತೃತ್ವದಲ್ಲಿ ಮಡಿಕೇರಿ ಸಿಐಡಿ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕರಾದ ಶ್ರೀ ಸುರೇಶ್ ಬಾಬು ಮಾರ್ಗದರ್ಶದಲ್ಲಿ ಸಿಬ್ಬಂದಿಗಳಾದ ಕೆ.ಬಿಸೋಮಣ್ಣ,ಟಿ.ಪಿ ಮಂಜುನಾಥ್ ಎಂ.ಬಿ.ಗಣೇಶ್ ಪಿ.ಬಿ ಮೊಣ್ಣಪ್ಪ ,ಸಿಎಂ ರೇವಪ್ಪ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here