2020ರ ಡಿಸೆಂಬರ್ ನಿಂದ RTGS ಹಣ ವರ್ಗಾವಣೆ 24X7

0

2020ರ ಡಿಸೆಂಬರ್ ನಿಂದ RTGS ಮೂಲಕ ದಿನದ ಎಲ್ಲ ಸಮಯ, ವಾರದ ಏಳೂ ದಿನ ಹಣ ವರ್ಗಾವಣೆ ಮಾಡಬಹುದು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಘೋಷಣೆ ಮಾಡಿದೆ. ಸದ್ಯಕ್ಕೆ ಇರುವ ನಿಯಮಾವಳಿಯಂತೆ, ಬೆಳಗ್ಗೆ 7ರಿಂದ ಸಂಜೆ 6ರ ತನಕ ಹಾಗೂ ಪ್ರತಿ ತಿಂಗಳ ಎರಡು, ನಾಲ್ಕನೇ ಶನಿವಾರ ಹಾಗೂ ಭಾನುವಾರಗಳನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ವರ್ಗಾವಣೆ ಮಾಡಬಹದು.

NEFT ವ್ಯವಸ್ಥೆಯನ್ನು 24X7 ಸಿಗುವಂತೆ ಡಿಸೆಂಬರ್ 16, 2019ರಿಂದ ಸಿಗುವಂತೆ ಮಾಡಿದಾಗಲೇ ಈ ಬಗ್ಗೆ ಘೋಷಣೆ ಮಾಡಲಾಗಿತ್ತು. RTGS ಅಂದರೆ ರಿಯಲ್ ಟೈಮ್ ಗ್ರಾಸ್ ಸೆಟ್ಲ್ ಮೆಂಟ್. ದೊಡ್ಡ ಮೊತ್ತವನ್ನು ಒಂದು ಖಾತೆಯಿಂದ ಮತ್ತೊಂದಕ್ಕೆ ವರ್ಗಾಯಿಸಲು ಇದನ್ನು ಬಳಲಾಗುತ್ತದೆ. ಆರ್ ಬಿಐನಿಂದ ಸಿಗುವ ಮಾಹಿತಿ ಪ್ರಕಾರ, RTGS ಮೂಲಕ ವರ್ಗಾವಣೆ ಮಾಡಬಹುದಾದ ಕನಿಷ್ಠ ಮೊತ್ತ 2 ಲಕ್ಷ ರುಪಾಯಿ. ಇದರಲ್ಲಿ ಯಾವುದೇ ಗರಿಷ್ಠ ಮಿತಿ ಇಲ್ಲ.

ಆದರೆ, ಬ್ಯಾಂಕ್ ಗಳು ಸಾಮಾನ್ಯವಾಗಿ 10 ಲಕ್ಷ ರುಪಾಯಿ ಎಂದು ಮಿತಿ ವಿಧಿಸುತ್ತವೆ. NEFT ವರ್ಗಾವಣೆ ಉಚಿತ ಆದರೂ ಆರ್ ಟಿಜಿಎಸ್ ವರ್ಗಾವಣೆಗೆ ಶುಲ್ಕ ವಿಧಿಸಲಾಗುತ್ತದೆ. ಬ್ಯಾಂಕ್ ನಿಂದ ಬ್ಯಾಂಕ್ ಗೆ ಈ ಶುಲ್ಕ ಬದಲಾಗುತ್ತದೆ. ಅಕ್ಟೋಬರ್ 30, 2019ರಲ್ಲಿನ RBI FAQ ಪ್ರಕಾರ, RTGS ವ್ಯವಹಾರದ ಪ್ರೊಸೆಸಿಂಗ್ ಶುಲ್ಕಗಳನ್ನು ಮನ್ನಾ ಮಾಡುತ್ತದೆ. ಬ್ಯಾಂಕ್ ಗಳು ಈ ಅನುಕೂಲವನ್ನು ಗ್ರಾಹಕರಿಗೆ ವರ್ಗಾಯಿಸಬಹುದು.

ಆರ್ ಬಿಐ ನೀಡಿರುವ ಮಾಹಿತಿ ಪ್ರಕಾರ: 2 ಲಕ್ಷದಿಂದ 5 ಲಕ್ಷದ ವರೆಗೆ ವರ್ಗಾವಣೆಗೆ 24.50 ರುಪಾಯಿ ದಾಟುವಂತಿಲ್ಲ (ತೆರಿಗೆ ಮತ್ಯಾವುದೇ ಹೊರತುಪಡಿಸಿ)

5 ಲಕ್ಷ ರುಪಾಯಿ ಮೇಲ್ಪಟ್ಟ ವ್ಯವಹಾರಕ್ಕೆ ರು. 49.50 (ತೆರಿಗೆ ಮತ್ಯಾವುದೇ ಹೊರತುಪಡಿಸಿ)

ಬ್ಯಾಂಕ್ ಗಳು ಈ ದರವನ್ನು ಕಡಿಮೆ ಮಾಡಬಹುದು. ಆದರೆ ಆರ್ ಬಿಐ ನಿಗದಿ ಪಡಿಸಿದ ಮೊತ್ತಕ್ಕಿಂತ ಹೆಚ್ಚು ಪಡೆಯುವಂತಿಲ್ಲ.

RTGS ವರ್ಗಾವಣೆ ಹೇಗೆ ಕೆಲಸ ಮಾಡುತ್ತದೆ?

ಈ ಯೋಜನೆ ಅಡಿಯಲ್ಲಿ ಹಣ ವರ್ಗಾವಣೆಯನ್ನು ಆಗಿಂದಾಗಲೇ ಮಾಡಬಹುದು. ರಿಯಲ್ ಟೈಮ್ ಅಂದರೆ, ಆ ವ್ಯವಹಾರ ಹೇಗೆ ಪ್ರೊಸೆಸ್ ಮಾಡಬೇಕು ಎಂದು ಸೂಚನೆ ಇರುತ್ತದೋ ಅದರಂತೆ. ಗ್ರಾಸ್ ಸೆಟ್ಲ್ ಮೆಂಟ್ ಅಂದರೆ ವೈಯಕ್ತಿಕವಾದ ಸೂಚನೆ ಮೇಲೆ ಹಣ ವರ್ಗಾವಣೆ. NEFTನಲ್ಲಾದರೂ ವರ್ಗಾವಣೆಯನ್ನು ಬ್ಯಾಚ್ ಪ್ರಕಾರ ಮಾಡಲಾಗುತ್ತದೆ.

LEAVE A REPLY

Please enter your comment!
Please enter your name here