24 ಗಂಟೆಯಲ್ಲಿ 26 ದಶಲಕ್ಷ ಡಾಲರ್ ದೇಣಿಗೆ ಸಂಗ್ರಹಿಸಿದ ಕಮಲಾ ಹ್ಯಾರಿಸ್..!

0

ಭಾರತ ಸಂಜಾತೆ, ಸಂಸದೆ ಮತ್ತು ಪ್ರಭಾವಿ ಮಹಿಳೆ ಕಮಲಾ ದೇವಿ ಹ್ಯಾರಿಸ್ ಡೆಮೊಕ್ರಾಟಿಕ್ ಪಕ್ಷದಿಂದ ಅಮೆರಿಕ ಉಪಾಧ್ಯಕ್ಷ ಅಭ್ಯರ್ಥಿಯಾಗಿ ಆಯ್ಕೆಯಾಗುತ್ತಿದ್ದಂತೆ, ವಿಶ್ವದ ಮಹಾ ಶಕ್ತಿಶಾಲಿ ದೇಶದಲ್ಲಿ ಮಹಾ ಸಂಚಲನದ ಅನುಭವವಾಗುತ್ತಿದೆ.

ಇದಕ್ಕೆ ಪುಷ್ಟಿ ನೀಡುವಂತೆ ಕಮಲಾ ಉಪಾಧ್ಯಕ್ಷ ಅಭ್ಯರ್ಥಿ ಘೋಷಣೆ ನಂತರ ಡೆಮೊಕ್ರಾಟಿಕ್ ಪಕ್ಷವು ಕೇವಲ 24 ತಾಸುಗಳಲ್ಲೇ 26 ದಶಲಕ್ಷ ಡಾಲರ್ ಚುನಾವಣಾ ದೇಣಿಗೆ ಸಂಗ್ರಹಿಸಿದೆ.

ಇದು ಅಧ್ಯಕ್ಷ ಅಭ್ಯರ್ಥಿ ಜೋ ಬಿಡೆನ್ ಮತ್ತು ಉಪಾಧ್ಯಕ್ಷ ಸ್ರ್ಪ ಕಮಲಾ ಹ್ಯಾರಿಸ್ ಜಯದ ಸ್ಪಷ್ಟ ಮುನ್ಸೂಚನೆಯಾಗಿದೆ. ನವೆಂಬರ್‍ನಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕ್ ಪಕ್ಷದ ನಾಯಕ ಮತ್ತು ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಡೆಮೊಕ್ರಾಟಿಕ್ ಅಭ್ಯರ್ಥಿಯಾಗಿ ಕಣದಲ್ಲಿರುವ ಮಾಜಿ ಉಪಾಧ್ಯಕ್ಷ ಜೋ ಬಿಡೆನ್, ಕಮಲಾ ಹ್ಯಾರಿಸ್ ಅವರನ್ನು ಉಪಾಧ್ಯಕ್ಷೆ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದಾರೆ.

ಈ ಘೋಷಣೆ ನಂತರ ಭಾರತೀಯ ಮೂಲದ ಅಮೆರಿಕನ್ನರು, ಆಫ್ರಿಕನ್ ಸಂಜಾತರು ಹಾಗೂ ಅಲ್ಲಿನ ಮುಸ್ಲಿಂ ಮತ್ತು ಇತರ ಸಮುದಾಯಗಳು ಕಮಲಾ ಆಯ್ಕೆಯನ್ನು ಸ್ವಾಗತಿಸಿ ವ್ಯಾಪಕ ಬೆಂಬಲ ವ್ಯಕ್ತಪಡಿಸಿವೆ.

ಅಧ್ಯಕ್ಷ ಟ್ರಂಪ್‍ರನ್ನು ಚುನಾವಣೆಯಲ್ಲಿ ಮಣಿಸಲು ಕಾರ್ಯತಂತ್ರ ರೂಪಿಸಿರುವ ಬಿಡೆನ್ ಕಪ್ಪು ವರ್ಣೀಯರ ಮತಗಳು ಚುನಾವಣೆಯಲ್ಲಿ ನಿರ್ಣಾಯಕ ಎಂಬುದು ಮನವರಿಕೆಯಾಗಿ ಕಮಲಾ ದೇವಿ ಹ್ಯಾರಿಸ್ ಅವರನ್ನು ಉಪಾಧ್ಯಕ್ಷೆ ಅಭ್ಯರ್ಥಿಯನ್ನಾಗಿ ಆರಿಸಿದ್ದಾರೆ.

ಖ್ಯಾತ ವಕೀಲರು ಮತ್ತು ಕ್ಯಾಲಿಫೋರ್ನಿಯಾ ಸೆನೆಟರ್ ಆಗಿರುವ 55 ವರ್ಷದ ಕಮಲಾ ಹ್ಯಾರಿಸ್ ಅವರನ್ನು ವೈಸ್‍ಪ್ರೆಸಿಡೆಂಟ್ ಕ್ಯಾಂಡಿದೇಟ್ ಆಗಿ ನೇಮಕ ಮಾಡುವ ಮೂಲಕ ಕಪ್ಪು ವರ್ಣೀಯರ ಮತಗಳತ್ತ ಬಿಡೆನ್ ಗಮನ ಕೇಂದ್ರೀಕರಿಸಿದ್ದಾರೆ.

ಪ್ರಮುಖ ಹುದ್ದೆಗೆ ಸ್ರ್ಪಸಲು ಡೆಮೊಕ್ರಾಟಿಕ್ ಪಕ್ಷದಿಂದ ಕಪ್ಪು ಮಹಿಳೆಯನ್ನು ಆಯ್ಕೆ ಮಾಡುವ ಮೂಲಕ ಜೋ ಬಿಡೆನ್ ಹೊಸ ಇತಿಹಾಸ ಸೃಷ್ಟಿಸಿದ್ದು, ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದಾರೆ.

ಕಮಲಾ ಹ್ಯಾರಿಸ್ ಅವರ ತಂದೆ ಆಫ್ರಿಕಾದವರು. ತಾಯಿ ಭಾರತೀಯ ಮೂಲದವರು. ಕ್ಯಾಲಿಫೋರ್ನಿಯಾದ ಅತ್ಯಂತ ಪ್ರಭಾವಿ ರಾಜಕೀಯ ನಾಯಕಿಯಾಗಿರುವ ಭಾರತೀಯ ಮೂಲಕ ಕಮಲಾ ಅವರನ್ನು ಉಪಾಧ್ಯಕ್ಷೆ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಬೇಕೆಂಬುದು ಮಾಜಿ ಅಧ್ಯಕ್ಷ ಬರಾಜ್ ಒಬಾಮಾ ಅವರ ಬಯಕೆಯಾಗಿತ್ತು.

ಈಗ ಕಮಲಾ ಅವರು ಚುನಾವಣೆಯಲ್ಲಿ ರ್ಸಸುತ್ತಿರುವುದು ಭಾರತೀಯ ಮತ್ತು ಆಫ್ರಿಕಾ ಮೂಲದ ಜನರಲ್ಲಿ ಸಂತಸ ಮೂಡಿಸಿದೆ.ಮೊದಲ ಭಾಷಣ: ಈ ಮಧ್ಯೆ ಅಮೆರಿಕ ಉಪಾಧ್ಯಕ್ಷ ಸ್ಥಾನಕ್ಕೆ ಸ್ರ್ಪಸಿರುವ ಕಮಲಾ ತಮ್ಮ ಚೊಚ್ಚಲ ಭಾಷಣದಲ್ಲೇ ಅಮೆರಿಕನ್ನರ ಗಮನಸೆಳೆದರು.

ವಿಲ್ಮಂಗ್ಟನ್‍ನಲ್ಲಿ ಸಾರ್ವಜನಿಕ ಸಭೆಯಲ್ಲಿ ಜೋ ಬಿಡೆನ್ ಜೊತೆ ಜಂಟಿ ಭಾಷಣ ಮಾಡಿದ ಕಮಲಾ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉಪಾಧ್ಯಕ್ಷ ಮೈಕ್ ಪೆನ್ಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಅಮೆರಿಕ ಟ್ರಂಪ್ ನಾಯಕತ್ವದಿಂದ ರೋಸಿ ಹೋಗಿದೆ. ಈ ದೇಶವು ಈಗ ಹೊಸ ಮತ್ತು ಸದೃಢ ನಾಯಕತ್ವಕ್ಕಾಗಿ ಹಪಹಪಿಸುತ್ತಿದೆ ಎಂದು ಆರೋಪಿಸಿದ ಕಮಲಾ, ಜೋ ಬಿಡೆನ್ ನವರು ಅಮೆರಿಕ ಸೃಷ್ಟಿಗೆ ಕಾರಣಕರ್ತರಾಗುತ್ತಾರೆ ಎಂದರು.

ಜೋ ಬಿಡೆನ್ ಮಾತನಾಡಿ, ಟ್ರಂಪ್ ಆಳ್ವಿಕೆಯಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಭಾರೀ ವಿಫಲತೆಯಾಗಿದೆ. ಅಮೆರಿಕ ಮರುಸೃಷ್ಟಿಗೆ ದೃಢ ಸಂಕಲ್ಪ ಮಾಡಿರುವುದಾಗಿ ಹೇಳಿದರು.

LEAVE A REPLY

Please enter your comment!
Please enter your name here