ಭಾರತ ಚೀನಾ ನಡುವೆ ಎಲ್‌ಎಸಿಯಲ್ಲಿ ಉದ್ವಿಗ್ನತೆಯನ್ನು ಕಾಪಾಡಿಕೊಳ್ಳುವ ಬಗ್ಗೆ ಚರ್ಚೆ ನಡೆಯುತ್ತಿದ್ದರೆ, ಅಮೆರಿಕ ಕೂಡ ಚೀನಾದ ಮೇಲೆ ಕೋಪಗೊಂಡಿದೆ. ಈ ನಡುವೆ , ಯುಎಸ್ ಮತ್ತು ಯುಎಸ್ ಕಂಪನಿಗಳು ಚೀನಾದ ಮೇಲೆ ಕಟ್ಟುನಿಟ್ಟನ್ನು ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದ್ದಾವೆ. ಇಂದು ಚೀನಾದ ಟಿಕ್ ಟಾಕ್ ಸೇರಿದಂತೆ ಕೆಲ ಅಪ್‌ಗಳನ್ನು ಯುಎಸ್‌ನಲ್ಲಿ ಬಳಕೆ ಮಾಡದ ಬಗ್ಗೆ ಟ್ರಂಪ್ ಸಹಿ ಹಾಕಿದ್ದಾರೆ. ಈ ನಡುವೆ ಚೀನಿಯರ ವಿರುದ್ದ ಟೆಕ್ ಲೋಕದ ದೈತ್ಯನಾಗಿರುವ ಗೂಗಲ್ ದೊಡ್ಡ ಕ್ರಮ ಕೈಗೊಂಡಿದೆ ಹೌದು, ಚೀನಾದ 2500 ಕ್ಕೂ ಹೆಚ್ಚು ಯೂಟ್ಯೂಬ್ ಚಾನೆಲ್‌ಗಳನ್ನು ಡಿಲೀಟ್ ಮಾಡಿದೆ. ಡಿಲೀಟ್ ಮಾಡಿರುವ ಈ ಎಲ್ಲಾ ಚಾನೆಲ್‌ಗಳು ದಾರಿತಪ್ಪಿಸುವ ಮಾಹಿತಿಯನ್ನು ಹರಡಲು ಪ್ರಯತ್ನಿಸುತ್ತಿವೆ ಎಂದು ಗೂಗಲ್ ಆರೋಪಿಸಲಾಗಿದೆ.
ಮಾಹಿತಿಯ ಪ್ರಕಾರ, 2500 ಕ್ಕೂ ಹೆಚ್ಚು ಚೀನೀ ಯೂಟ್ಯೂಬ್ ಚಾನೆಲ್‌ಗಳು ದಾರಿತಪ್ಪಿಸುವ ಮಾಹಿತಿಯನ್ನು ಹರಡುತ್ತಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ಗೂಗಲ್ ಡಿಲೀಟ್ ಮಾಡಿದ್ದು, ಚೀನಾವನ್ನು ಒಳಗೊಂಡ ಪ್ರಭಾವ ಕಾರ್ಯಾಚರಣೆಗಾಗಿ ನಡೆಯುತ್ತಿರುವ ತನಿಖೆಯಡಿಯಲ್ಲಿ ಈ ಕ್ರಮ ಕೈಗೊಂಡಿದೆ ಎಂದು ಗೂಗಲ್ ಹೇಳಿದೆ. ಈ ಚಾನೆಲ್‌ಗಳು ಸ್ಪ್ಯಾಮ್ ಅಥವಾ ರಾಜಕೀಯೇತರ ವಿಷಯವನ್ನು ಒದಗಿಸುತ್ತಿವೆ ಎಂದು ಹೇಳಲಾಗಿದೆ, , ಗೂಗಲ್ ಈ ಚಾನೆಲ್‌ಗಳ ಹೆಸರನ್ನು ಬಿಡುಗಡೆ ಮಾಡಿಲ್ಲ.
ಏಜನ್ಸಿಸ್