2,750 ರೂಪಾಯಿ ಕೊಟ್ರೆ ಈ ಲ್ಯಾಬ್​ನಲ್ಲಿ ಕೋವಿಡ್ 19 ಫೇಕ್ ಸರ್ಟಿಫಿಕೇಟ್ ಲಭ್ಯ!: ಬಯಲಿಗೆ ಬಂತು ವಂಚನೆ

0

ವಿದೇಶ ಪ್ರವಾಸ ವಿಶೇಷವಾಗಿ ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ತೆರಳುವವರಿಗೆ ಕೋವಿಡ್ 19 ಫೇಕ್ ಸರ್ಟಿಫಿಕೇಟ್ ಬೇಕೇ ಬೇಕು. ಅಸಲಿ ಸರ್ಟಿಫಿಕೇಟ್ ಪಡೆಯೋದಕ್ಕೆ ಗಂಟಲು ದ್ರವ ಪರೀಕ್ಷೆಗೆ ನೀಡಬೇಕು. ಅಡ್ಡ ದಾರಿ ಏನಾದ್ರೂ ಇದೆಯೇ ಎಂದು ಕೇಳಿದರೆ, 2, 750 ರೂಪಾಯಿ ಕೊಡಿ ಸರ್ಟಿಫಿಕೇಟ್ ಕೊಡುವ ಹೊಣೆಗಾರಿಕೆ ನಮ್ಮದು ಅಂತಿದ್ರು ಈ ಲ್ಯಾಬ್​ನಲ್ಲಿರುವ ಮ್ಯಾನೇಜರ್​. ಆತ ನಡೆಸಿದ ವಂಚನೆ ಬಯಲಾಗಿದ್ದು, ಮಂಗಳವಾರ ಪೊಲೀಸರು ಆತನನ್ನು ಬಂಧಿಸಿ ಕೇಸ್ ದಾಖಲಿಸಿಕೊಂಡಿದ್ದಾರೆ.

ಮಲಪ್ಪುರಂ ಜಿಲ್ಲೆಯ ವಲಂಚೇರಿಯ ಅರ್ಮಾ ಲ್ಯಾಬ್​ನ ಮ್ಯಾನೇಜರ್ ಈ ಕೃತ್ಯವೆಸಗಿದ್ದಾನೆ. ವಲಂಚೇರಿಯ ಆರ್ಮಾ ಲ್ಯಾಬ್​ ಕೋಳಿಕ್ಕೋಡ್ ಮೂಲದ ಲ್ಯಾಬ್​ನ ಫ್ರಾಂಚೈಸಿಯಾಗಿದೆ. ವಲಂಚೇರಿಯ ಲ್ಯಾಬ್​ನಲ್ಲಿ ಕಳೆದ ಕೆಲವು ದಿನಗಳ ಅವಧಿಯಲ್ಲಿ 2,500 ಜನರ ಮಾದರಿಯನ್ನು ಸಂಗ್ರಹಿಸಿತ್ತು. ಕೇವಲ 500 ಜನರ ಮಾದರಿಯನ್ನು ಟೆಸ್ಟ್​ಗೆ ಕಳುಹಿಸಿದ್ದು, ಉಳಿದವರಿಗೆಲ್ಲ ಫೇಕ್​ ಸರ್ಟಿಫಿಕೇಟ್ ನೀಡಿ ಕೈತೊಳೆದುಕೊಂಡಿದೆ.

ಸೌದಿ ಅರೇಬಿಯಾದಲ್ಲಿ ಈ ವಂಚನೆ ಬೆಳಕಿಗೆ ಬಂದ ಕೂಡಲೇ, ಅದು ಕೋಳಿಕ್ಕೋಡ್​ ಮೂಲದ ಆರ್ಮಾ ಲ್ಯಾಬ್ ನ ಪ್ರಮಾಣಪತ್ರಗಳನ್ನು ನಿಷೇಧಿಸಿದೆ. ವಂಚಿತರಾದ ಎನ್​ಆರ್​ಐಗಳು ಕಳೆದ ವಾರ ಈ ಬಗ್ಗೆ ದೂರು ನೀಡಿದ್ದರು. ಈ ಬಗ್ಗೆ ಕಾರ್ಯಪ್ರವೃತ್ತರಾದ ಪೊಲೀಸರು ವಲಂಚೇರಿ ಲ್ಯಾಬ್​ನ ಮಾನ್ಯೇಜರನ್ನು ಇಂದು ಬಂಧಿಸಿದ್ದಾರೆ. ಫೇಕ್ ಸರ್ಟಿಫಿಕೇಟ್ ನೀಡಿ ಈತ 40-45 ಲಕ್ಷ ರೂಪಾಯಿ ಸಂಗ್ರಹಿಸಿರುವ ಶಂಕೆ ಇದೆ. ಈ ಬಗ್ಗೆ ಇದೀಗ ವಿಸ್ತೃತ ತನಿಖೆ ಆರಂಭವಾಗಿದೆ. (ಏಜೆನ್ಸೀಸ್)

LEAVE A REPLY

Please enter your comment!
Please enter your name here