4 ಎಲೆಯ ಗಿಡ ನಾಲ್ಕು ಲಕ್ಷ ರೂಪಾಯಿಗೆ ಮಾರಾಟ.!

0

ಕೇವಲ ನಾಲ್ಕು ಎಲೆಯ ಗಿಡವೊಂದು ನಾಲ್ಕು ಲಕ್ಷ ರೂಪಾಯಿಗೂ ಅಧಿಕ ಬೆಲೆಗೆ ಮಾರಾಟವಾಗಿದೆ. ಎರಡು ಬಣ್ಣವಿರುವುದೇ ಅದರ ವಿಶೇಷ.

ವರಿಗೇಟೆಡ್ ರಾಫಿಡೊಫೋರಾ ಟೆಟ್ರಾಸ್ಪರ್ಮಾ ಅಥವಾ ಫಿಲೊಡೆಂಡ್ರೋನ್‌ ಮಿನಿಮಾ ಎಂಬ ಹೆಸರಿನ ಈ ಸಸ್ಯದ ಒಂದೇ ಎಲೆಯಲ್ಲಿ ಎರಡು ಬಣ್ಣವಿದೆ. ಒಂದರ್ಧ ಹಸಿರಿದ್ದರೆ.‌ ಇನ್ನೊಂದರ್ಧ ಹಳದಿ ಇದೆ.‌ ಟ್ರೇಡ್ ಮಿ ಎಂಬ ನ್ಯೂಜಿಲ್ಯಾಂಡ್ ಆನ್ ಲೈನ್ ಮಾರ್ಕೆಟ್ ವೆಬ್ ಸೈಟ್ ನಲ್ಲಿ 8150 ನ್ಯೂಜಿಲೆಂಡ್ ಡಾಲರ್ ಎಂದರೆ‌, 4.02 ಲಕ್ಷ ರೂ.ಗೆ ಹರಾಜಾಗಿದೆ. ನಾಲ್ಕೂ ಎಲೆಗಳು ಎರಡು ಬಣ್ಣ ಹೊಂದಿರುವುದು ಅಪರೂಪ ಎಂದು ಕಂಪನಿ ಪ್ರಚಾರ ಮಾಡಿತ್ತು. ಇದುವರೆಗೆ ಈ ಗಿಡ ಗರಿಷ್ಠ ಎಂದರೆ, 1650 ಡಾಲರ್ ಗೆ ಮಾರಾಟವಾಗಿತ್ತು.

ಟ್ರೊಫಿಕಲ್ ಪ್ಯಾರಡೈಸ್ ಎಂಬ ಉದ್ಯಾನವನ್ನು ತನ್ನ ಮನೆಯಲ್ಲಿ ಸಿದ್ಧ ಮಾಡುತ್ತಿದ್ದು, ಅದರಲ್ಲಿ ನಡುವೆ ಇಡಲು ಎರಡು ಬಣ್ಣದ ಈ ಗಿಡ ಅತಿ ಸುಂದರವಾಗಿ ಕಾಣಲಿದೆ ಎಂದು ಗಿಡವನ್ನು ದುಬಾರಿ ಬೆಲೆಗೆ ಕೊಂಡುಕೊಂಡ‌ ವ್ಯಕ್ತಿ ಆ ದೇಶದ ರೇಡಿಯೋ ಕಾರ್ಯಕ್ರಮವೊಂದರಲ್ಲಿ ಹೇಳಿಕೆ ನೀಡಿದ್ದಾರೆ.

LEAVE A REPLY

Please enter your comment!
Please enter your name here