5 ವರ್ಷಗಳಿಂದ ವಿದ್ಯುತ್ ಸಂಪರ್ಕ ಸೌಲಭ್ಯಗಳಿಂದ ವಂಚಿತರಾದ ಎಂ ಕೆ ಹುಬ್ಬಳ್ಳಿ ಪಟ್ಟಣದ ನಿವಾಸಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಿ

0

5 ವರ್ಷಗಳಿಂದ ವಿದ್ಯುತ್ ಸಂಪರ್ಕ ಸೌಲಭ್ಯಗಳಿಂದ ವಂಚಿತರಾದ ಎಂಕೆ ಹುಬ್ಬಳ್ಳಿ ಪಟ್ಟಣ ನಿವಾಸಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಿ: ಪತ್ರಕರ್ತ ಹಾಗೂ ಹೋರಾಟಗಾರ ಬಸವರಾಜು ಆಗ್ರಹ

ಸ್ಥಳ: ಎಂಕೆ ಹುಬ್ಬಳ್ಳಿ

ಹೌದು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಎಂಕೆ ಹುಬ್ಬಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಗದ್ದಿಕರವಿನಕೊಪ್ಪ ರಸ್ತೆಯ ಬಲಭಾಗದಲ್ಲಿರುವ ಸುಮಾರು 25 ಕುಟುಂಬಗಳಿಗೆ ಸತತ 5 ವರ್ಷಗಳಿಂದ ವಿದ್ಯುತ್ ಸಂಪರ್ಕವಿಲ್ಲದೇ ಪರದಾಡುತ್ತಿದ್ದಾರೆ.. ಕಳೆದ ಐದು ವರ್ಷಗಳಿಂದ ರಾತ್ರಿ ಆಯ್ತು ಅಂದರೇ ಸಾಕು ಕತ್ತಲಲ್ಲೇ ಕಳೆಯುತ್ತಿರುವ ಕುಟುಂಬಗಳಲ್ಲಿ ಬಹುತೇಕ ಶಾಲಾ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳೇ ಹೆಚ್ಚು ಇದ್ದು ಇವರ ಭವಿಷ್ಯದ ಮೇಲೂ ಕಾರ್ಮೋಡ ಬೀರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನೂ ಈ ಬಗ್ಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡುವಂತೆ ಒತ್ತಾಯಿಸಿ ಸತತ ಐದು ವರ್ಷಗಳಿಂದ ಪದೇ ಪದೇ ಕಿತ್ತೂರು ಹೆಸ್ಕಾಂ ಅಭಿಯಂತರರ ಕಚೇರಿಗೆ ಮನವಿ ಸಲ್ಲಿಸಿದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ, ..
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರತಿಯೊಂದು ಮನೆಗೂ ವಿದ್ಯುತ್ ಸಂಪರ್ಕ ಕಲ್ಪಿಸುವ ಸಲುವಾಗಿ ಸಾಕಷ್ಟು ಯೋಜನೆಗಳು ಜಾರಿಗೆ ತೆಗೆದುಕೊಂಡು ಬಂದಿದ್ದರೂ ಸಹ ಈ ಕುಟುಂಬಗಳಿಗೆ ಈಗಲೂ ಸಹ ವಿದ್ಯುತ್ ಸಂಪರ್ಕವೇ ಮರೀಚಿಕೆ ಯಾಗಿದೆ.. ಹಾಗೂ ವಿದ್ಯುತ್ ಇಲಾಖೆಯು ಜನಸಾಮಾನ್ಯರಿಗೆ ಇನ್ನೂ ಸಹ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿದ್ಯುತ್ ಇಲಾಖೆಗೆ ಸಂಬಂಧಿಸಿದ ಯೋಜನೆಗಳು ಸಮರ್ಪಕವಾಗಿ ಕಲ್ಪಿಸುತ್ತಿಲ್ಲಾ ಎಂಬ ಸಂಶಯ ಕಾಡುತ್ತಿದೆ. ಆದ್ದರಿಂದ ಇಂದು ಪತ್ರಕರ್ತ ಹಾಗೂ ಹೋರಾಟಗಾರ ಬಸವರಾಜುರವರು ಈ ಸ್ಥಳಕ್ಕೆ ಬೆಟಿಕೊಟ್ಟು ಇಲ್ಲಿನ ನಿವಾಸಿಗಳ ವಿದ್ಯುತ್ ಗೆ ಸಂಬಂಧಿಸಿದಂತೆ ಇರುವ ಸಮಸ್ಯೆಗಳ ಬಗ್ಗೆ ಸಮಗ್ರವಾಗಿ ವರದಿ ತಯಾರಿಸಿ ಬೆಳಗಾವಿಯ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರರು(ವಿದ್ಯುತ್ ವಿಭಾಗ) ಗಮನಕ್ಕೆ ತೆಗೆದುಕೊಂಡು ಬಂದರು. ಆದ್ದರಿಂದ ಇನ್ನಾದರೂ ಕಿತ್ತೂರು ಹೆಸ್ಕಾಂ ವಿಭಾಗದ ಅಧಿಕಾರಿಗಳು

ಈ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವರೇ ಎಂಬುದನ್ನು ಕಾದುನೋಡಬೇಕಿದೆ. 🙏🖋️ ವಂದನೆಗಳು. ಶ್ರೀ ಬಸವರಾಜುರವರು. ಪತ್ರಕರ್ತ ಹಾಗೂ ಹೋರಾಟಗಾರರು. ವೀರಾಪುರ

LEAVE A REPLY

Please enter your comment!
Please enter your name here