71 ವರ್ಷದ ನಿರ್ಮಾಪಕನೊಂದಿಗೆ ರಿಯಾಗಿತ್ತು ಅಫೇರ್​!; ಬರಹಗಾರ್ತಿ ಶೆಫಾಲಿ ಹೊಸ ಬಾಂಬ್​!

0

ಕೊನೆಗೂ ಜಾರಿ ನಿರ್ದೇಶನಾಲಯದ ಕರೆಗೆ ಸ್ಪಂದಿಸಿದ ರಿಯಾ ಚಕ್ರವರ್ತಿ ಶುಕ್ರವಾರ ಮುಂಬೈನಲ್ಲಿರುವ ಇಡಿ ಕಚೇರಿಗೆ ತೆರಳಿದ್ದಾರೆ. ಸುಶಾಂತ್​ ಹಣ ದುರ್ಬಳಕೆ ವಿಚಾರಕ್ಕೆ ಸಂಬಂಧಿಸಿದ್ದಂತೆ ತಂದೆ ಕೆಕೆ ಸಿಂಗ್​ ಮನಿ ಲಾಂಡರಿಂಗ್​ ಪ್ರಕರಣ ದಾಖಲಿಸಿದ್ದರು. ಅದರ ಅನುಸಾರ ಆಗಸ್ಟ್ 7ರಂದು ವಿಚಾರಣೆಗೆ ಆಗಮಿಸುವಂತೆ ಇಡಿ ಆದೇಶಿಸಿತ್ತು. ಇದೀಗ ರಿಯಾ ವಿಚಾರಣೆಗೆ ಹಾಜರಾಗಿದ್ದಾರೆ. ಇದರ ನಡುವೆಯೇ ರಿಯಾ ಬಗ್ಗೆ ಹೊಸ ಬಾಂಬ್​ ಸಿಡಿಸಿದ್ದಾರೆ ಖ್ಯಾತ ಬರಹಗಾರ್ತಿ ಶೆಫಾಲಿ ವೈದ್ಯ.

ರಿಯಾ ಚಕ್ರವರ್ತಿ ಬಾಲಿವುಡ್​ನ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ಮಹೇಶ್​ ಭಟ್ ಜತೆ ಸಂಬಂಧ ಹೊಂದಿದ್ದರೇ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ ಬರಹಗಾರ್ತಿ ಶೆಫಾಲಿ. ಈ ಸಂಬಂಧ ಒಂದಷ್ಟು ಫೋಟೋಗಳನ್ನು ಶೇರ್​ ಮಾಡಿಕೊಂಡಿರುವ ಅವರು, ಮಹೇಶ್​ ಭಟ್​ ಮತ್ತು ರಿಯಾ ನಡುವಿನ ಸಂಬಂಧ ಎಂಥದ್ದಿರಬಹುದು ಎಂದಿದ್ದಾರೆ.

ಈ ಹಿಂದೆ ಮಹೇಶ್ ಭಟ್​ ಸಾಕಷ್ಟು ವಿಚಾರಕ್ಕೆ ಸುದ್ದಿಯಾಗಿದ್ದರು,. ಸ್ವತಃ ಮಹಳು ಪೂಜಾ ಭಟ್​ಗೆ ಲಿಪ್​ ಕಿಸ್ ಮಾಡಿ ಕಾಂಟ್ರವರ್ಸಿ ಸೃಷ್ಟಿಸಿಕೊಂಡಿದ್ದರು. ಅದು ದೊಡ್ಡ ಚರ್ಚೆಯಾಗುತ್ತಿದ್ದಂತೆ, ಒಂದು ವೇಳೆ ಆಕೆ ನನ್ನ ಮಗಳು ಆಗಿರಲಿಲ್ಲ ಅಂದಿದ್ದರೆ, ನಾನೇ ಅವಳನ್ನು ಮದುವೆಯಾಗುತ್ತಿದ್ದೆ ಎಂದಿದ್ದರು.

ಇದೀಗ ರಿಯಾ ಜತೆಗಿನ ಒಂದಷ್ಟು ಫೋಟೋಗಳು ಮತ್ತು ವಿಡಿಯೋಗಳು ಮಹೇಶ್ ಅವರ ಇನ್ನೊಂದು ಮುಖವನ್ನು ತೋರಿಸುತ್ತಿದ್ದು, ಇಬ್ಬರ ನಡುವೆ ಏನೋ ಸಂಬಂಧವಿದೆ. ಹಾಗಾಗಿ ಮುಜುಗರಕ್ಕೀಡಾಗುವಂತ ಸಾಕಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸಾರ್ವಜನಿಕ ವಲಯದಲ್ಲೂ ಮಹೇಶ್ ಭಟ್ ವರ್ತನೆ ಅಸಭ್ಯವಾಗಿದೆ ಎಂದೂ ಶಫಾಲಿ ಅನುಮಾನ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

LEAVE A REPLY

Please enter your comment!
Please enter your name here