75 ದಾಟಿತು, ಪಕ್ಷದ ನೀತಿ ಅನುಸರಿಸಿ ಸಚಿವ ಸ್ಥಾನ ತೊರೆದ ಉತ್ತರಪ್ರದೇಶ ಹಣಕಾಸು ಸಚಿವ

0

ವಯಸ್ಸಿನ ಕಾರಣವೊಡ್ಡಿ ಯೋಗಿ ಆದಿತ್ಯನಾಥ್ ನೇತತ್ವದ ಉತ್ತರಪ್ರದೇಶ ಸರ್ಕಾರದಲ್ಲಿ ಹಣಕಾಸು ಸಚಿವರಾಗಿರುವ ರಾಜೇಶ್ ಅಗರ್ವಾಲ್ ತಮ್ಮ ಸಚಿವ ಸ್ಥಾನಕ್ಕೆ ಮಂಗಳವಾರ ರಾಜೀನಾಮೆ ನೀಡಿದ್ದಾರೆ.

ಭಾರತೀಯ ಜನತಾ ಪಕ್ಷದಲ್ಲಿನ ವಯೋಮಿತಿ ನೀತಿಯನ್ನು ಉಲ್ಲೇಖಿಸಿದ ಅಗರ್ವಾಲ್, ಪಕ್ಷದ ನೀತಿಯಂತೆ ನನಗೆ 75 ವರ್ಷಗಳಾಗಿರುವುದರಿಂದ ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದ್ದಾರೆ.

ರಾಜೇಶ್ ಅಗರ್ವಾಲ್ ಅವರ ವಯಸ್ಸು 76 ಆಗಿದ್ದು, ಬಿಜೆಪಿ ಕೆಲವೊಂದು ಸಂದರ್ಭಗಳಲ್ಲಿ ಹೊರತು ಪಡಿಸಿ ಬಹುತೇಕ ವಯೋಮಿತಿ ನಿಯಮವನ್ನು ಅನುಸರಿಸುತ್ತದೆ. 75 ವರ್ಷಕ್ಕಿಂತ ಮೇಲ್ಪಟ್ಟ ನಾಯಕರನ್ನು ಸಚಿವ ಸ್ಥಾನಕ್ಕೆ ಅಥವಾ ಚುನಾವಣೆಗೆ ಪರಿಗಣಿಸುವುದು ತೀರ ಅಪರೂಪ.

ಇದೀಗ ಸಚಿವ ಸ್ಥಾನ ತೊರೆದಿರುವ ಅಗರ್ವಾಲ್, ಪಕ್ಷ ತಮಗೆ ನೀಡುವ ಯಾವುದೇ ಜವಾಬ್ದಾರಿಯನ್ನು ನಿರ್ವಹಿಸಲು ಸಿದ್ಧ ಎಂದು ಹೇಳಿದ್ದಾರೆ.

 

LEAVE A REPLY

Please enter your comment!
Please enter your name here