9.6 ಲಕ್ಷ ಮೌಲ್ಯದ 600 ಕೆಜಿ ಹಿಲ್ಸಾ ಮೀನುಗಳ ವಶ

0

ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿದ್ದ 600 ಕೆಜಿ ಹಿಲ್ಸಾ ಮೀನುಗಳನ್ನು ಗಡಿಭದ್ರತಾ ಪಡೆ (ಬಿಎಸ್‍ಎಫ್) ವಶಪಡಿಸಿಕೊಂಡಿದೆ.

ಪಶ್ಚಿಮ ಬಂಗಾಳದ ಮುರ್ಷಿದಾಬಾದ್‍ನ ಫಾಜಿಪಾಡಾದಲ್ಲಿ ಗಸ್ತು ತಿರುಗುತ್ತಿದ್ದಾಗ ಬಾಂಗ್ಲಾದೇಶದ ಕಡೆಯಿಂದ ನೀರಿನಲ್ಲಿ ಸೆಣಬಿನ ಕಟ್ಟುಗಳನ್ನು ಎಳೆಯುತ್ತಿದ್ದ ವ್ಯಕ್ತಿಗಳು ಕಂಡುಬಂದರು. ತಮ್ಮನ್ನು ನೋಡಿ ಅಲ್ಲಿಂದ ಪರಾರಿಯಾಗಿದ್ದಾರೆ .

ನದಿಯಲ್ಲಿ ದೋಣಿ ಗಸ್ತಿನಲ್ಲಿದ್ದ ಗಡಿ ಕಾವಲುಗಾರರು ಕೂಡಲೇ ಸೆಣಬಿನ ಕಟ್ಟುಗಳಡಿಯಿದ್ದ ಪ್ಲಾಸ್ಟಿಕ್ ಚೀಲಗಳನ್ನು ವಶಕ್ಕೆ ಪಡೆದು ಪರಿಶಿಲೀಸಿದಾಗ 600 ಕೆಜಿ ಹಿಲ್ಸಾ ಮೀನುಗಳು ಕಂಡುಬಂದಿವೆ.

ಇದು ಭಾರತೀಯ ಮಾರುಕಟ್ಟೆಯಲ್ಲಿ ಅಂದಾಜು 9.6 ಲಕ್ಷ ರೂ.ಗಳಾಗಿವೆ ಎಂದು ಬಿಎಸ್‍ಎಫ್ ತಿಳಿಸಿದೆ. ಬಾಂಗ್ಲಾದೇಶದ ಪದ್ಮಾನದಿಯ ಮೀನುಗಳಿಗೆ ಅದರಲ್ಲೂ ಹಿಲ್ಸಾ ಮೀನುಗಳಿಗೆ ವಿಶೇಷವಾಗಿ ಪಶ್ಚಿಮ ಬಂಗಾಳ ಮತ್ತು ಇತರೆಡೆಗಳಲ್ಲಿ ಭಾರೀ ಬೇಡಿಕೆ ಇದೆ.

LEAVE A REPLY

Please enter your comment!
Please enter your name here