BIG BREAKING : ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣ : ಬೆಂಗಳೂರಿನಲ್ಲಿ 12 ಕಡೆಯಲ್ಲಿ NIA ದಾಳಿ

0

 ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣವನ್ನು ತನಿಖೆ ನಡೆಸಲು ಎನ್ ಐ ಎ ಕೈಗೆತ್ತಿಕೊಂಡಿತ್ತು. ಈ ಪ್ರಕರಣ ಕುರಿತಂತೆ ತನಿಖೆ ನಡೆಸುತ್ತಿರುವ ಎನ್‌ಐಎ ತಂಡದಿಂದ ಇಂದು ಬೆಂಗಳೂರಿನ 12 ಕಡೆಗಳಲ್ಲಿ ಏಕಕಾಲದಲ್ಲಿ ದಾಳಿನಡೆಸಲಾಗಿದೆ. ಈ ಮೂಲಕ ಪ್ರಕರಣ ಸಂಬಂಧ ಮಹತ್ವದ ದಾಖಲೆಗಳನ್ನು ಕಲೆಹಾಕಲಾಗುತ್ತಿದೆ ಎನ್ನಲಾಗಿದೆ.

ಇಂದು ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣ ಕುರಿತಂತೆ ಮಹತ್ವದ ಮಾಹಿತಿ ಕಲೆಹಾಕಲು ಇಳಿದಿರುವ ಎನ್‌ಐಎ ಅಧಿಕಾರಿಗಳು, ನಗರ 12 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದೆ. ಅದರಲ್ಲೂ ಬೆಂಗಳೂರಿನ ಒಂದೇ ಪ್ರದೇಶದ 8 ಕಡೆ ಎನ್‌ಐಎ ದಾಳಿ ನಡೆಸಿದೆ. ಈ ಮೂಲಕ ಬೆಂಗಳೂರು ಗಲಭೆ ಪ್ರಕರಣ ಸಂಬಂಧ ಮಹತ್ವದ ಮಾಹಿತಿಯನ್ನು ಕಲೆ ಹಾಕ ತೊಡಗಿದೆ.

LEAVE A REPLY

Please enter your comment!
Please enter your name here