BIG NEWS : ರಾಜ್ಯ ಆರೋಗ್ಯ ಇಲಾಖೆಯ ‘ದಿನಗೂಲಿ ನೌಕರ’ರಿಗೆ ಭರ್ಜರಿ ಸಿಹಿಸುದ್ದಿ : ಕನಿಷ್ಠ ವೇತನ ರೂ.18,600ಕ್ಕೆ ನಿಗಧಿಪಡಿಸಿ ಸರ್ಕಾರದ ಆದೇಶ

0

 ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ದಿನಗೂಲಿ ನೌಕರರಾಗಿ ಕಾರ್ಯನಿರ್ವಹಿಸುತ್ತಿರುವ ನೌಕರರ ಕನಿಷ್ಠ ವೇತನವನ್ನು ರೂ.18,600ಕ್ಕೆ ಏರಿಕೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಈ ಮೂಲಕ ಆರೋಗ್ಯ ಇಲಾಖೆಯ ದಿನಗೂಲಿ ನೌಕರರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ.

ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮುಖ್ಯ ಆಡಳಿತಾಧಿಕಾರಿಗಳು ಆದೇಶ ಹೊರಡಿಸಿದ್ದು, ದಿನಗೂಲಿ ನೌಕರರಿಗೆ ಕಾಲಿಕ ವೇತನ ಶ್ರೇಣಿಯಲ್ಲಿ ಕನಿಷ್ಠ ವೇತನ ನಿಗದಿಪಡಿಸಲು ಪ್ರಸ್ತಾವನೆ ಸಲ್ಲಿಸಲಾಗಿದ್ದು, ದಿನಾಂಕ 15-11-2018ರ ಸರ್ಕಾರಿ ಆದೇಶದಂತೆ ಪರಿಷ್ಕೃತ ವೇತನ ಶ್ರೇಣಿಗಳನ್ವಯ ಕನಿಷ್ಠ ವೇತನವನ್ನು ಷರತ್ತುಗಳೊಂದಿಗೆ ನಿಗದಿಪಡಿಸಲು ಆದೇಶಿಸಲಾಗಿದೆ.

ಸದರಿ ಪ್ರಸ್ತಾವನೆಯನ್ನು ಪರಿಶೀಲಿಸಲಾಗಿ ದಿನಗೂಲಿ ನೌಕರರಿಗೆ ಸರ್ಕಾರದ ಆದೇಶದಂತೆ ದಿನಾಂಕ 01-08-2020ರಿಂದ ಅನ್ವಯವಾಗುವಂತೆ 2018ರ ಪರಿಷ್ಕೃತ ವೇತನ ಶ್ರೇಣಿ ರೂ.18,600 ರಿಂದ ರೂ.32,600ರ ಕನಿಷ್ಠ ವೇತನ ರೂ.18,600ಕ್ಕೆ ನಿಗದಿಪಡಿಸಲು ಮತ್ತು ಶೇ.75ರಷ್ಟು ತುಟ್ಟಿಭತ್ಯೆ ಹಾಗೂ ಮನೆ ಬಾಡಿಗೆ ಭತ್ಯೆಯನ್ನು ನಿಗದಿಪಡಿಸಿಕೊಳ್ಳಲು ಸೂಚಿಸಿದ್ದಾರೆ. ಈ ಮೂಲಕ ದಿನಗೂಲಿ ನೌಕರರಿಗೆ ಭರ್ಜರಿ ಸಿಹಿಸುದ್ದಿಯನ್ನು ನೀಡಿದ್ದಾರೆ.

ವರದಿ : ವಸಂತ ಬಿ ಈಶ್ವರಗೆರೆ

LEAVE A REPLY

Please enter your comment!
Please enter your name here