ಬಾಲಿವುಡ್ ನಟ ಅಜಯ್ ದೇವಗನ್ ಸಹೋದರ ನಿರ್ದೇಶಕ ಅನಿಲ್ ದೇವಗನ್ ಸೋಮವಾರ ವಿಧಿವಶರಾಗಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅಜಯ್ ದೇವಗನ್ ನಾನು ಕಳೆದ ರಾತ್ರಿ ನನ್ನ ಸಹೋದರ ಅನಿಲ್ ದೇವಗನ್ ಅವರನ್ನು ಕಳೆದುಕೊಂಡೆ, ಸಾಂಕ್ರಾಮಿಕ ರೋಗವಿರುವ ಕಾರಣ ನಾವು ವೈಯಕ್ತಿಕ ಪ್ರಾರ್ಥನಾ ಸಭೆ ನಡೆಸುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ
ಅನಿಲ್ ದೇವಗನ್ ಅವರು ರಾಜು ಚಾಚಾ ಸಿನಿಮಾವನ್ನು ನಿರ್ದೇಶಿಸುವ ಮೂಲಕ ಹೆಸರು ಮಾಡಿದ್ದರು. ಸಹಾಯಕ ನಿರ್ದೇಶಕರಾಗಿ ವೃತ್ತಿ ಜೀವನ ಪ್ರಾರಂಭಿಸಿದ ಅವರು ಸಾಕಷ್ಟು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು.