BREAKING : ತಲಕಾವೇರಿ ಪ್ರಧಾನ ಅರ್ಚಕ ನಾರಾಯಣ್ ಆಚಾರ್ಯರಿಗೆ 33 ಕೋಟಿ ರೂ.ಭತ್ಯೆ ಬಿಡುಗಡೆ

0

ತಲಕಾವೇರಿ ಪ್ರಧಾನ ಅರ್ಚಕ ನಾರಾಯಣ ಆಚಾರ್ ಅಂತ್ಯಕ್ರಿಯೆ ಇಂದು ನಡೆದಿದ್ದುಪಂಚಭೂತಗಳಲ್ಲಿ ನಾರಾಯಣ್ ಆಚಾರ್ಯ ಲೀನರಾಗಿದ್ದಾರೆ.

ಈ ಬೆನ್ನಲ್ಲೇತಲಕಾವೇರಿ ಪ್ರಧಾನ ಅರ್ಚಕ ನಾರಾಯಣ್ ಆಚಾರ್ಯರಿಗೆ ರಾಜ್ಯ ಸರ್ಕಾರ 33 ಕೋಟಿ ರೂ.ಭತ್ಯೆ ಬಿಡುಗಡೆ ಮಾಡಿದೆ. ಹೌದು, ಕಂದಾಯ ಇಲಾಖೆಯಿಂದ ಅರ್ಚಕ ನಾರಾಯಣ್ ಆಚಾರ್ಯರಿಗೆ 33 ಕೋಟಿ ರೂ.ಭತ್ಯೆ ಬಿಡುಗಡೆ ಮಾಡಿದ್ದು, ಅರ್ಚಕರ ಖಾತೆಗೆ ಹಣ ಜಮಾ ಮಾಡಲು ಆದೇಶ ಹೊರಡಿಸಲಾಗಿದೆ.

ಬ್ರಹ್ಮಗಿರಿ ಬೆಟ್ಟ ಕುಸಿತಗೊಂಡು ನಾಪತ್ತೆಯಾಗಿದ್ದಂತ ತಲಕಾವೇರಿ ಪ್ರಧಾನ ಅರ್ಚಕ ನಾರಾಯಣ ಆಚಾರ್ ಅವರ ಮೃತ ದೇಹ ಪತ್ತೆಯಾಗಿದೆ. ಬೆಟ್ಟದಿಂದ 2 ಕಿಲೋಮೀಟರ್ ದೂರದಲ್ಲಿ ಪತ್ತೆಯಾಗಿತ್ತು. ಳೆದ 6 ದಿನಗಳ ಹಿಂದೆ ಸುರಿದಂತ ಭಾರೀ ಮಳೆಯಿಂದಾಗಿ ತಲಕಾವೇರಿಯ ಪ್ರಧಾನ ಅರ್ಚಕ ನಾರಾಯಣ ಆಚಾರ್ ಅವರ ಮನೆಯ ಮೇಲೆ ಬ್ರಹ್ಮಗಿರಿ ಬೆಟ್ಟ ಕುಸಿತಗೊಂಡಿತ್ತು. ಹೀಗಾಗಿ ಅರ್ಚಕ ನಾರಾಯಣ ಆಚಾರ್, ಅವರ ಪತ್ನಿ, ಅಣ್ಣ ಹಾಗೂ ಇಬ್ಬರು ಸಹಾಯಕರು ನಾಪತ್ತೆಯಾಗಿದ್ದರು. ಇಂತಹ ನಾಪತ್ತೆಯಾದವರ ರಕ್ಷಣಾ ಕಾರ್ಯಾಚರಣೆ ಕಳೆದ ಆರು ದಿನಗಳ ಹಿಂದಿನಿಂದ ನಡೆಯುತ್ತಿತ್ತು. ಮೊದಲು ನಾರಾಯಣ ಆಚಾರ್ ಅಣ್ಣನ ಮೃತದೇಹ ಪತ್ತೆಯಾಗಿತ್ತು. ಈ ಬಳಿಕ ಇಂದು ತಲಕಾವೇರಿ ಪ್ರಧಾನ ಅರ್ಚಕ ನಾರಾಯಣ ಆಚಾರ್ ಅವರ ಮೃತದೇಹ ಬ್ರಹ್ಮಗಿರಿ ಬೆಟ್ಟದಿಂದ 2 ಕಿಲೋಮೂಟರ್ ದೂರದಲ್ಲಿ ಪತ್ತೆಯಾಗಿದೆ.

LEAVE A REPLY

Please enter your comment!
Please enter your name here