FAU-G ಗೇಮ್: ಗಲ್ವಾನ್ ಕಣಿವೆಯ ಚಿತ್ರಣ, ಅಕ್ಟೋಬರ್ ಅಂತ್ಯದ ವೇಳೆಗೆ ಬಳಕೆದಾರರಿಗೆ ಲಭ್ಯ !

0

ಬಾಲಿವುಡ್ ನಟ ಅಕ್ಷಯ್ ಕುಮಾರ್ ಸಹಭಾಗಿತ್ವದಲ್ಲಿ ಸ್ವದೇಶಿ ಬ್ಯಾಟಲ್ ರಾಯಲ್ ವಿಡಿಯೋ ಗೇಮ್ FAU-G ಶುಕ್ರವಾರ ಲೋಕಾರ್ಪಣೆಗೊಂಡಿದ್ದವು. ಇದು ಭಾರತದಲ್ಲಿ ಬ್ಯಾನ್ ಆದ ಪಬ್ ಜಿ ಪರ್ಯಾಯ ಎಂದೇ ಗುರುತಿಸಲಾಗಿದ್ದು, ಬೆಂಗಳೂರು ಮೂಲದ nCore ಗೇಮ್ಸ್ ಸಂಸ್ಥೆ ಅಭಿವೃದ್ಧಿಪಡಿಸಿದೆ.

Fearless and United-Guards ಗೇಮ್ ಈ ವರ್ಷದ ಅಕ್ಟೋಬರ್ ಅಂತ್ಯದ ವೇಳೆ ಬಳಕೆದಾರರಿಗೆ ಲಭ್ಯವಾಗಲಿದೆ ಎಂದು ಕಂಪೆನಿಯ ಸಹ ಸಂಸ್ಥಾಪಕ ವಿಶಾಲ್ ಗೊಂಡಾಲ್ ತಿಳಿಸಿದ್ದಾರೆ.

ಸದ್ಯ ಗೇಮಿಂಗ್ ಆಯಪ್ ನ ಕೊನೆಯ ಹಂತದ ಪ್ರಕ್ರಿಯೆ ನಡೆಯುತ್ತಿದ್ದು, ಗಮನಾರ್ಹ ಸಂಗತಿಯೆಂದರೇ ಇದರ ಮೊದಲ ಲೆವೆಲ್ (ಹಂತ) ಗಲ್ವಾನ್ ಕಣಿವೆಯ ಸನ್ನಿವೇಶವನ್ನು ಆಧರಿಸಿದೆ. ಕಳೆದ ಜೂನ್ ನಲ್ಲಿ ಗಲ್ವಾನ್ ಕಣಿವೆಯಲ್ಲಿ ಭಾರತ ಚೀನಾ ನಡುವೆ ನಡೆದ ಸಂಘರ್ಷದಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿರುವುದನ್ನು ಇಲ್ಲಿ ನೆನಪಿಸಕೊಳ್ಳಬಹುದು.

ಅಂದಿನಿಂದ ಭಾರತ, ಚೀನಾದ ತಂತ್ರಜ್ಞಾನ ಆರ್ಥಿಕತೆಗೆ ಬಲವಾದ ಹೊಡೆತ ನೀಡುತ್ತಾ ಬಂದಿದ್ದು ಹಲವಾರು ಆಯಪ್ ಗಳನ್ನು ನಿಷೇಧ ಮಾಡಿತ್ತು.

nCore ನ FAU-G ಗೇಮ್, ದೇಶಪ್ರೇಮವನ್ನು ಬಡಿದೆಬ್ಬಿಸುವ ಗುರಿಯನ್ನು ಹೊಂದಿದೆ. ಮತ್ತು ಇದರ ನಿವ್ವಳ ಆದಾಯದ 20 ಪ್ರತಿಶತವನ್ನು ರಾಜ್ಯ ಬೆಂಬಲಿತ ಟ್ರಸ್ಟ್‌ಗೆ ನೀಡಲಾಗುವುದು, ತದನಂತರ ಹುತಾತ್ಮರಾದ ಸೈನಿಕರ ಕುಟುಂಬಗಳಿಗೆ ಹಸ್ತಾಂತರಿಸಲಾಗುವುದು ಎಂದು ಗೊಂಡಾಲ್ ತಿಳಿಸಿದ್ದಾರೆ.

ಅಕ್ಷಯ್ ಕುಮಾರ್ ಕೂಡ ಗೇಮಿಂಗ್ ಆಯಪ್ ಹಿಂದಿರುವ ಸದುದ್ದೇಶವನ್ನು ಗುರುತಿಸಿದ್ದು, ಗೇಮ್ ಗೆ FAU-G ಎಂಬ ಹೆಸರನ್ನೂ ಅವರೇ ಸೂಚಿಸಿದ್ದಾರೆ. ಮಾತ್ರವಲ್ಲದೆ ಒಂದು ವರ್ಷಕ್ಕೆ 200 ಮಿಲಿಯನ್ ಬಳಕೆದಾರರನ್ನು ಸೆಳೆಯುವ ಗುರಿಯನ್ನು ಹೊಂದಿದ್ದಾರೆಂದು ಗೊಂಡಾಲ್ ಹೇಳಿಕೆ ನೀಡಿದ್ದಾರೆ.

LEAVE A REPLY

Please enter your comment!
Please enter your name here