FLASH: ಪರಪ್ಪನ ಅಗ್ರಹಾರದ ಜೈಲಿನಲ್ಲಿ ಡ್ರಗ್ಸ್ ಆರೋಪಿಗಳಿಗೆ ‘ರಾಜ ಮರ್ಯಾದೆ’ : ಹಣದ ಮುಂದೆ ಸೋತ ‘ಕಾನೂನು’.!?

0

ಸ್ಯಾಂಡಲ್ ವುಡ್ ಡ್ರಗ್ ದಂಧೆ ಕೇಸ್ ಪ್ರಕರಣಕ್ಕೆ ಸಂಬಂಧ ಜೈಲಿನಲ್ಲಿರುವ ನಟಿ ರಾಗಿಣಿ, ಸಂಜನಾಗೆ ರಾಜ ಮರ್ಯಾದೆ ನೀಡಲಾಗುತ್ತಿದೆ ಎಂಬ ಆರೋಪ ಕೂಡ ಕೇಳಿಬಂದಿದೆ.

ಹೌದು. ಜೈಲಿನ ಮೂಲಗಳ ಪ್ರಕಾರ ಕಳೆದ ಕೆಲವು ದಿನಗಳಿಂದ ಜೈಲಿನಲ್ಲಿರುವ ರಾಗಿಣಿ ಮತ್ತು ಸಂಜನಾ ಟೀಮ್ ಗೆ ವಿಧ ವಿಧವಾದ ಊಟ ಸಿಗುತ್ತಿದೆ. ಜೈಲಿನ ಸಿಬ್ಬಂದಿಯೊಬ್ಬರ ಮನೆಯಲ್ಲಿ ಆಡುಗೆ ತಯಾರಿಸಿ ಸಂಜನಾ, ರಾಗಿಣಿ ಮತ್ತು ಇತರರಿಗೆ ನೀಡಲಾಗುತ್ತಿದೆ ಎನ್ನಲಾಗಿದೆ. ಜೈಲು ಅಧಿಕಾರಿಗಳ ಸೂಚನೆ ಮೇರೆಗೆ ಸಿಬ್ಬಂದಿ ನಿತ್ಯ ಮನೆಯಲ್ಲಿ ಆಡುಗೆ ಮಾಡಿ ಜೈಲಿನಲ್ಲಿರುವ ಸಂಜನಾ,ರಾಗಿಣಿ ಅಂಡ್ ಗ್ಯಾಂಗ್ ಗೆ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಐಷಾರಾಮಿ ಜೀವನ ನಡೆಸುತ್ತಿದ್ದ ನಟಿಮಣಿಯರು ಪರಪ್ಪನ ಅಗ್ರಹಾರ ಸೇರಿದ್ದಾರೆ, ಆದರೆ ಜೈಲಿನಲ್ಲೂ ಕೂಡ ನಟಿಮಣಿಯರಿಗೆ ರಾಜ ಮರ್ಯಾದೆ ಕೊಡಲಾಗುತ್ತಿದೆ. ವಿಧ ವಿಧವಾದ ಭಕ್ಷ್ಯ ಭೋಜನ ತಯಾರಿಸಿ ಮಧ್ಯಾಹ್ಮ, ರಾತ್ರಿ ಊಟಕ್ಕೆ ನೀಡಲಾಗುತ್ತಿದೆ.

ಇನ್ನೂ, ನಟಿ ರಾಗಿಣಿ ದ್ವಿವೇದಿ, ನಟಿ ಸಂಜನಾ ಗಲ್ರಾನಿ ಸೇರಿದಂತೆ ಐವರು ಡ್ರಗ್ಸ್ ಪ್ರಕರಣದ ಆರೋಪಿಗಳು ಸಲ್ಲಿಸಿದ್ದಂತ ಜಾಮೀನು ಅರ್ಜಿಯ ವಿಚಾರಣೆಯನ್ನು ಕೋರ್ಟ್ ಸೆ.21ರ ಸೋಮವಾರಕ್ಕೆ ಮುಂದೂಡಿದೆ. ಹೀಗಾಗಿ ನಟಿ ರಾಗಿಣಿ, ಸಂಜನಾಗೆ ಸದ್ಯಕ್ಕೆ ಜೈಲೂಟವೇ ಮುಂದುವರಿಕೆಯಾಗಿದೆ.

ಒಟ್ಟಿನಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವಂತ ನಟಿ ರಾಗಿಣಿ, ನಟಿ ಸಂಜನಾ ಅವರ ಜಾಮೀನು ಅರ್ಜಿಯನ್ನು ನಾರ್ಕೊಟಿಕ್ ಡ್ರಗ್ಸ್ ಆಂಡ್ ಸೈಕೊಟ್ರಾಫಿಕ್ ಸಬ್‌ಸ್ಟೆನ್ಸಸ್ (ಎನ್‌ಡಿಪಿಎಸ್) ಕೋರ್ಟ್ ಇಂದು ವಿಚಾರಣೆಗೆ ಕೈಗೆತ್ತಿಕೊಂಡಿತು. ಇಂತಹ ಅರ್ಜಿಯನ್ನು ಮತ್ತೆ ಕೋರ್ಟ್ ಸೋಮವಾರಕ್ಕೆ ಮುಂದೂಡಿದೆ. ಹೀಗಾಗಿ ಮತ್ತೆ ಎರಡು ದಿನ ನಟಿ ರಾಗಿಣಿ, ಸಂಜನಾ ಸೇರಿದಂತೆ ಐವರಿಗೆ ಜೈಲೇ ಗತಿಯಾದಂತೆ ಆಗಿದೆ.

LEAVE A REPLY

Please enter your comment!
Please enter your name here