FLASH: ಮಾಸ್ಕ್‌ ಧರಿಸದೇ ಇರೋದನ್ನು ಪ್ರಶ್ನೆ ಮಾಡಿದಕ್ಕೆ ಧಮ್ಕಿ ಹಾಕಿ ಕ್ರಿಕೆಟ್‌ ತಾರೆ ಜಡೇಜ ದಂಪತಿ

0

 ಮುಖವಾಡ ಧರಿಸದ ಕಾರಣ ಮಹಿಳೆ ಪೇದೆಯೊಬ್ಬರು ಭಾರತದ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರನ್ನು ಪ್ರಶ್ನೆ ಮಾಡಿದಕ್ಕೆ ಜಡೇಜಾ ಅವರು ಸಿಟ್ಟಾಗಿ ನಡೆದುಕೊಂಡಿರುವ ಘಟನೆ ರಾಜ್‌ಕೋಟ್‌ನಲ್ಲಿ ನಡೆದಿದೆ.

ಸೋಮವಾರ ರಾತ್ರಿ 9 ಗಂಟೆ ಸುಮಾರಿಗೆ ಗೆ ಸೋನಾಲ್ ಗೋಸಾಯಿ ಎನ್ನುವ ಮಹಿಳಾ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಒಬ್ಬರು ತನ್ನ ಹೆಂಡತಿಯೊಂದಿಗೆ ಕಾರಿನಲ್ಲಿ ತೆರಳುತ್ತಿದ್ದ ಜಡೇಜಾ ಅವರನ್ನ ತಡೆದಿದ್ದಾರೆ ಎನ್ನಲಾಗಿದೆ.ಇದೇ ವೇಳೆ ಜಡೇಜಾ ಹಾಗೂ ಅವರ ಪತ್ನಿ ಮಾಸ್ಕ್‌ ಧರಿಸದೇ ಇರೋದನ್ನು ಮಹಿಳಾ ಪೋಲಿಸ್‌ ಪೇದೇ ಪ್ರಶ್ನೆ ಮಾಡಿದ ವೇಳೆಯಲ್ಲಿ ಮೂವರ ನಡುವೆ ವಾಗ್ವದ ನಡೆದಿದ್ದು, ಪೊಲೀಸರು ದಂಡ ಕಟ್ಟುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಆದರೆ ಇಬ್ಬರ ಜಗಳ ತಾರಕಕ್ಕೇ ಏರಿದೆ ಎನ್ನಲಾಗಿದೆ. ಇನ್ನೂ ಈ ವೇಳೆ ಪೋಲಿಸರೊಂದಿಗೆ ಜಡೇಜಾ ಅನುಚಿತವಾಗಿ ನಡೆದುಕೊಂಡಿದ್ದಾರೆ ಎನ್ನಲಾಗಿದ್ದು, ಸದ್ಯ ಘಟನೆ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ ಆದರೆ ಘಟನೆಯಲ್ಲಿ ಮಹಿಳಾ ಪೇದೆಯ ಸೋನಲ್​ ಗೋಸೈ ಮತ್ತು ಜಡೇಜಾ ಪತ್ನಿ ರಿವಾಬಾ ಅವರು ಬಳಿಕ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here