IPL 2020: ಗಾಯಾಳು ಭುವಿ ಟೂರ್ನಿಯಿಂದ ಔಟ್; ಪೃಥ್ವಿಗೆ ಸ್ಥಾನ ನೀಡಿದ ರೈಸರ್ಸ್

0

ಗಾಯಗೊಂಡು ಟೂರ್ನಿಯಿಂದ ಹೊರ ನಡೆದಿರುವ ಅನುಭವಿ ವೇಗಿ ಭುವನೇಶ್ವರ್‌ ಕುಮಾರ್‌ ಅವರ ಸ್ಥಾನವನ್ನು ಆಂಧ್ರ ಪ್ರದೇಶದ ಎಡಗೈ ವೇಗಿ ಪೃಥ್ವಿ ರಾಜ್‌ ಯರ್ರಾ ತುಂಬಲಿದ್ದಾರೆ ಎಂದು ಸನ್‌ರೈಸರ್ಸ್‌ ಹೈದಾರಾಬಾದ್‌ ತಂಡ ತಿಳಿಸಿದೆ.

ಈ ಬಗ್ಗೆ ಟ್ವಿಟರ್‌ ಮೂಲಕ ಮಾಹಿತಿ ಹಂಚಿಕೊಂಡಿರುವ ರೈಸರ್ಸ್‌, ‘ಗಾಯದ ಸಮಸ್ಯೆಯಿಂದಾಗಿ ಭುವನೇಶ್ವರ್‌ ಕುಮಾರ್‌ ಅವರು #Dream11IPL 2020 ಟೂರ್ನಿಯಿಂದ ಹೊರನಡೆದಿದ್ದಾರೆ. ಅವರು ಬೇಗನೆ ಗುಣಮುಖರಾಗಲಿ ಎಂದು ನಾವು ಹಾರೈಸುತ್ತೇವೆ! ಆವೃತ್ತಿಯ ಉಳಿದ ಪಂದ್ಯಗಳಿಗೆ ಪೃಥ್ವಿ ರಾಜ್‌ ಯರ್ರಾ ಅವರು ಭುವಿ ಸ್ಥಾನವನ್ನು ತುಂಬಲಿದ್ದಾರೆ’ ಎಂದು ತಿಳಿಸಿದೆ.

ಅಕ್ಟೋಬರ್‌ 2ರಂದು ದುಬೈನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ನಡೆದ ಪಂದ್ಯದ ವೇಳೆ ಭುವಿ ಗಾಯಗೊಂಡಿದ್ದರು.

ಕಳೆದ ಬಾರಿ ಕೋಲ್ಕತ್ತ ನೈಟ್‌ರೈಡರ್ಸ್‌ ತಂಡದಲ್ಲಿದ್ದ ಯರ್ರಾ ಎರಡು ಪಂದ್ಯಗಳನ್ನು ಆಡಿ 1 ವಿಕೆಟ್‌ ಪಡೆದಿದ್ದರು. 11 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ 22 ವರ್ಷದ ಈ ಆಟಗಾರ 39 ವಿಕೆಟ್‌ಗಳನ್ನು ಉರುಳಿಸಿದ್ದಾರೆ.

LEAVE A REPLY

Please enter your comment!
Please enter your name here