‘KGF’ ಮಾದರಿಯಲ್ಲಿ ಬೈಕ್ ವಿನ್ಯಾಸಗೊಳಿಸಿ ವ್ಹೀಲಿಂಗ್ : 9 ಮಂದಿ ವಿರುದ್ಧ ಪ್ರಕರಣ ದಾಖಲು

0

ಬೆಂಗಳೂರು : ಕೆಜಿಎಫ್ ಮಾದರಿಯಲ್ಲಿ ಬೈಕ್ ವಿನ್ಯಾಸಗೊಳಿಸಿ ವೀಲಿಂಗ್ ಮಾಡುತ್ತಿದ್ದ ಆರೋಪದ ಮೇಲೆ ಒಟ್ಟು 9 ಮಂದಿ ವಿರುದ್ಧ ನಗರ ಪೊಲೀಸರು ಕೇಸ್ ದಾಖಲಿಸಿದ್ದಾರೆ.

ಕೆಜಿಎಫ್ ಮಾದರಿಯಲ್ಲಿ ಬೈಕ್ ವಿನ್ಯಾಸಗೊಳಿಸಿ ವೀಲಿಂಗ್ ಮಾಡುತ್ತಿದ್ದ ಆರೋಪದ ಮೇಲೆ ಹೊಸಕೋಟೆಯ ಸುನೀಲ್ ಕೆ ಎಸ್ , ಮಧು, ಮುಬಾರಕ್, ಕಾರ್ತಿಕ್, ನವಾಜ್ ಎಂಬ ಯುವಕರನ್ನು ಬಂಧಿಸಲಾಗಿದೆ.

ಈ ಸಂಬಂಧ 7 ಬೈಕ್ ಗಳನ್ನು ಸೀಜ್ ಮಾಡಲಾಗಿದ್ದು, ಆರೋಪಿಗಳು ಬೈಕ್ ವೀಲಿಂಗ್ ಮಾಡಿ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಯಲ್ಲೊಬ್ಬನನ್ನು ಸುನೀಲ್ ಯಶ್ ಅಭಿಮಾನಿ ಸಂಘದ ಕಾರ್ಯದರ್ಶಿ ಎಂದು ಗುರುತಿಸಲಾಗಿದೆ.

LEAVE A REPLY

Please enter your comment!
Please enter your name here