KSRTCಯಿಂದಲೂ ಕೊರಿಯರ್ ಸೇವೆ: ಡಿಸಿಎಂ ಸವದಿ

0

ಕೆಎಸ್ಸಾರ್ಟಿಸಿಯಿಂದಲೂ ಶೀಘ್ರದಲ್ಲೇ ಕೊರಿಯರ್ ಸೇವೆ ಆರಂಭಿಸಲಾಗುವುದು ಎಂದು ಸಾರಿಗೆ ಸಚಿವ ಹಾಗೂ ಡಿಸಿಎಂ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದುವರೆಗೆ ಕೊರಿಯರ್ ಸೇವೆಯನ್ನು ಖಾಸಗಿ ಸಂಸ್ಥೆಗಳು ಮಾತ್ರ ಮಾಡುತ್ತಿದ್ದವು. ಆದರೆ ಕೆಎಸ್ ಆರ್ ಟಿಸಿ ಸಂಸ್ಥೆಯಿಂದ ಕೊರಿಯರ್ ಸೇವೆ ಆರಂಭಿಸಲಾಗುವುದು ಎಂದರು.

ಕೊರಿಯರ್ ಸೇವೆ ಆರಂಭಿಸುವ ಕುರಿತು ಈಗಾಗಲೇ ಟೆಂಡರ್ ಕರೆಯಲಾಗಿದೆ. ಈ ಮೂಲಕ ಕೆಎಸ್ ಆರ್ ಟಿ ವಾರ್ಷಿಕ ಕನಿಷ್ಠ 100 ಕೋಟಿ ರೂ. ಆದಾಯ ನಿರೀಕ್ಷಿಸಿದೆ ಎಂದು ಲಕ್ಷ್ಮಣ್ ಸವದಿ ವಿವರಿಸಿದರು.

ಕೆಎಸ್ ಆರ್ ಟಿಸಿ ಬಸ್ ಗಳು ರಾಜ್ಯಾದ್ಯಂತ ಸಂಚರಿಸುತ್ತಿವೆ. ಖಾಸಗಿ ಸಂಸ್ಥೆಗಳಿಗಿಂತ ಉತ್ತಮ ಸೇವೆ ನೀಡಬಹುದಾಗಿದೆ. ಈ ಹಿನ್ನೆಲೆಯಲ್ಲಿ ಖಾಸಗಿಯವರು ಗಳಿಸುತ್ತಿರುವ ಆದಾಯ ಕೆಎಸ್ ಆರ್ ಟಿಸಿಗೂ ಬರಲಿ ಎಂಬುದು ಚಿಂತನೆಯಾಗಿದೆ ಎಂದು ಅವರು ಹೇಳಿದರು.

ಇದೇ ವೇಳೆ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಬಿಜೆಪಿಗೆ ಸೇರ್ಪಡೆಯಾಗಿದ್ದಕ್ಕೆ ಶುಭ ಹಾರೈಸಿರುವ ಲಕ್ಷ್ಮಣ್ ಸವದಿ, ಅಣ್ಣಾಮಲೈ ಅವರಿಗೆ ತಮಿಳುನಾಡು ಜವಾಬ್ದಾರಿಯನ್ನು ವಹಿಸಲಾಗಿದೆ. ಅವರು ಈ ನಿಟ್ಟಿನಲ್ಲಿ ಯಶಸ್ಸು ಸಾಧಿಸುವ ವಿಶ್ವಾಸವಿದೆ ಎಂದರು.

LEAVE A REPLY

Please enter your comment!
Please enter your name here