‘NCB’ ಯಿಂದ ಮೃತ ಬಾಲಿವುಡ್ ನಟ ಸುಶಾಂತ್ ಸಿಂಗ್ ಮನೆಕೆಲಸದವನ ಬಂಧನ

0

ಬಾಲಿವುಡ್ ಯುವನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಸಿ ಬಿ ತೀವ್ರ ವಿಚಾರಣೆ ನಡೆಸುತ್ತಿದೆ.

ಇದೀಗ ಸುಶಾಂತ್​ ಸಿಂಗ್​ ಅವರ ಮನೆಯಲ್ಲಿದ್ದ ಸಹಾಯಕ ದೀಪೇಶ್​ ಸಾವಂತ್​ನನ್ನು ಎನ್​ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಮನೆ ಕೆಲಸದವನಾಗಿದ್ದ ದೀಪೇಶ್​ ಸಾವಂತ್​, ಸುಶಾಂತ್​ ಸಿಂಗ್​ ವಾಸವಾಗಿದ್ದ ಡೂಪ್ಲೆಕ್ಸ್​​ನಲ್ಲಿ ಕೆಳಗಿನ ಫ್ಲೋರ್​​ನಲ್ಲಿ ವಾಸವಾಗಿದ್ದನು. ಈತನನ್ನು ಭಾನುವಾರ ಬೆಳಗ್ಗೆ 11ಗಂಟೆಗೆ ಕೋರ್ಟ್​ಗೆ ಹಾಜರುಪಡಿಸಲಾಗುವುದು ಎಂದು ಎನ್​ಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇನ್ನೂ, ನಟಿ ರಿಯಾ ಚಕ್ರವರ್ತಿ ಸಹೋದರ ಶೋವಿಕ್ ಚಕ್ರವರ್ತಿಯನ್ನು ಸೆಪ್ಟೆಂಬರ್ 9 ರ ತನಕ ( ರಾಷ್ಟ್ರೀಯ ಮಾದಕ ವಸ್ತು ನಿಗ್ರಹ ದಳ ) ಎನ್ ಸಿಬಿ ವಶಕ್ಕೆ ನೀಡಲಾಗಿದೆ. ಇದೀಗ ಎನ್ ಸಿಬಿ ನಾಳೆ ರಿಯಾ ಚಕ್ರವರ್ತಿಯನ್ನು ವಿಚಾರಣೆಗೊಳಪಡಿಸಲಿದೆ.

LEAVE A REPLY

Please enter your comment!
Please enter your name here