oxyzen welfare trust ಇದರ ರಾಜೇಶ್ ಬಳ್ಳಾಲ್ ಮೂಡುಬಿದಿರೆ 5000/- ರೂಪಾಯಿ ಸಹಾಯವನ್ನು ಈ ಬಡ ಕುಟುಂಬಕ್ಕೆ ನೀಡುವ ಮೂಲಕ ನೆರವು..!

0

ಪಾಲಡ್ಕ ಗ್ರಾಮದ ನೆಲ್ಲಕ್ಕೆ ಕಿನ್ನಿಪದವಿನಲ್ಲಿ ವಿಧವೆ ಶಾಂತ ನಾಯ್ಕ್ ಇವರು ತಮ್ಮ ಇಬ್ಬರು ಹೆಣ್ಣು ಮಕ್ಕಳೊಂದಿಗೆ ( 9ನೇ,10 ನೇ ತರಗತಿ ) ಮನೆಯಲ್ಲಿ ಶೌಚಾಲಯ ಹಾಗೂ ಇತರ ಮೂಲಭೂತ ಸೌಕರ್ಯಗಳಿಲ್ಲದೆ ಅಸಹಾಯಕ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದು ಈ ಅಸಹಾಯಕ ಕುಟುಂಬಕ್ಕೆ ಶೌಚಾಲಯ ಹಾಗೂ ಮನೆ ದುರಸ್ತಿ ಕಾರ್ಯದಲ್ಲಿ ನಮ್ಮೊಂದಿಗೆ ಸೇವಾ ಸಂಸ್ಥೆ ಕಲ್ಲಮುಂಡ್ಕೂರು ತಂಡದ ಸದಸ್ಯರು ಆಗಮಿಸಿ ತಮ್ಮ ಸ್ವಂತ ಖರ್ಚಿನಿಂದ 6000/- ರೂಪಾಯಿ ವೆಚ್ಚದ ಮೇಲ್ಚಾವಣಿ ದುರಸ್ತಿಗೆ ಬೇಕಾದ ಸಲಕರಣೆ ಹಾಗೂ ಮೇಲ್ಚಾವಣಿ ತೆಗೆದು ದುರಸ್ತಿ ಮಾಡುವ ಮೂಲಕ ಶ್ರಮದಾನದಲ್ಲಿ ಅಸಹಾಯಕ ಕುಟುಂಬಕ್ಕೆ ನೆರವಾಗಿದ್ದಾರೆ

oxyzen welfare trust ಇದರ ರಾಜೇಶ್ ಬಳ್ಳಾಲ್ ಮೂಡುಬಿದಿರೆ 5000/- ರೂಪಾಯಿ ಸಹಾಯವನ್ನು ಈ ಬಡ ಕುಟುಂಬಕ್ಕೆ ನೀಡುವ ಮೂಲಕ ನೆರವಾಗಿರುತ್ತಾರೆ

ಶ್ರಮದಾನದಲ್ಲಿ ಭಾಗವಹಿಸಿದ ಎಲ್ಲರಿಗೂ ಬೆಳಗ್ಗಿನ ಉಪಹಾರ ಹಾಗೂ ಮಧ್ಯಾಹ್ನದ ಭೋಜನದ ವ್ಯವಸ್ಥೆಯನ್ನು ನೆಲ್ಲಕ್ಕೆ ಬಿರೊಟ್ಟುವಿನ ಧರ್ಣಪ್ಪ ನಾಯ್ಕ್ ನೀಡುವ ಮೂಲಕ ನೆರವಾಗಿರುತ್ತಾರೆ

ಈ ಪುಣ್ಯ ಕಾರ್ಯದಲ್ಲಿ ನಮ್ಮೊಂದಿದೆ ಕೈ ಜೋಡಿಸಿದ ತಮಗೆಲ್ಲರಿಗೂ ನಮ್ಮ ಸ್ಪೂರ್ತಿ ವಿಶೇಷ ಶಾಲಾ ಆಡಳಿತ ಮಂಡಳಿ ಹಾಗೂ ಶಾಲಾ ಹಿತೈಷಿಗಳ ವತಿಯಿಂದ ಹ್ರತ್ಪೂರ್ವಕ ಧನ್ಯವಾದಗಳು
🙏🏻🙏🏻🙏🏻🙏🏻🙏🏻🙏🏻🙏🏻

ಪ್ರಕಾಶ್ ಜೆ ಶೆಟ್ಟಿಗಾರ್
ಸ್ಪೂರ್ತಿ ವಿಶೇಷ ಶಾಲೆ
ಮೂಡುಬಿದಿರೆ

LEAVE A REPLY

Please enter your comment!
Please enter your name here