TRP ಹಗರಣ: 2 ಚಾನೆಲ್‌ಗಳ ಮಾಲೀಕರ ಬಂಧನ, ರಿಪಬ್ಲಿಕ್ ಟಿವಿ ಸಿಬ್ಬಂದಿ ವಿಚಾರಣೆ

0

ಮೂರು ಟಿವಿ ಚಾನೆಲ್‌ಗಳ ಟಿಆರ್‌ಪಿ ವಂಚನೆಯನ್ನು ಮುಂಬೈ ಪೊಲೀಸರು ಬಯಲು ಮಾಡಿದ್ದು, ರಿಪಬ್ಲಿಕ್‌ ಟಿವಿ ನಿರ್ದೇಶಕರಿಗೆ ಸಮನ್ಸ್ ನೀಡಲಾಗಿದೆ.

ಮುಂಬೈ ಅಪರಾಧ ವಿಭಾಗದ ಸಿಐಡಿ ತಂಡ ಆಗಲೇ ಎರಡು ಚಾನೆಲ್‌ಗಳ ಮಾಲೀಕರನ್ನು ಬಂಧಿಸಿದೆ ಹಾಗೂ ಹಗರಣದ ಸಂಬಂಧ ಹಲವು ವ್ಯಕ್ತಿಗಳಿಗೆ ಸಮನ್ಸ್‌ ಹೊರಡಿಸಿದೆ.

ಟಿವಿ ಚಾನೆಲ್‌ ವೀಕ್ಷಕರ ಪ್ರಮಾಣ ಲೆಕ್ಕ ಹಾಕಲು ಬಳಕೆಯಾಗುತ್ತಿರುವ ಮಾನದಂಡ ಟಿಆರ್‌ಪಿ. ಹಂಸ ರಿಸರ್ಚ್‌ ಗ್ರೂಪ್‌ ಪ್ರೈವೆಟ್‌ ಲಿಮಿಟೆಡ್‌ನ ಮಾಜಿ ಉದ್ಯೋಗಗಿಗಳು ಅಗತ್ಯಕ್ಕೆ ತಕ್ಕಂತೆ ಟಿಆರ್‌ಪಿ ಹೊಂದಿಸಿಕೊಡುವ ಕಾರ್ಯದಲ್ಲಿ ಕೈಜೋಡಿಸಿರುವುದು ತನಿಖೆಯಿಂದ ತಿಳಿಯಲಾಗಿದೆ.

‘ಟಿಆರ್‌ಪಿ ತಿದ್ದುಪಡಿ ಮಾಡುತ್ತಿದ್ದ ಮೂರು ಚಾನೆಲ್‌ಗಳು ರಿಪಬ್ಲಿಕ್‌ ಟಿವಿ, ಫಕ್ತ್ ಮರಾಠಿ ಹಾಗೂ ಬಾಕ್ಸ್‌ ಸಿನಿಮಾ’ ಎಂದು ಮುಂಬೈ ಪೊಲೀಸ್ ಕಮಿಷನರ್ ಪರಂ ವೀರ್ ಸಿಂಗ್‌ ಹೇಳಿದ್ದಾರೆ.

ಫಕ್ತ್‌ ಮರಾಠಿ ಮತ್ತು ಬಾಕ್ಸ್‌ ಸಿನಿಮಾ ಮರಾಠಿ ಚಾನೆಲ್‌ಗಳ ಮಾಲೀಕರನ್ನು ಐಪಿಸಿ ಸೆಕ್ಷನ್‌ 409 ಮತ್ತು 420ರ ಅಡಿಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್‌ ಕಮಿಷನರ್‌ ತಿಳಿಸಿದ್ದಾರೆ.

ರಿಪಬ್ಲಿಕ್‌ ಟಿವಿ ಎಡಿಟರ್‌-ಇನ್‌-ಚೀಫ್‌ ಅರ್ನಬ್‌ ಗೋಸ್ವಾಮಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಮಹಾರಾಷ್ಟ್ರ ಸರ್ಕಾರದ ಕುರಿತು ಮಾಡಿದ ವರದಿಗಳಿಗಾಗಿ ಚಾನೆಲ್‌ನ್ನು ಗುರಿಯಾಗಿಸಿ ನಡೆಸಿರುವ ಪ್ರಯತ್ನ ಇದು ಎಂದಿದ್ದಾರೆ.

LEAVE A REPLY

Please enter your comment!
Please enter your name here